Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್ ಕುಮಾರ್ ಸಿನಿಮಾಕ್ಕೆ ಮತ್ತೆ ಸಂಕಷ್ಟ: ಒಟಿಟಿ ಆವೃತ್ತಿಗೂ ಕತ್ತರಿ, ಬಿಡುಗಡೆ ಮುಂದೂಡಿಕೆ

Akshay Kumar: ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ವೇಳೆ ಸಿಬಿಎಫ್​ಸಿ ಯಿಂದ ಸಮಸ್ಯೆಗೆ ಗುರಿಯಾಗಿದ್ದ ಅಕ್ಷಯ್ ಕುಮಾರ್ ನಟನೆಯ 'ಓಎಂಜಿ 2' ಸಿನಿಮಾ ಇದೀಗ ಒಟಿಟಿ ಬಿಡುಗಡೆ ವೇಳೆಯೂ ಸಮಸ್ಯೆಗೆ ಸಿಲುಕಿದೆ.

ಅಕ್ಷಯ್ ಕುಮಾರ್ ಸಿನಿಮಾಕ್ಕೆ ಮತ್ತೆ ಸಂಕಷ್ಟ: ಒಟಿಟಿ ಆವೃತ್ತಿಗೂ ಕತ್ತರಿ, ಬಿಡುಗಡೆ ಮುಂದೂಡಿಕೆ
Follow us
ಮಂಜುನಾಥ ಸಿ.
|

Updated on:Oct 06, 2023 | 11:54 PM

ಅಕ್ಷಯ್ ಕುಮಾರ್ (Akshay Kumar)​ ಅವರ ಸಂಕಷ್ಟಗಳು ಮುಗಿಯುತ್ತಲೇ ಇಲ್ಲ. ಅಕ್ಷಯ್​ರ ಸಿನಿಮಾಗಳು ಸತತವಾಗಿ ಸೋಲುತ್ತಿರುವ ಬೆನ್ನಲ್ಲೆ ಅವರ ಇತ್ತೀಚೆಗಿನ ಸಿನಿಮಾ ‘ಓಎಂಜಿ 2’ ಗೆ ಸೆನ್ಸಾರ್ ಸಮಸ್ಯೆ ಬಂದೊದಗಿತ್ತು. ಸಿನಿಮಾದ ಹಲವು ದೃಶ್ಯಗಳಿಗೆ, ಸಂಭಾಷಣೆಗಳಿಗೆ ಸಿಬಿಎಫ್​ಸಿಯು ಕತ್ತರಿ ಹಾಕಿತಲ್ಲದೆ ಅದೆಲ್ಲದರ ಬಳಿಕವೂ ಸಿನಿಮಾಕ್ಕೆ ಎ ಪ್ರಮಾಣ ಪತ್ರ ನೀಡಿತು. ಇದು ಅಕ್ಷಯ್ ಕುಮಾರ್ ಸೇರಿದಂತೆ ಚಿತ್ರತಂಡವನ್ನು ಕೆರಳಿಸಿತ್ತು. ಹಾಗಿದ್ದರೂ ಸಹ ಹೆಚ್ಚೇನೂ ಪ್ರತಿಕ್ರಿಯಿಸದೆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯ್ತು. ಇದೀಗ ಸಿನಿಮಾದ ಒಟಿಟಿ ಬಿಡುಗಡೆಗೂ ಸಮಸ್ಯೆ ಎದುರಾಗಿದೆ.

‘ಓಎಂಜಿ 2‘ ಸಿನಿಮಾ ಅಕ್ಟೋಬರ್ ಎಂಟರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿಕ್ಕಿತ್ತು. ಈ ಬಗ್ಗೆ ಪ್ರಚಾರವೂ ಮಾಡಲಾಗಿತ್ತು, ಸ್ವತಃ ಅಕ್ಷಯ್ ಕುಮಾರ್ ವಿಶೇಷ ವಿಡಿಯೋ ಮಾಡಿ ನೆಟ್​ಫ್ಲಿಕ್ಸ್ ಒಟಿಟಿಯಲ್ಲಿ ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಆದರೆ ಇದೀಗ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ‘ಓಎಂಜಿ 2‘ ಸಿನಿಮಾದ ಒಟಿಟಿ ಆವೃತ್ತಿಗೂ ಕತ್ತರಿ ಪ್ರಯೋಗ ಮಾಡಲಾಗುತ್ತಿದೆ. ಬರೋಬ್ಬರಿ 27 ಕಟ್​ಗಳೊಂದಿಗೆ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.

ಇದನ್ನೂ ಓದಿ:ಹೊಸ ಸಿನಿಮಾ ಘೋಷಿಸಿದ ಅಕ್ಷಯ್ ಕುಮಾರ್; ‘ವೆಲ್​ಕಮ್ ​3’ ಚಿತ್ರದಲ್ಲಿ ಸ್ಟಾರ್ಸ್ ದಂಡು

ತಮ್ಮ ಸಿನಿಮಾದ ಒಟಿಟಿ ಬಿಡುಗಡೆಗೆ ಸಮಸ್ಯೆ ಆಗಿರುವ ಬಗ್ಗೆ ಮಾತನಾಡಿರುವ ನಟ ಅಕ್ಷಯ್ ಕುಮಾರ್, ”ನನಗೆ ಜಗಳ ಅಥವಾ ಹೋರಾಟ ಮಾಡಲು ಇಷ್ಟವಿಲ್ಲ. ನಿಯಮಗಳ ಬಗ್ಗೆ ನನಗೆ ಅರಿವಿಲ್ಲ, ನಿಯಮದ ಪುಸ್ತಕವನ್ನು ನಾನೆಂದೂ ಓದಿಲ್ಲ. ಇದು ವಯಸ್ಕರ ಸಿನಿಮಾ ಎಂದು ಅವರಿಗೆ ಅನ್ನಿಸಿದ್ದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ನಾವು ಹಲವರಿಗೆ ಸಿನಿಮಾ ತೋರಿಸಿದ್ದೇವೆ ಎಲ್ಲರಿಗೂ ಸಿನಿಮಾ ಇಷ್ಟವಾಗಿದೆ. ಈ ಸಿನಿಮಾವನ್ನು ನಾವು ಯುವ ಜನರಿಗಾಗಿ ಮಾಡಿದ್ದೆವು. ಈಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ ಆ ಬಗ್ಗೆ ನನಗೆ ಖುಷಿ ಇದೆ” ಎಂದಿದ್ದಾರೆ.

‘ಓಎಂಜಿ 2’ ಸಿನಿಮಾವು ಲೈಂಗಿಕ ಶಿಕ್ಷಣದ ಅವಶ್ಯಕತೆ ಬಗೆಗಿನ ವಿಷಯವನ್ನು ಹೊಂದಿರುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಶಿವಗಣದ ಸದಸ್ಯನ ಪಾತ್ರದಲ್ಲಿ ನಟಿಸಿದ್ದಾರೆ. ನಟ ಪಂಕಜ್ ತ್ರಿಪಾಠಿ ಶಿವನ ಭಕ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಯಾಮಿ ಗುಪ್ತಾ, ಪಂಕಜ್ ಮಲ್ಹೋತ್ರಾ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಅಮಿತ್ ರಾಯ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:50 pm, Fri, 6 October 23

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ