ಈ ವಾರ ಒಟಿಟಿಗೆ ಬಂದಿವೆ ಕೆಲ ಜಬರ್ದಸ್ತ್ ಸಿನಿಮಾಗಳು, ಯಾವುವವು?
OTT Release movies: ಈ ವಾರ ಚಿತ್ರಮಂದಿರದಲ್ಲಿ ಬಿಡುಗಡೆ ಆದ ಸಿನಿಮಾಗಳು ಅಷ್ಟೇನೂ ಸದ್ದು ಮಾಡುತ್ತಿಲ್ಲ. ಕಮಲ್ ಹಾಸನ್ರ ‘ಥಗ್ ಲೈಫ್’ ಸಿನಿಮಾ ಬಹಳ ಕೆಟ್ಟದಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ‘ಹಂಗಾಮ 5’ ಬಿಡುಗಡೆ ಆಗಿದೆಯಾದರೂ ಅದರ ಬಗ್ಗೆಯೂ ಮಿಶ್ರ ಪ್ರತಿಕ್ರಿಯೆಗಳು. ಕನ್ನಡದ ದೊಡ್ಡ ಸಿನಿಮಾ ಈ ವಾರ ಬಂದಿಲ್ಲ.

Ott Release Date
- ರಾಜ್ಕುಮಾರ್ ರಾವ್, ತೃಪ್ತಿ ದಿಮ್ರಿ ನಟನೆಯ ‘ಭೂಲ್ ಚುಕ್ ಮಾಫ್’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಇದೇ ವಾರ ತೆರೆಗೆ ಬಂದಿದೆ. ಒಟಿಟಿಗೆ ನೇರವಾಗಿ ಬಿಡುಗಡೆ ಆಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಚಿತ್ರಮಂದಿರದಲ್ಲಿ ಫ್ಲಾಫ್ ಆದ ಬಳಿಕ ಒಟಿಟಿಗೆ ಬಂದಿದೆ.
- ಸನ್ನಿ ಡಿಯೋಲ್ ನಟನೆಯ ಆಕ್ಷನ್ ಸಿನಿಮಾ ‘ಜಾಟ್’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಕಳೆದ ವಾರವೇ ಒಟಿಟಿಗೆ ಬರಬೇಕಿದ್ದ ಈ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
- ರಜನೀಕಾಂತ್ ನಟನೆಯ ‘ಲಾಲ್ ಸಲಾಮ್’ ಸಿನಿಮಾ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಟ್ಟರ್ ಫ್ಲಾಪ್ ಆಗಿತ್ತು. ರಜನೀಕಾಂತ್ ಸಿನಿಮಾ ಆದರೂ ಯಾವ ಒಟಿಟಿಗಳೂ ಸಹ ಖರೀದಿ ಮಾಡಿರಲಿಲ್ಲ. ಆದರೆ ಇದೀಗ ಕೊನೆಗೆ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಇದೇ ವಾರ ಬಿಡುಗಡೆ ಆಗಿದೆ.
- ಕನ್ನಡದ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಾಡಕ್ಕನ್’ ತಮಿಳು ವೆಬ್ ಸರಣಿ ಇದೇ ವಾರ ಒಟಿಟಿಗೆ ಬಂದಿದೆ. ಕೇರಳದಲ್ಲಿ ನಡೆಯುವ ಸರಣಿ ಕೊಲೆಗಳ ಜಾಡು ಹಿಡಿದು ಹೋಗುವ ಪೊಲೀಸ್ ಅಧಿಕಾರಿಯ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ.
- ಮಲಯಾಳಂ ಸಿನಿಮಾ ‘ಅಲಪುಳ ಜಿಮ್ಖಾನಾ’ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಬಾಕ್ಸಿಂಗ್ ಕುರಿತ ಕತೆಯನ್ನು ಹೊಂದಿರುವ ಈ ಸಿನಿಮಾ ಸಾಧಾರಣ ಯಶಸ್ಸು ಗಳಿಸಿತ್ತು. ಇದೀಗ ಈ ಸಿನಿಮಾ ಸೋನಿ ಲಿವ್ನಲ್ಲಿ ಬಿಡುಗಡೆ ಆಗಿದೆ.









