ದಕ್ಷಿಣ ಭಾರತ ಚಿತ್ರರಂಗದ ಮೇಲೆ ಹೂಡಿಕೆ ಮಾಡಲಿರುವ ನೆಟ್​​ಫ್ಲಿಕ್ಸ್​

Netflix shows: ನೆಟ್​​ಫ್ಲಿಕ್ಸ್​ ಈಗಾಗಲೇ ಭಾರತದಲ್ಲಿ ವೆಬ್ ಸೀರೀಸ್ ನಿರ್ಮಾಣ ಆರಂಭಿಸಿ ಕೆಲವು ವರ್ಷಗಳಾಗಿವೆ. ಹಿಂದಿಯ ಕೆಲವು ವೆಬ್ ಸರಣಿಗಳನ್ನು ನೆಟ್​ಫ್ಲಿಕ್ಸ್​ ನಿರ್ಮಾಣ ಮಾಡಿದೆ. ಆದರೆ ಇದೀಗ ದಕ್ಷಿಣ ಭಾರತದ ಮೇಲೂ ಹೂಡಿಕೆ ಮಾಡಲು ನೆಟ್​ಫ್ಲಿಕ್ಸ್​ ಮುಂದಾಗಿದೆ. ದಕ್ಷಿಣ ಭಾರತದಲ್ಲಿ ವೆಬ್ ಸರಣಿ ಸೇರಿದಂತೆ ಇನ್ನಿತರೆ ಕಂಟೆಂಟ್ ನಿರ್ಮಾಣಕ್ಕೆ ನೆಟ್​​ಫ್ಲಿಕ್ಸ್​ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಲಿದೆ.

ದಕ್ಷಿಣ ಭಾರತ ಚಿತ್ರರಂಗದ ಮೇಲೆ ಹೂಡಿಕೆ ಮಾಡಲಿರುವ ನೆಟ್​​ಫ್ಲಿಕ್ಸ್​
Netflix

Updated on: Nov 21, 2025 | 6:09 PM

ನೆಟ್​ಫ್ಲಿಕ್ಸ್​ (Netflix), ವಿಶ್ವದ ಶ್ರೀಮಂತ ಮತ್ತು ಲಾಭದಾಯಕ ಒಟಿಟಿಗಳಲ್ಲಿ ಒಂದು. ಪ್ರತಿ ತಿಂಗಳೂ ಚಂದಾ ಶುಲ್ಕ ಪಡೆಯುವ ನೆಟ್​ಫ್ಲಿಕ್ಸ್​, ಸಹ ಸ್ಪರ್ಧಿಗಳಾದ ಅಮೆಜಾನ್, ಜಿಯೋ ಹಾಟ್​​ಸ್ಟಾರ್​​ ಇತರೆಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದ ಸೇವೆಯನ್ನೇನೂ ನೀಡುತ್ತಿಲ್ಲ. ಬದಲಿಗೆ ಅವೇ ಬಿಡುಗಡೆ ಆದ ಸಿನಿಮಾಗಳನ್ನು ಖರೀದಿ ಮಾಡಿ ಒಟಿಟಿಯಲ್ಲಿ ಸ್ಟ್ರೀಂ ಮಾಡುತ್ತಿದೆ. ಜಿಯೋ ಹಾಟ್​​ಸ್ಟಾರ್, ಅಮೆಜಾನ್ ಪ್ರೈಂ ಸಹ ಅದೇ ಕಾರ್ಯ ಮಾಡುತ್ತಿದ್ದು, ಅವು ನೆಟ್​ಫ್ಲಿಕ್ಸ್​​ಗೆ ಹೋಲಿಸಿದರೆ ಬಹಳ ಕಡಿಮೆ ಶುಲ್ಕದಲ್ಲಿ ಲಭ್ಯವಿದೆ. ಆದರೆ ಇದೀಗ ನೆಟ್​ಫ್ಲಿಕ್ಸ್​, ಗೇಮ್ ಬದಲಿಸುವ ಆಲೋಚನೆಯಲ್ಲಿದೆ.

ನೆಟ್​​ಫ್ಲಿಕ್ಸ್​ ಈಗಾಗಲೇ ಭಾರತದಲ್ಲಿ ವೆಬ್ ಸೀರೀಸ್ ನಿರ್ಮಾಣ ಆರಂಭಿಸಿ ಕೆಲವು ವರ್ಷಗಳಾಗಿವೆ. ಹಿಂದಿಯ ಕೆಲವು ವೆಬ್ ಸರಣಿಗಳನ್ನು ನೆಟ್​ಫ್ಲಿಕ್ಸ್​ ನಿರ್ಮಾಣ ಮಾಡಿದೆ. ಆದರೆ ಇದೀಗ ದಕ್ಷಿಣ ಭಾರತದ ಮೇಲೂ ಹೂಡಿಕೆ ಮಾಡಲು ನೆಟ್​ಫ್ಲಿಕ್ಸ್​ ಮುಂದಾಗಿದೆ. ದಕ್ಷಿಣ ಭಾರತದಲ್ಲಿ ವೆಬ್ ಸರಣಿ ಸೇರಿದಂತೆ ಇನ್ನಿತರೆ ಕಂಟೆಂಟ್ ನಿರ್ಮಾಣಕ್ಕೆ ನೆಟ್​​ಫ್ಲಿಕ್ಸ್​ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಲಿದೆ. ಇದರ ಜೊತೆಗೆ ಇನ್ನು ಮುಂದೆ ಭಾರಿ ಮೊತ್ತ ವ್ಯಯಿಸಿ ದಕ್ಷಿಣ ಭಾರತದ ಸಿನಿಮಾಗಳನ್ನು ಖರೀದಿ ಮಾಡದಿರಲು ಸಹ ನೆಟ್​​ಫ್ಲಿಕ್ಸ್​ ತೀರ್ಮಾನ ಮಾಡಿದೆ.

ನೆಟ್​​ಫ್ಲಿಕ್ಸ್​ ಕಳೆದ ಕೆಲ ವರ್ಷಗಳಿಂದ ದಕ್ಷಿಣ ಚಿತ್ರರಂಗದ ಮೇಲೆ ಭಾರಿ ಹೂಡಿಕೆ ಮಾಡಿದೆ. ಕೆಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನು ಖರೀದಿ ಮಾಡಿ ಒಟಿಟಿಯಲ್ಲಿ ಸ್ಟ್ರೀಂ ಮಾಡಿದೆ. ಕೆಲವು ಸಿನಿಮಾಗಳು ಲಾಭ ಮಾಡಿಕೊಟ್ಟರೆ ಕೆಲವು ಭಾರಿ ನಷ್ಟ ಉಂಟು ಮಾಡಿವೆ. ಇದೇ ಕಾರಣಕ್ಕೆ ಇನ್ನು ಮುಂದೆ ದಕ್ಷಿಣದ ಸಿನಿಮಾಗಳ ಮೇಲೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡದಿರಲು ನಿರ್ಧರಿಸಿದ್ದು, ಅದರ ಬದಲಿಗೆ ಸ್ವಂತವಾಗಿ ವೆಬ್ ಸರಣಿ ನಿರ್ಮಿಸಲು ತೀರ್ಮಾನಿಸಿದೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಹಿಟ್ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

ಪ್ರಸ್ತುತ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಮಾತ್ರವೇ ವೆಬ್ ಸರಣಿ ನಿರ್ಮಿಸಲು ಅಥವಾ ವೆಬ್ ಸರಣಿ ನಿರ್ಮಾಣ ಮಾಡುವವರಿಗೆ ಬೆಂಬಲ ನೀಡಲು ನೆಟ್​ಫ್ಲಿಕ್ಸ್​ ನಿರ್ಧರಿಸಿದ್ದು, ಈಗಾಗಲೇ ತೆಲುಗು ಹಾಗೂ ತಮಿಳಿನ ಆರು ವೆಬ್ ಸರಣಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ದಕ್ಷಿಣ ಭಾರತದ ಕಂಟೆಂಟ್​​ಗೆ ವಿಶ್ವ ಮಟ್ಟದಲ್ಲಿ ಬೇಡಿಕೆ ಇರುವುದನ್ನು ಗುರುತಿಸಿರುವ ನೆಟ್​​ಫ್ಲಿಕ್ಸ್​​ ಅದರ ಲಾಭವನ್ನು ಪಡೆಯಲು ಮುಂದಾಗಿದೆ.

ಗುಲ್ಷನ್ ದೇವಯ್ಯ, ಮಾಧವನ್ ನಟಿಸಿರುವ ‘ಲೆಗಸಿ’, ಮರ್ಡರ್ ಮಿಸ್ಟರ್ ಕತೆಯ ‘ಸ್ಟೀಫನ್’, ಹಾಸ್ಯ ಪ್ರಧಾನ ‘ಸೂಪರ್ ಸುಬ್ಬು’, ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ‘ತಕ್ಷಕುಡು’, ‘ಲವ್’, ‘ಮೇಡ್ ಇನ್ ಕೊರಿಯಾ’ ವೆಬ್ ಸರಣಿಗಳನ್ನು ಈಗಾಗಲೇ ನೆಟ್​ಫ್ಲಿಕ್ಸ್ ಘೋಷಿಸಿದ್ದು, ಶೀಘ್ರವೇ ಸ್ಟ್ರೀಮಿಂಗ್ ಸಹ ಆರಂಭಿಸಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ