- TV9 Kannada Entertainment News OTT News OTT Release this week from October 21 to October 24 here is the list
ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು, ಕನ್ನಡದ ವೆಬ್ ಸರಣಿಯೂ ಇದೆ
OTT Release this week: ಈ ವಾರ ಒಟಿಟಿಗೆ ಕೆಲ ಭರ್ಜರಿ ಸಿನಿಮಾಗಳು ಎಂಟ್ರಿ ಕೊಟ್ಟಿವೆ. ಜೊತೆಗೆ ಕೆಲವು ಒಳ್ಳೆಯ ವೆಬ್ ಸರಣಿಗಳು ಸಹ ಈ ವಾರ ರಿಲೀಸ್ ಆಗುತ್ತಿದ್ದು, ವಿಶೇಷವಾಗಿ ಕನ್ನಡದ ಪ್ರೇಕ್ಷಕರಿಗೂ ಸಹ ಈ ವಾರ ವೀಕ್ಷಣೆಗೆ ಕಂಟೆಂಟ್ ಇದೆ. ಈ ವಾರ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ ನೋಡಿ...
Updated on: Oct 24, 2026 | 3:07 PM

ಕನ್ನಡದ ಬಲು ಜನಪ್ರಿಯ ವೆಬ್ ಸರಣಿ ‘ಅಯ್ಯನ ಮನೆ’ ವೆಬ್ ಸರಣಿಯ ಎರಡನೇ ಸೀಸನ್ ‘ಅಯ್ಯನ ಮನೆ ಸೀಸನ್ 2’ ಈ ವಾರ ಒಟಿಟಿಗೆ ಬಂದಿದೆ. ರಮೇಶ್ ಇಂದಿರಾ ನಿರ್ದೇಶಿಸಿ, ಖುಷಿ ರವಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಅಯ್ಯನ ಮನೆ ಸೀಸನ್ 2’ನ್ನು ಜೀ5ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಕೀರ್ತಿ ಸುರೇಶ್ ನಟಿಸಿ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿರುವ ‘ಡೋರತಿ’ ಸಿನಿಮಾ ಬಿಡುಗಡೆ ಆದಾಗ ಕಂಟೆಂಟ್ ಕಾರಣಕ್ಕೆ ಸಾಕಷ್ಟು ವಿವಾದ ಎಬ್ಬಿಸಿತ್ತು. ಸಿನಿಮಾನಲ್ಲಿ ಎಲ್ಜಿಬಿಟಿಕ್ಯುಗೆ ಸಂಬಂಧಿಸಿದ ಅಂಶಗಳಿದ್ದವು. ಇದೀಗ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿದೆ.

ತೆಲುಗಿನ ಸ್ಟಾರ್ ನಟ ನಾನಿ ನಟಿಸಿರುವ ‘ದಿ ಪ್ಯಾರಡೈಸ್’ ಸಿನಿಮಾ ಕೆಲವೇ ದಿನಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಸಿನಿಮಾ ಇದೀಗ ಒಟಿಟಿಗೆ ಬಂದಿದ್ದು, ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ನೋಡಬಹುದಾಗಿದೆ.

‘ಧೂಮಕೇತು’ ಮಲಯಾಳಂನ ಟೈಮ್ ಟ್ರಾವೆಲ್ ಕತೆಯುಳ್ಳ ಸಿನಿಮಾ. ಟೈಮ್ ಟ್ರಾವೆಲ್ ಕತೆಯಾದರೂ ಸಾಕಷ್ಟು ಹಾಸ್ಯವೂ ಒಳಗೊಂಡ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಈ ವಾರ ಬಿಡುಗಡೆ ಆಗಿದೆ.

‘ದಿ ಲಿಜೆಂಡ್ ಆಫ್ ಹನುಮಾನ್’ ಆಂಜನೇಯ ಸ್ವಾಮಿಯ ಕತೆಯನ್ನು ಹೇಳುವ ಅನಿಮೇಟೆಡ್ ವೆಬ್ ಸರಣಿಯಾಗಿದ್ದು, ಈ ಸರಣಿಯ ಏಳನೇ ಸೀಸನ್ ಇದೀಗ ಜಿಯೋ ಹಾಟ್ಸ್ಟಾರ್ನಲ್ಲಿ ಈ ವಾರ ರಿಲೀಸ್ ಆಗಿದೆ. ಗುಣಮಟ್ಟದ ಆನಿಮೇಷನ್ ಇರುವ ವೆಬ್ ಸರಣಿ ಇದಾಗಿದೆ.

ಮನೋಜ್ ತಿವಾರಿ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ಆಕ್ಷನ್ ಭರಿತ ಸಿನಿಮಾ ‘ಗಜಬ್ ರಾತ್’ ನೇರವಾಗಿ ಒಟಿಟಿಗೆಯಲ್ಲಿ ರಿಲೀಸ್ ಆಗಿದೆ. ಈ ಸಿನಿಮಾದ ಟೈಟಲ್ ಕಾರಣಕ್ಕೆ ಸಾಕಷ್ಟು ವಿವಾದ ಎಬ್ಬಿಸಿತ್ತು. ಇದೀಗ ಹೆಸರು ಬದಲಾವಣೆಗೊಂಡು ಒಟಿಟಿಗೆ ಬಂದಿದ್ದು, ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ರಿಲೀಸ್ ಆಗಿದೆ.

ಜನಪ್ರಿಯ ಹೈಸ್ಟ್ (ದರೋಡೆ) ವೆಬ್ ಸರಣಿಗಳಲ್ಲಿ ಒಂದಾಗಿರುವ ‘ಲುಪಿನ್’ನ ನಾಲ್ಕನೇ ಸೀಸನ್ ಈ ವಾರ ರಿಲೀಸ್ ಆಗಿದೆ. ಈ ವೆಬ್ ಸರಣಿಯನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



