ಒಟಿಟಿಗೆ ಬರ್ತಿದೆ ಎರಡು ಡಿಸಾಸ್ಟರ್ ಸಿನಿಮಾ; ಇಲ್ಲಾದರೂ ಸಿಗುತ್ತಾ ಗೆಲುವು?
‘ಭೋಲಾ ಶಂಕರ್’ ಹಾಗೂ ‘ರಾಮಬಾಣಂ’ ಸಿನಿಮಾಗಳು ಥಿಯೇಟರ್ನಲ್ಲಿ ಅಟ್ಟರ ಫ್ಲಾಪ್ ಎನಿಸಿಕೊಂಡಿದೆ. ಈಗ ಈ ಎರಡೂ ಸಿನಿಮಾಗಳು ಒಟಿಟಿಗೆ ಬಂದಿವೆ. ಇಲ್ಲಾದರೂ ಸಿನಿಮಾನ ಜನರು ನೋಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇಂದಿನಿಂದ (ಸೆಪ್ಟೆಂಬರ್ 15) ಚಿತ್ರಗಳು ಒಟಿಟಿಯಲ್ಲಿ ಪ್ರಸಾರ ಕಾಣುತ್ತಿವೆ.
ದೊಡ್ಡ ಬಜೆಟ್ನಲ್ಲಿ, ದೊಡ್ಡ ಸ್ಟಾರ್ಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಸಿನಿಮಾ ಗೆದ್ದೇ ಬಿಡುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ. ಇದಕ್ಕೆ ತಾಜಾ ಉದಾಹರಣೆ ‘ಭೋಲಾ ಶಂಕರ್’ (Bhola Shankar) ಹಾಗೂ ‘ರಾಮಬಾಣಂ’ ಸಿನಿಮಾ. ಎರಡೂ ಸಿನಿಮಾಗಳು ಥಿಯೇಟರ್ನಲ್ಲಿ ಅಟ್ಟರ ಫ್ಲಾಪ್ ಎನಿಸಿಕೊಂಡಿದೆ. ಈಗ ಈ ಎರಡೂ ಸಿನಿಮಾಗಳು ಒಟಿಟಿಗೆ ಬಂದಿವೆ. ಇಲ್ಲಾದರೂ ಸಿನಿಮಾನ ಜನರು ನೋಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇಂದಿನಿಂದ (ಸೆಪ್ಟೆಂಬರ್ 15) ಚಿತ್ರಗಳು ಒಟಿಟಿಯಲ್ಲಿ ಪ್ರಸಾರ ಕಾಣುತ್ತಿವೆ.
‘ಭೋಲಾ ಶಂಕರ್’
ಚಿರಂಜೀವಿ ಅವರಿಗೆ ಇತ್ತೀಚೆಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಅವರ ನಟನೆಯ ‘ಭೋಲಾ ಶಂಕರ್’ ಸಿನಿಮಾ ಡಿಸಾಸ್ಟರ್ ಪರ್ಫಾರ್ಮೆನ್ಸ್ ನೀಡಿತು. ಚಿರಂಜೀವಿ ಜೊತೆ ತಮನ್ನಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ಜನರು ಯಾವ ರೀತಿಯಲ್ಲಿ ಸ್ವಾಗತಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಮೆಹೆರ್ ರಮೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ರಾಮಬಾಣಂ
ಗೋಪಿಚಂದ್ ಅವರು ಅಲ್ಲೊಂದು ಇಲ್ಲೊಂದು ಹಿಟ್ ಸಿನಿಮಾ ನೀಡುತ್ತಾರೆ. ಅವರ ಹಲವು ಸಿನಿಮಾಗಳು ಫ್ಲಾಪ್ ಆಗಿವೆ. ‘ರಾಮಬಾಣಂ’ ಸಿನಿಮಾ ಕೂಡ ಸೋತಿದೆ. ಈ ಚಿತ್ರವನ್ನು ಜನರು ಇಷ್ಟಪಡಲಿಲ್ಲ. ಈ ಸಿನಿಮಾ ಆಹಾ ಒಟಿಟಿ ಮೂಲಕ ಪ್ರಸಾರ ಕಾಣುತ್ತಿದೆ. ಅಲ್ಲಿಯೂ ಈ ಚಿತ್ರ ಜನಮೆಚ್ಚುಗೆ ಪಡೆಯುತ್ತದೆ ಎನ್ನುವ ಯಾವುದೇ ನಂಬಿಕೆ ಅಭಿಮಾನಿಗಳಿಗೆ ಉಳಿದುಕೊಂಡಿಲ್ಲ.
Market lo ki repati nunchi kottha mania raabothundhi. Adhi Bholaa Mania.
Bholaa Shankar, streaming from tomorrow on Netflix in Telugu, Tamil, Malayalam, Kannada and Hindi. #BholaaShankarOnNetflix pic.twitter.com/g1TNNBEnr0
— Netflix India South (@Netflix_INSouth) September 14, 2023
ಇದನ್ನೂ ಓದಿ: ಫ್ಲಾಪ್ನಲ್ಲಿ ತಮ್ಮ ದಾಖಲೆಯನ್ನು ತಾವೇ ಮುರಿದ ಚಿರಂಜೀವಿ ಭೋಲಾ ಶಂಕರ್ ಸಿನಿಮಾದ ನಷ್ಟವೆಷ್ಟು?
ಇದಲ್ಲದೆ ಇನ್ನೂ ಹಲವು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಸೂಪರ್ ಹಿಟ್ ಸಿನಿಮಾ ‘ಕೌಸಲ್ಯ ಸುಪ್ರಜಾ ರಾಮ’ ಒಟಿಟಿಗೆ ಬರುತ್ತಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಾಣಲಿದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಜೀ5 ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ‘ಬೊಂಬೈ ಮೆರಿ ಜಾನ್’ ಸೀಸನ್ 1 ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ