‘ಫಾರ್ಮಾ’ ವೆಬ್​ ಸಿರೀಸ್​ನಲ್ಲಿ ನಿವಿನ್​ ಪೌಲಿ; ಮೊದಲ ಬಾರಿಗೆ ಒಟಿಟಿ ಲೋಕಕ್ಕೆ ಕಾಲಿಟ್ಟ ನಟ

|

Updated on: Oct 20, 2023 | 1:04 PM

‘ನೂರಾರು ಸತ್ಯ ಘಟನೆಗಳಿಂದ ಪ್ರೇರಿತವಾಗಿ ತಯಾಗುತ್ತಿರುವ ಈ ವೆಬ್​​ ಸಿರೀಸ್​ ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿದೆ’ ಎಂದು ನಿರ್ದೇಶಕ ಪಿಆರ್​ ಅರುಣ್​ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ನಿವಿನ್ ಪೌಲಿ ಅವರು ಒಟಿಟಿ ಪ್ಲಾಟ್​ಫಾರ್ಮ್​ಗೆ ಕಾಲಿಡುತ್ತಿರುವುದರಿಂದ ‘ಫಾರ್ಮಾ’ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಫಾರ್ಮಾ’ ವೆಬ್​ ಸಿರೀಸ್​ನಲ್ಲಿ ನಿವಿನ್​ ಪೌಲಿ; ಮೊದಲ ಬಾರಿಗೆ ಒಟಿಟಿ ಲೋಕಕ್ಕೆ ಕಾಲಿಟ್ಟ ನಟ
ನಿವಿನ್​ ಪೌಲಿ
Follow us on

ಜನಪ್ರಿಯ ಮಲಯಾಳಂ ನಟ ನಿವಿನ್ ಪೌಲಿ (Nivin Pauly) ಅವರು ಡಿಸ್ನಿ ಪ್ಲಸ್​​ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆಗಲಿರುವ ‘ಫಾರ್ಮಾ’ ವೆಬ್​​ ಸೀರೀಸ್​ (Pharma Web Series) ಮೂಲಕ ಒಟಿಟಿ ಪ್ರಪಂಚಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ‘ಫೈನಲ್ಸ್’ ಚಿತ್ರದಿಂದ ಖ್ಯಾತಿ ಗಳಿಸಿದ ನಿರ್ದೇಶಕ ಪಿಆರ್ ಅರುಣ್ ಅವರು ಈ ವೆಬ್​ ಸರಣಿಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘ಮೂವೀ ಮಿಲ್’ ಸಂಸ್ಥೆ ಮೂಲಕ ಇದು ನಿರ್ಮಾಣ ಆಗಿದೆ. ಅನೇಕ ಹೀರೋಗಳು ಒಟಿಟಿ ಜಗತ್ತಿಗೆ ಕಾಲಿಟ್ಟು ಯಶಸ್ಸು ಕಂಡಿದ್ದಾರೆ. ಇದೇ ಮೊದಲ ಬಾರಿಗೆ ನಿವಿನ್​ ಪೌಲಿ ಕೂಡ ಒಟಿಟಿ (OTT) ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರಿಗೂ ಯಶಸ್ಸು ಸಿಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಒಂದು ಕಾಲದಲ್ಲಿ ನಿವಿನ್​ ಪೌಲಿ ಅವರು ‘ಬೆಂಗಳೂರು ಡೇಸ್​’, ‘ಪ್ರೇಮಂ’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಅದೇ ಕಾರಣಕ್ಕಾಗಿ ಅವರು ಒಟಿಟಿಗೆ ಎಂಟ್ರಿ ನೀಡಿದ್ದಾರೆ. ನಿವಿನ್​ ಪೌಲಿ ಅವರು ವೆಬ್​ ಸರಣಿಯಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಅದು ಈಗ ನಿಜವಾಗಿದೆ. ಈ ವೆಬ್​ ಸರಣಿಯಲ್ಲಿ ನಟಿಸುತ್ತಿರುವುದಕ್ಕೆ ನಿವಿನ್​ ಪೌಲಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಲ್ಲ ಬಗೆಯ ಪಾತ್ರಗಳಿಗೆ ಒಗ್ಗುವ ನಿವಿನ್ ಪೌಲಿ ಈಗ ಮಾಲಿವುಡ್​ನ ಜನಪ್ರಿಯ ನಟರಲ್ಲಿ ಒಬ್ಬರು

ಅನೇಕ ಸತ್ಯ ಘಟನೆಗಳನ್ನು ಆಧರಿಸಿ ‘ಫಾರ್ಮಾ’ ವೆಬ್​ ಸರಣಿ ಮೂಡಿಬರುತ್ತಿದೆ. ‘ನೂರಾರು ಸತ್ಯ ಘಟನೆಗಳನ್ನು ಆಧರಿಸಿ ತಯಾರಾದ ಈ ವೆಬ್​​ ಸಿರೀಸ್​ ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿದೆ’ ಎಂದು ನಿರ್ದೇಶಕ ಪಿಆರ್​ ಅರುಣ್​ ಹೇಳಿದ್ದಾರೆ. ಬಾಲಿವುಡ್​ನ ರಜತ್​ ಕಪೂರ್​ ಅವರು ಇದರಲ್ಲಿ ಒಂದು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಹಲವು ವರ್ಷಗಳ ಬಳಿಕ ಅವರು ಮಲಯಾಳಂ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ ಎಂಬುದು ವಿಶೇಷ.

ಇದನ್ನೂ ಓದಿ: ಒಟಿಟಿಗೆ ಬರ್ತಿದೆ ಎರಡು ಡಿಸಾಸ್ಟರ್ ಸಿನಿಮಾ; ಇಲ್ಲಾದರೂ ಸಿಗುತ್ತಾ ಗೆಲುವು?

ಅಭಿನಂದನ್​ ರಾಮಾನುಜನ್​ ಅವರು ‘ಫಾರ್ಮಾ’ ವೆಬ್​ ಸಿರೀಸ್​ಗೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಜೇಕ್ಸ್​ ಬಿಜಾಯ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಜಿತ್​ ಸಾರಂಗ್​ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. 2010ರಿಂದಲೂ ನಿಮಿನ್​ ಪೌಲಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಒಟಿಟಿ ಪ್ಲಾಟ್​ಫಾರ್ಮ್​ಗೆ ಕಾಲಿಡುತ್ತಿರುವುದರಿಂದ ‘ಫಾರ್ಮಾ’ ಮೇಲೆ ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.