AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mission Majnu: ಅಂಧ ಯುವತಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ; ‘ಮಿಷನ್​ ಮಜ್ನು’ ಚಿತ್ರದ ತೆರೆ ಹಿಂದಿನ ಕಹಾನಿ ಇಲ್ಲಿದೆ..

Rashmika Mandanna | Mission Majnu Movie: ರಶ್ಮಿಕಾ ಮಂದಣ್ಣ ನಟನೆಯ ‘ಮಿಷನ್​ ಮಜ್ನು’ ಚಿತ್ರ ಜನವರಿ 20ರಂದು ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಲಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ.

Mission Majnu: ಅಂಧ ಯುವತಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ; ‘ಮಿಷನ್​ ಮಜ್ನು’ ಚಿತ್ರದ ತೆರೆ ಹಿಂದಿನ ಕಹಾನಿ ಇಲ್ಲಿದೆ..
ರಶ್ಮಿಕಾ ಮಂದಣ್ಣ
TV9 Web
| Edited By: |

Updated on: Jan 15, 2023 | 3:11 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್​ನಲ್ಲಿ ಭದ್ರವಾಗಿ ನೆಲೆ ನಿಲ್ಲಲು ಪ್ರಯತ್ನಿಸುತ್ತಿದ್ದಾರೆ. ಅವರ ಮೊದಲ ಬಾಲಿವುಡ್ (Bollywood)​ ಸಿನಿಮಾ ‘ಗುಡ್​ಬೈ’ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಈಗ ಅವರ ಎರಡನೇ ಸಿನಿಮಾ ‘ಮಿಷನ್​ ಮಜ್ನು’ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಗೆಲ್ಲುವುದು ರಶ್ಮಿಕಾ ಪಾಲಿಗೆ ಬಹಳ ಮುಖ್ಯವಾಗಲಿದೆ. ಈ ಸಿನಿಮಾದಲ್ಲಿ ಅವರು ಚಾಲೆಂಜಿಂಗ್​ ಆದಂತಹ ಪಾತ್ರ ನಿಭಾಯಿಸಿದ್ದಾರೆ. ಅಂಧ ಯುವತಿಯಾಗಿ ಅವರು ನಟಿಸಿದ್ದಾರೆ. ‘ಮಿಷನ್​ ಮಜ್ನು’ (Mission Majnu) ಚಿತ್ರದಲ್ಲಿನ ಪಾತ್ರಕ್ಕಾಗಿ ತಾವು ಮಾಡಿಕೊಂಡ ತಯಾರಿ ಹೇಗಿತ್ತು ಎಂಬ ಬಗ್ಗೆ ಅವರು ಮಾತನಾಡಿದ್ದಾರೆ. ಈ ಕುರಿತು ‘ಹಿಂದುಸ್ತಾನ್​ ಟೈಮ್ಸ್​’ ವರದಿ ಪ್ರಕಟ ಮಾಡಿದೆ.

‘ಓರ್ವ ನಟಿಯಾಗಿ ನಾನು ಈ ರೀತಿಯ ಪಾತ್ರವನ್ನು ಮಾಡಿರಲಿಲ್ಲ. ಇದು ರೆಟ್ರೋ ಶೈಲಿಯ ಸಿನಿಮಾ. ಅದಕ್ಕೆ ತಕ್ಕಂತಹ ಕಾಸ್ಟ್ಯೂಮ್​ ಧರಿಸಬೇಕಿತ್ತು. ಪಾತ್ರಕ್ಕಾಗಿ ತರಬೇತಿ ಪಡೆಯಬೇಕಿತ್ತು. ಇದು ನನಗೆ ಹೊಸದಾದ್ದರಿಂದ ಹೇಗೆ ನಿಭಾಯಿಸುತ್ತೇನೋ ಎಂಬ ಪ್ರಶ್ನೆ ನನಗೆ ಮೂಡಿತ್ತು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಇದನ್ನೂ ಓದಿ: Mission Majnu Trailer: ಮತ್ತೆ ಪಾಕಿಸ್ತಾನಿ ಯುವತಿಯ ಪಾತ್ರ ಮಾಡಿದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ನಟನೆ ಮಾಡುವಾಗ ಕಣ್ಣುಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದು ಸಹಜ. ಎಲ್ಲ ಕಲಾವಿದರಿಗೆ ಅದು ಬಹಳ ಸಹಕಾರಿ ಆಗುತ್ತದೆ. ಆದರೆ ಕಣ್ಣಿಲ್ಲದ ವ್ಯಕ್ತಿಯ ಪಾತ್ರ ಮಾಡುವಾಗ ಅದು ಸಾಧ್ಯವಿಲ್ಲ. ಹಾಗಾಗಿ ಈ ಪಾತ್ರ ರಶ್ಮಿಕಾ ಮಂದಣ್ಣ ಅವರಿಗೆ ಸಖತ್​ ಚಾಲೆಂಜಿಂಗ್​ ಆಗಿತ್ತು. ಆ ಕುರಿತು ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: Mission Majnu: ‘ಮಿಷನ್​ ಮಜ್ನು’ ಟ್ರೇಲರ್​: ಸಿದ್ದಾರ್ಥ್​ ಮಲ್ಹೋತ್ರ ಪಾತ್ರ ನೋಡಿದವರಿಗೆ ನೆನಪಾಯ್ತು ‘ರಾಜಿ’ ಸಿನಿಮಾ

‘ಜನರ ಕಣ್ಣುಗಳನ್ನು ನೋಡುತ್ತ ಮಾತನಾಡುವ ವ್ಯಕ್ತಿ ನಾನು. ಒಬ್ಬರ ಜೊತೆ ಮಾತನಾಡುವಾಗ ಇನ್ನೊಬ್ಬರನ್ನು ನೋಡಲು ನನಗೆ ಸಾಧ್ಯವಿಲ್ಲ. ಆದರೆ ಈ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರ ಅವರನ್ನು ನೋಡದೇ ನಾನು ನಟಿಸಬೇಕಿತ್ತು. ಇದು ತುಂಬ ಕಷ್ಟ ಎನಿಸಿತು. ನಟನೆ ಕಲಿತು ಬಂದವಳು ನಾನಲ್ಲ. ಆ ಕ್ಷಣಗಳನ್ನು ನಾನು ಅನುಭವಿಸಿ ತಿಳಿಯಬೇಕು. ಇದು ನನಗೆ ಚಾಲೆಂಜಿಂಗ್ ಆಗಿತ್ತು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

‘ಮಿಷನ್​ ಮಜ್ನು’ ಚಿತ್ರಕ್ಕೆ ಶಾಂತನು ಭಾಗ್ಚಿ ನಿರ್ದೇಶನ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಪಾಕಿಸ್ತಾನದಲ್ಲಿ ಕೆಲಸ ಮಾಡುವ ಭಾರತದ ಗೂಢಾಚಾರಿಯಾಗಿ ಸಿದ್ದಾರ್ಥ್​ ಮಲ್ಹೋತ್ರ ನಟಿಸಿದ್ದಾರೆ. ನೇರವಾಗಿ ಒಟಿಟಿಯಲ್ಲಿ ಈ ಸಿನಿಮಾ ರಿಲೀಸ್​ ಆಗಲಿದೆ. ಜನವರಿ 20ರಂದು ನೆಟ್​ಫ್ಲಿಕ್ಸ್​ ಮೂಲಕ ‘ಮಿಷನ್​ ಮಜ್ನು’ ವೀಕ್ಷಣಗೆ ಲಭ್ಯವಾಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ಗಮನ ಸೆಳೆದಿದೆ. ಹಲವು ಕಾರಣದಿಂದ ಈ ಚಿತ್ರ ಹೈಪ್​ ಸೃಷ್ಟಿ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್