‘ರಾಮನೂ ಮಾಂಸಾಹಾರ ಸೇವನೆ ಮಾಡಿದ್ದ’; ನಯನತಾರಾ ಸಿನಿಮಾ ಡೈಲಾಗ್ ವಿರುದ್ಧ ಎದ್ದಿದೆ ಅಪಸ್ವರ

| Updated By: ರಾಜೇಶ್ ದುಗ್ಗುಮನೆ

Updated on: Jan 10, 2024 | 3:05 PM

‘ಅನ್ನಪೂರ್ಣಿ’ ಸಿನಿಮಾ ಡಿಸೆಂಬರ್ 1ರಂದು ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಆ ಬಳಿಕ ಚಿತ್ರ ಒಟಿಟಿಯಲ್ಲಿ ಬಿಡಗಡೆ ಆಯಿತು. ಇತ್ತೀಚೆಗೆ ಸಿನಿಮಾದ ಒಂದು ದೃಶ್ಯ ವೈರಲ್ ಆಗಿದೆ.

‘ರಾಮನೂ ಮಾಂಸಾಹಾರ ಸೇವನೆ ಮಾಡಿದ್ದ’; ನಯನತಾರಾ ಸಿನಿಮಾ ಡೈಲಾಗ್ ವಿರುದ್ಧ ಎದ್ದಿದೆ ಅಪಸ್ವರ
ನಯನತಾರಾ
Follow us on

ಅಯೋಧ್ಯೆಯಲ್ಲಿ ರಾಮ ಮಂದಿರ (Rama Mandira) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಈ ಮಧ್ಯೆ ಸಿನಿಮಾ ತಂಡದವರು ಮಾಡಿದ ತಪ್ಪಿನಿಂದ ಸಾಕಷ್ಟು ಟೀಕೆ ಎದುರಾಗಿದೆ. ‘ವನವಾಸದಲ್ಲಿರುವ ಸಂದರ್ಭದಲ್ಲಿ ರಾಮನೂ ಮಾಂಸಾಹರ ಸೇವನೆ ಮಾಡಿದ್ದ’ ಎನ್ನುವ ಸಿನಿಮಾ ಡೈಲಾಗ್ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ರೀತಿಯ ಸಂಭಾಷಣೆ ಇರುವುದು ನಯನತಾರಾ ನಟನೆಯ ‘ಅನ್ನಪೂರ್ಣಿ’ ಸಿನಿಮಾದಲ್ಲಿ. ಈ ಚಿತ್ರ ನೆಟ್​ಫ್ಲಿಕ್ಸ್ ಒಟಿಟಿಯಲ್ಲಿ ರಿಲೀಸ್ ಆಗಿದ್ದು, BycottNetflix ಟ್ರೆಂಡ್ ಆಗಿದೆ.

‘ಅನ್ನಪೂರ್ಣಿ’ ಸಿನಿಮಾ ಡಿಸೆಂಬರ್ 1ರಂದು ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಆ ಬಳಿಕ ಚಿತ್ರ ಒಟಿಟಿಯಲ್ಲಿ ಬಿಡಗಡೆ ಆಯಿತು. ಇತ್ತೀಚೆಗೆ ಸಿನಿಮಾದ ಒಂದು ದೃಶ್ಯ ವೈರಲ್ ಆಗಿದೆ. ‘ವನವಾಸದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಹಸಿವಾದಾಗ ಪ್ರಾಣಿಗಳನ್ನು ಬೇಟೆ ಆಡಿ ತಿಂದಿದ್ದರು. ರಾಮಾಯಣದಲ್ಲಿ ಈ ಬಗ್ಗೆ ಬರೆಯಲಾಗಿದೆ’ ಎಂದು ಹೇಳುವ ಡೈಲಾಗ್ ವೈರಲ್ ಆಗುತ್ತಿದೆ.

ಹಿಂದೂ ಧರ್ಮದ ಭಾವನೆಗೆ ಈ ಹೇಳಿಕೆ ದಕ್ಕೆ ತಂದಿದೆ ಎಂದು ಶಿವಸೇನೆಯ ಮಾಜಿ ಲೀಡರ್ ರಮೇಶ್ ಸೋಲಂಕಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಅವರು ದೂರು ಕೂಡ ದಾಖಲು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಚರ್ಚೆ ಜೋರಾಗಿದೆ. ‘ಹಿಂದೂ ವಿರೋಧಿ’ ಸಿನಿಮಾ ಎಂಬ ಹಣೆಪಟ್ಟಿಯನ್ನು ಚಿತ್ರಕ್ಕೆ ಕಟ್ಟಲಾಗಿದೆ. ಈಗಲೇ ಸಿನಿಮಾ ಪ್ರಸಾರ ನಿಲ್ಲಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Nikhil Kumar: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ನಿಖಿಲ್ ಕುಮಾರ್​ಗೆ ಆಹ್ವಾನ

ಅಯೋಧ್ಯೆಯ ರಾಮ ಮಂದರಿದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಗಳು ಆರಂಭ ಆಗಲಿವೆ. ಈ ಸಂದರ್ಭದಲ್ಲಿ ರಾಮನ ಕುರಿತು ಈ ರೀತಿಯ ಹೇಳಿಕೆ ವೈರಲ್ ಆಗಿರುವುದರಿಂದ ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಈ ಚಿತ್ರವನ್ನು ನೀಲೇಶ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಅಚ್ಯುತ್ ಕುಮಾರ್ ಕೂಡ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ