ಈ ವಾರ ಒಟಿಟಿಗೆ ಹಿಟ್ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?
This week OTT release: ಚಿತ್ರಮಂದಿರಗಳಲ್ಲಿ ಈ ವಾರ ದೊಡ್ಡ ಸಿನಿಮಾಗಳು ಯಾವುದೂ ಬಿಡುಗಡೆ ಆಗಿಲ್ಲ. ಆದರೆ ಕಳೆದ ಕೆಲ ವಾರಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆದ, ಗಮನ ಸೆಳೆದ ಕೆಲ ಒಳ್ಳೆಯ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ಈ ವಾರ ಒಟಿಟಿಗೆ ಬಿಡುಗಡೆ ಆದ ಸಿನಿಮಾಗಳ ಪಟ್ಟಿ ಇಲ್ಲಿದೆ. ಪಟ್ಟಿಯಲ್ಲಿ ಕನ್ನಡ ಸಿನಿಮಾ ಸಹ ಇವೆ...

Ott Release This Week1
- ಯುವರಾಜ್ ಕುಮಾರ್ ನಟಿಸಿ ರೋಹಿತ್ ಪದಕಿ ನಿರ್ದೇಶನ ಮಾಡಿರುವ ‘ಎಕ್ಕ’ ಸಿನಿಮಾ ಜುಲೈ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ಸಿನಿಮಾದ ಹಾಡುಗಳು ಸಹ ಹಿಟ್ ಆಗಿದ್ದವು. ಅನಿವಾರ್ಯ ಕಾರಣಗಳಿಂದಾಗಿ ತಡವಾಗಿ ಒಟಿಟಿಗೆ ಬಂದಿದೆ ಈ ಸಿನಿಮಾ. ಜೀ5 ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
- ತಮಿಳಿನ ಯುವ ನಾಯಕ ಪ್ರದೀಪ್ ರಂಗನಾಥನ್ ನಟಿಸಿರುವ ‘ಡ್ಯೂಡ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಸಿನಿಮಾ 100 ಕೋಟಿಗೂ ಹೆಚ್ಚಿನ ಮೊತ್ತ ಗಳಿಸಿದೆ. ಇದೀಗ ಈ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ಇದೇ ವಾರ ಈ ಸಿನಿಮಾ ನೆಟ್ಫ್ಲಿಕ್ಸ್ಗೆ ಬಂದಿದೆ. ಕನ್ನಡದಲ್ಲಿಯೂ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.
- ಐಬಿ ಒಂದರಲ್ಲಿ ದೆವ್ವವಿದೆ ಎಂದು ಸುದ್ದಿ, ಆ ಐಬಿಯನ್ನು ಈಗ ಪೊಲೀಸ್ ಠಾಣೆಯನ್ನಾಗಿ ಬದಲಾವಣೆ ಮಾಡಲಾಗಿದೆ. ದೆವ್ವ vs ಪೊಲೀಸ್ ಆಟ ಹೇಗೆ ನಡೆಯುತ್ತೆ, ಕೊನೆಗೆ ದೆವ್ವ ಗೆಲ್ಲುತ್ತಾ ಪೊಲೀಸರಾ? ‘ಇನ್ಸ್ಪೆಕ್ಷನ್ ಬಂಗ್ಲೊ’ ಹೆಸರಿನ ಮಲಯಾಳಂ ಸಿನಿಮಾ ಜೀ5ನಲ್ಲಿ ಲಭ್ಯವಿದೆ.
- ಕಿರಣ್ ಅಬ್ಬವರನ್ ನಟಿಸಿರುವ ‘ಕೆ ರ್ಯಾಂಪ್’ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಉಡಾಳ ಯುವಕನೊಬ್ಬನ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಸಾಕಷ್ಟು ಹಾಸ್ಯ ದೃಶ್ಯಗಳಿವೆ. ಈ ಸಿನಿಮಾ ಆಹಾ ತೆಲುಗು ಒಟಿಟಿಯಲ್ಲಿ ಬಿಡುಗಡೆ ಆಗಿದೆ.
- ‘ಡೆಲ್ಲಿ ಕ್ರೈಂ’ ವೆಬ್ ಸರಣಿ ಪ್ರಖ್ಯಾತ ಎಮ್ಮಿ ಪ್ರಶಸ್ತಿ ಗೆದ್ದ ಭಾರತೀಯ ವೆಬ್ ಸರಣಿ. ಇದೀಗ ಈ ವೆಬ್ ಸರಣಿಯ ಮೂರನೇ ಸೀಸನ್ ಬಿಡುಗಡೆ ಆಗಿದೆ. ಈ ಥ್ರಿಲ್ಲರ್ ವೆಬ್ ಸರಣಿಯನ್ನು ವೀಕ್ಷಕರು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.
- ‘ಜಾಲಿ ಎಲ್ಎಲ್ಬಿ’ ಬಾಲಿವುಡ್ನ ಬಲು ಜನಪ್ರಿಯ ಹಾಸ್ಯ ಮಿಶ್ರಿತ ಕೊರ್ಟ್ ಡ್ರಾಮಾ ಸಿನಿಮಾ. ಕೆಲ ವಾರಗಳ ಹಿಂದಷ್ಟೆ ಈ ಸರಣಿಯ ಮೂರನೇ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾನಲ್ಲಿ ಅರ್ಶದ್ ವಾರ್ಸಿ ಮತ್ತು ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸಿದ್ದರು. ಇದೀಗ ಈ ಸಿನಿಮಾ ನೆಟ್ಫ್ಲಿಕ್ಸ್ ಮತ್ತು ಜಿಯೋ ಹಾಟ್ಸ್ಟಾರ್ ಎರಡರಲ್ಲೂ ಬಿಡುಗಡೆ ಆಗಿದೆ.
- ‘ಜುರಾಸಿಕ್ ವರ್ಲ್ಡ್: ರೀ ಬರ್ತ್’ ಸಿನಿಮಾ ಕೆಲ ವಾರಗಳ ಹಿಂದೆ ಬಿಡುಗಡೆ ಆದ ಹಾಲಿವುಡ್ ಸಿನಿಮಾ. ಸ್ಕಾರ್ಲೆಟ್ ಜೋನ್ಸ್ ಸೇರಿದಂತೆ ಕೆಲವು ಸ್ಟಾರ್ ಹಾಲಿವುಡ್ ನಟರು ನಟಿಸಿರುವ ಸಿನಿಮಾ ಇದಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಗಳಿಕೆ ಮಾಡಿದೆ. ಇದೀಗ ಈ ಸಿನಿಮಾ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದೆ.











