Rashmika Mandanna: ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ನಟಿ ರಶ್ಮಿಕಾ ಮಂದಣ್ಣ; ಅಂಥದ್ದೇನಾಯ್ತು?

ರಶ್ಮಿಕಾ ಮಂದಣ್ಣ ಹಾಗೂ ಸಿದ್ದಾರ್ಥ್​ ಮಲ್ಹೋತ್ರ ಅವರು ‘ಮಿಷನ್ ಮಜ್ನು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸೆಲೆಬ್ರಿಟಿಗಳಿಗಾಗಿ ಇವರು ವಿಶೇಷ ಶೋ ಆಯೋಜನೆ ಮಾಡಲಾಗಿತ್ತು.

Rashmika Mandanna: ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ನಟಿ ರಶ್ಮಿಕಾ ಮಂದಣ್ಣ; ಅಂಥದ್ದೇನಾಯ್ತು?
ರಶ್ಮಿಕಾ ಮಂದಣ್ಣ
Edited By:

Updated on: Jan 18, 2023 | 10:32 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಮಿಷನ್​ ಮಜ್ನು’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಅವರ ಫ್ಯಾನ್ಸ್ ಕೋರುತ್ತಿದ್ದಾರೆ. ರಶ್ಮಿಕಾ ವೃತ್ತಿ ಜೀವನದಲ್ಲಿ ಈ ಚಿತ್ರ ಬಹಳ ಮುಖ್ಯ ಎನಿಸಿಕೊಂಡಿದೆ. ಅವರು ಹಿಂದಿಯಲ್ಲಿ ನಟಿಸಿದ ‘ಗುಡ್​​ಬೈ’ ಚಿತ್ರ ಫ್ಲಾಪ್ ಆಯಿತು. ಆ ಬಳಿಕ ಅವರು ನಟಿಸಿದ ಮುಂದಿನ ಸಿನಿಮಾ ಇದು. ‘ಮಿಷನ್​ ಮಜ್ನು’ ಚಿತ್ರ (Mission Majnu) ಯಶಸ್ಸು ಕಂಡರೆ ಅವರಿಗೆ ಒಂದಷ್ಟು ಆಫರ್​ಗಳು ಬರಲಿವೆ. ಈ ಚಿತ್ರದ ವಿಶೇಷ ಸ್ಕ್ರೀನಿಂಗ್​ ಮಂಗಳವಾರ (ಜನವರಿ 17) ನಡೆದಿದೆ. ಈ ವೇಳೆ ಅವರು ಫ್ಯಾನ್ಸ್​​ಗೆ ಕ್ಷಮೆ ಕೋರಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ಸಿದ್ದಾರ್ಥ್​ ಮಲ್ಹೋತ್ರ ಅವರು ‘ಮಿಷನ್ ಮಜ್ನು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸೆಲೆಬ್ರಿಟಿಗಳಿಗಾಗಿ ಇವರು ವಿಶೇಷ ಶೋ ಆಯೋಜನೆ ಮಾಡಿದ್ದರು. ಇದರಲ್ಲಿ ಸಿದ್ದಾರ್ಥ್ ಪ್ರೇಯಸಿ ಕಿಯಾರಾ ಅಡ್ವಾಣಿ, ನಿರ್ಮಾಪಕ ಕರಣ್ ಜೋಹರ್ ಮೊದಲಾದವರು ಭಾಗಿ ಆಗಿದ್ದರು.

ಈ ಶೋ ಮುಗಿಸಿ ಹೊರಬರುವಾಗ ಅಭಿಮಾನಿಗಳು ಹಾಗೂ ಪಾಪರಾಜಿಗಳು ರಶ್ಮಿಕಾ ಅವರನ್ನು ಮುತ್ತಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಕಾರನ್ನು ಏರಲು ಹರಸಾಹಸ ಪಡಬೇಕಾಯಿತು. ಕಾರು ಏರಿದ ನಂತರದಲ್ಲಿ ಚಾಲಕ ನಿಧಾನವಾಗಿ ಚಲಿಸಲು ಪ್ರಯತ್ನಿಸಿದ. ಆದರೆ, ಸುತ್ತಲೂ ಜನ ನೆರೆದಿದ್ದರಿಂದ ಅದು ಸಾಧ್ಯವಾಗಿಲ್ಲ. ಕಾರು ನಿಧಾನವಾಗಿ ಚಲಿಸುತ್ತಿದ್ದಂತೆ ರಶ್ಮಿಕಾಗೆ ಆತಂಕ ಆಯಿತು. ಕಾರಿನ ಹೊರಭಾಗದಲ್ಲಿ ನಿಂತಿದ್ದ ಪಾಪರಾಜಿಗಳು ಹಾಗೂ ಫ್ಯಾನ್ಸ್​​ಗೆ ಎಚ್ಚರಿಕೆಯಿಂದ ಇರುವಂತೆ ಕೋರಿದರು. ತರಾತುರಿಯಲ್ಲಿ ತೆರಳುತ್ತಿರುವುದಕ್ಕೆ ಕೊನೆಯಲ್ಲಿ ರಶ್ಮಿಕಾ ಕ್ಷಮೆ ಕೇಳಿದರು.

ಇದನ್ನೂ ಓದಿ
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಇದನ್ನೂ ಓದಿ:   ‘ಪುಷ್ಪ 2’ ಸಿನಿಮಾದ ಶೂಟಿಂಗ್​ ಬಗ್ಗೆ ಅಪ್​ಡೇಟ್​ ನೀಡಿದ ನಟಿ ರಶ್ಮಿಕಾ ಮಂದಣ್ಣ

‘ಮಿಷನ್ ಮಜ್ನು’ ಸಿನಿಮಾ ಜನವರಿ 20ರಂದು ‘ನೆಟ್​​ಫ್ಲಿಕ್ಸ್’ ಮೂಲಕ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಇದು ಹಿಂದಿಯ ‘ರಾಜಿ’ ಚಿತ್ರವನ್ನು ನೆನಪಿಸಿತ್ತು. ರಶ್ಮಿಕಾ ಮಂದಣ್ಣ ನಟನೆಯ ‘ವಾರಿಸು’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಗಿದೆ. ಇದರಿಂದ ರಶ್ಮಿಕಾ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Web contact

TV9 Kannada

Read More
Follow Us