AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್ ಜನ್ಮದಿನ: 5 ಲಕ್ಷ ರೂಪಾಯಿಗೆ ಹರಾಜಾಯ್ತು ‘ಒಜಿ’ ಚಿತ್ರದ ಮೊದಲ ಟಿಕೆಟ್

Pawan Kalyan Birthday: ಪವನ್ ಕಲ್ಯಾಣ್ ಅವರ ಜನ್ಮದಿನದ ಸಂಭ್ರಮ ಜೋರಾಗಿದೆ. ಹೀಗಿರುವಾಗಲೇ ಅವರ ಮುಂಬರುವ ಚಿತ್ರ ‘ಒಜಿ’ಯ ಮೊದಲ ಟಿಕೆಟ್ ಹರಾಜಾಗಿದೆ. ಅದು ಕೂಡ 5 ಲಕ್ಷ ರೂಪಾಯಿಗಳಿಗೆ. ಈ ಹಣ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ನಿಧಿಗೆ ಸೇರಲಿದ್ದು, ಸಾರ್ವಜನಿಕ ಕಾರ್ಯಗಳಿಗೆ ಬಳಸಲಾಗುತ್ತದೆ.

ಪವನ್ ಕಲ್ಯಾಣ್ ಜನ್ಮದಿನ: 5 ಲಕ್ಷ ರೂಪಾಯಿಗೆ ಹರಾಜಾಯ್ತು ‘ಒಜಿ’ ಚಿತ್ರದ ಮೊದಲ ಟಿಕೆಟ್
ಪವನ್ ಕಲ್ಯಾಣ್
ರಾಜೇಶ್ ದುಗ್ಗುಮನೆ
|

Updated on: Sep 02, 2025 | 7:40 AM

Share

ಪವನ್ ಕಲ್ಯಾಣ್ (Pawan Kalyan) ಅವರಿಗೆ ಇಂದು (ಸೆಪ್ಟೆಂಬರ್ 2) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರು ಈಗ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಕೊಂಡಿದ್ದಾರೆ. ಅವರು ಕಷ್ಟಪಟ್ಟು ಸಿನಿಮಾ ಕೆಲಸಗಳಿಗೆ ಸಮಯ ಮೀಸಲಿಡಬೇಕಿದೆ. ಹೀಗಿರುವಾಗಲೇ ಹರಾಜಿನಲ್ಲಿ ಅವರ ಸಿನಿಮಾ ‘ಒಜಿ’ ಟಿಕೆಟ್ ಬರೋಬ್ಬರಿ 5 ಲಕ್ಷ ರೂಪಾಯಿಗೆ ಮಾರಾಟ ಆಗಿದೆ.

‘ಒಜಿ’ ಸಿನಿಮಾದ ಶೂಟ್ ಪೂರ್ಣಗೊಂಡಿದ್ದು, ರಿಲೀಸ್​ಗೆ ಸಿದ್ಧತೆ ನಡೆಯುತ್ತಿದೆ. ಅವರ ಬರ್ತ್​ಡೇ ಪ್ರಯುಕ್ತ ‘ಒಜಿ’ ಸಿನಿಮಾದ ಮೊದಲ ಟಿಕೆಟ್ ಹರಾಜಿನಲ್ಲಿ ಮಾರಾಟ ಆಗಿದೆ. ಇದನ್ನು ಅಭಿಮಾನಿಯೋರ್ವ ಖರೀದಿ ಮಾಡಿದ್ದಾನೆ. ಅದೂ ನೂರೋ, ಇನ್ನೂರೋ ರೂಪಾಯಿಗೆ ಅಲ್ಲ, ಬರೋಬ್ಬರಿ 5 ಲಕ್ಷ ರೂಪಾಯಿಗೆ. ಈ ವಿಚಾರ ಟಾಲಿವುಡ್​ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಇದು ಪವನ್ ಕಲ್ಯಾಣ್ ಮೇಲಿನ ಕ್ರೇಜ್ ತೋರಿಸುತ್ತದೆ.

ಹಾಗಾದರೆ ಒಜಿ ಸಿನಿಮಾದ ಮೊದಲ ಟಿಕೆಟ್ ಖರೀದಿಸಿದ್ದು ಯಾರು? ಆ ಪ್ರಶ್ನೆಗೂ ಉತ್ತರ ಇದೆ. ಉತ್ತರ ಅಮೆರಿಕದ ಟೀಮ್ ಕಲ್ಯಾಣ್ ಸೇನಾ ಮೊದಲ ಟಿಕೆಟ್ ಖರೀದಿ ಮಾಡಿದೆ. ಇತ್ತೀಚೆಗೆ ಈ ಹರಾಜು ಪ್ರಕ್ರಿಯೆ ನಡೆದಿದೆ. ವಿಶೇಷ ಎಂದರೆ ಈ ಹಣ ಚಿತ್ರತಂಡದ ಪಾಲಾಗುತ್ತಿಲ್ಲ. ಬದಲಿಗೆ, ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಫಂಡ್​ಗೆ ಸೇರಲಿದೆ. ನಂತರ ಇದು ಸಾರ್ವಜನಿಕ ಕೆಲಸಕ್ಕೆ ಬಳಕೆ ಆಗಲಿದೆ.

ಇದನ್ನೂ ಓದಿ
Image
ಮಲಯಾಳಂ ಸಿನಿಮಾದಲ್ಲಿ ಬೆಂಗಳೂರು ಯುವತಿಯರಿಗೆ ಡಗಾರ್ ಪದ ಬಳಕೆ
Image
‘ನನ್ನ ಗೇಲಿ ಮಾಡುವುದರಿಂದ ನಿಮಗೆ ಊಟ ಸಿಗುತ್ತಿದೆ ಎಂದರೆ ಖುಷಿ’; ಸಲ್ಮಾನ್
Image
‘ಸು ಫ್ರಮ್ ಸೋ ಅಬ್ಬರ’; 38ನೇ ದಿನ ದೊಡ್ಡ ಮೊತ್ತ ಬಾಚಿದ ಸಿನಿಮಾ
Image
ಗರ್ಲ್​ಫ್ರೆಂಡ್​ಗೆ ಮನೆ ಕೊಟ್ಟು ಬಾಡಿಗೆ ಪಡೆದ ಹೃತಿಕ್ ರೋಷನ್

‘ಒಜಿ’ ಸಿನಿಮಾ ರಿಲೀಸ್ ನಿರಂತರವಾಗಿ ವಿಳಂಬ ಆಗುತ್ತಲೇ ಬಂದಿದೆ. ಈ ಸಿನಿಮಾ ಈಗ ಸೆಪ್ಟೆಂಬರ್ 25ರಂದು ತೆರೆಗೆ ಬರುತ್ತಿದೆ. ಅಂದರೆ ಸಿನಿಮಾ ರಿಲೀಸ್​ಗೆ ಬಾಕಿ ಇರೋದು ಕೇವಲ ಮೂರು ದಿನಗಳು ಮಾತ್ರ. ಈ ಚಿತ್ರ ಬಿಗ್ ಬಜೆಟ್​ನಲ್ಲಿ ಸಿದ್ಧವಾಗಿದ್ದು ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ‘ಹರಿ ಹರ ವೀರ ಮಲ್ಲು’ ಫ್ಲಾಪ್, ಬ್ರಿಲಿಯಂಟ್ ಐಡಿಯಾ ಮಾಡಿದ ಪವನ್ ಕಲ್ಯಾಣ್

ಇತ್ತೀಚೆಗೆ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈಗ ‘ಒಜಿ’ ಸಿನಿಮಾ ಮೂಲಕ ಅವರು ಮತ್ತೆ ಗೆಲುವಿನ ಲಯಕ್ಕೆ ಮರಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.