
ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲಾ’ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಗಳಿಸಿತ್ತು. ಪ್ರಿಯದರ್ಶನ್ ನಿರ್ದೇಶನದ ಈ ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನು ಸಹ ಮಾಡಲಾಗಿತ್ತು. ಅಕ್ಷಯ್, ಪರೇಶ್ ರಾವಲ್, ರಾಜ್ಪಾಲ್ ಯಾದವ್ ಸೇರಿದಂತೆ ಇತರರು ನಟಿಸಿರುವ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಹೆಸರುವಾಸಿ ಆಗಿರುವ ಮಲಯಾಳಂ ಚಿತ್ರರಂಗದಿಂದ ಮತ್ತೊಂದು ಒಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಬಂದಿದೆ. ಶೇನ್ ನಿಗಮ್ ಪೊಲೀಸ್ ಪಾತ್ರದಲ್ಲಿ ನಟಿಸಿರುವ ‘ದೃಢಂ’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ಮಲಯಾಳಂ, ಕನ್ನಡ ಮತ್ತು ಇತರೆ ಭಾಷೆಗಳಲ್ಲಿ ನೋಡಬಹುದಾಗಿದೆ.

ಸೂರ್ಯ ಮತ್ತು ತ್ರಿಷಾ ಕೃಷ್ಣನ್ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಕರುಪ್ಪು’ ಇದೀಗ ಒಟಿಟಿಗೆ ಬರುತ್ತಿದೆ. ಸಿನಿಮಾ ಬಿಡುಗಡೆ ಆದ ಒಂದು ತಿಂಗಳಿಗೆ ಮುಂಚಿತವಾಗಿಯೇ ಸಿನಿಮಾ ಒಟಿಟಿಗೆ ಬಂದಿದೆ. ಈ ಸೂಪರ್ ಹಿಟ್ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

ಏಪ್ರಿಲ್ 24 ರಂದು ವಿಶ್ವದಾದ್ಯಂತ ಬಿಡುಗಡೆ ಆಗಿ ಭಾರಿ ದೊಡ್ಡ ಕಲೆಕ್ಷನ್ ಮಾಡಿರುವ ‘ಮೈಖಲ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಮೈಖಲ್ ಜಾಕ್ಸನ್ ಜೀವನ ಆಧರಿಸಿದ ಈ ಸಿನಿಮಾವನ್ನು ಅಮೆಜಾನ್ ಪ್ರೈಂ, ಆಪಲ್ ಟಿವಿ ಪ್ಲಸ್ ಮತ್ತು ಬಿಎಂಎಸ್ ಸ್ಟ್ರೀಮ್ಗಳಲ್ಲಿ ವೀಕ್ಷಿಸಬಹುದಾಗಿದೆ. ಆದರೆ ರೆಂಟ್ ಆಧಾರದಲ್ಲಿ ಮಾತ್ರವೇ ಸಿನಿಮಾ ಲಭ್ಯವಿದೆ.

ಫುಟ್ಬಾಲ್ ವಿಶ್ವಕಪ್ ಶುರುವಾಗಿದೆ. ಇದೇ ಸಮಯದಲ್ಲಿ ನಾರ್ವೆಯ ಫುಟ್ಬಾಲ್ ತಂಡದ ಕುರಿತಾಗಿ ಒಂದು ಡಾಕ್ಯುಮೆಂಟರಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ‘ನಾರ್ವೆ: ದಿ ಡಾರ್ಕ್ ಹಾರ್ಸ್’ ಅದರ ಹೆಸರು. ನಾರ್ವೆ ತಂಡವು 28 ವರ್ಷಗಳ ಬಳಿಕ ವಿಶ್ವಕಪ್ ಆಡಲು ಅರ್ಹತೆ ಗಿಟ್ಟಿಸಿಕೊಂಡಿದೆ. ಇದರ ಕುರಿತಾಗಿಯೇ ಈ ಎರಡು ಭಾಗಗಳ ಡಾಕ್ಯುಮೆಂಟರಿ ಬೆಳಕು ಚೆಲ್ಲಲಿದೆ

1970 ರಲ್ಲಿ ಸ್ಥಿತವಾಗಿರುವ ಕತೆಯನ್ನು ಒಳಗೊಂಡಿರುವ ಹಿಂದಿ ವೆಬ್ ಸರಣಿ ‘ರಾಖ್’ ಇದೀಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಸರಣಿ ಕೊಲೆಗಳು ಅದರ ಹಿಂದಿರುವ ವ್ಯಕ್ತಿ, ಕಾರಣಗಳನ್ನು ಹುಡುಕಿಕೊಂಡು ಹೋಗುವ ಕತೆ ಇದಾಗಿದೆ. ಸೊನಾಲಿ ಬೇಂದ್ರೆ, ಅಲಿ ಫಜಲ್, ಆಮಿರ್ ಬಷೀರ್ ಅವರುಗಳು ಇದರಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ಇದನ್ನು ನೋಡಬಹುದಾಗಿದೆ.
Published On - 3:33 pm, Sat, 13 June 26