Kantara Movie: ಇಂಗ್ಲಿಷ್​ನಲ್ಲೂ ಬರುತ್ತಿದೆ ‘ಕಾಂತಾರ’ ಸಿನಿಮಾ; ಮಾರ್ಚ್​ 1ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ

|

Updated on: Feb 07, 2023 | 6:51 PM

Rishab Shetty | Kantara English Version: ‘ಕಾಂತಾರ’ ಸಿನಿಮಾ ಇಂಗ್ಲಿಷ್​ನಲ್ಲೂ ವೀಕ್ಷಣೆಗೆ ಲಭ್ಯವಾಗಲಿದೆ. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿದೆ.

Kantara Movie: ಇಂಗ್ಲಿಷ್​ನಲ್ಲೂ ಬರುತ್ತಿದೆ ‘ಕಾಂತಾರ’ ಸಿನಿಮಾ; ಮಾರ್ಚ್​ 1ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ
ರಿಷಬ್ ಶೆಟ್ಟಿ
Follow us on

ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿವೆ. ಕಳೆದ ವರ್ಷ ತೆರೆಕಂಡ ‘ಕೆಜಿಎಫ್​: ಚಾಪ್ಟರ್​ 2’, ‘ಕಾಂತಾರ’ (Kantara) ಸಿನಿಮಾಗಳು ಆ ರೀತಿ ಮೋಡಿ ಮಾಡಿವೆ. ಡಬ್ಬಿಂಗ್​ ಸಹಾಯದಿಂದ ಕನ್ನಡದ ಚಿತ್ರಗಳು ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿಯಲ್ಲಿ ಅದ್ದೂರಿ ಪ್ರದರ್ಶನ ಕಂಡಿವೆ. ಈಗ ಇಂಗ್ಲಿಷ್​ನಲ್ಲೂ ಸದ್ದು ಮಾಡುವ ಕಾಲ ಕೂಡಿಬಂದಿದೆ. ಹೌದು, ರಿಷಬ್​ ಶೆಟ್ಟಿ (Rishab Shetty) ನಿರ್ದೇಶನದ ‘ಕಾಂತಾರ’ ಸಿನಿಮಾ ಇಂಗ್ಲಿಷ್​ಗೆ ಡಬ್​ ಆಗುತ್ತಿದೆ. ಮಾರ್ಚ್​ 1ರಂದು ನೆಟ್​ಫ್ಲಿಕ್ಸ್​ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ. ಇದು ಕನ್ನಡಿಗರಿಗೆ ಹೆಮ್ಮೆ ತರುವಂತಹ ವಿಚಾರವಾಗಿದ್ದು, ಕನ್ನಡ ಇನ್ನಷ್ಟು ಸಿನಿಮಾಗಳು (Kannada Movies) ಇದೇ ರೀತಿ ವಿಶ್ವಮಟ್ಟದಲ್ಲಿ ಮಿಂಚಲಿ ಎಂದು ಸಿನಿಪ್ರಿಯರು ಆಶಿಸುತ್ತಿದ್ದಾರೆ.

ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳನ್ನು ಆಧರಿಸಿ ‘ಕಾಂತಾರ’ ಸಿನಿಮಾ ಮೂಡಿಬಂತು. ಭೂತಕೋಲದ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಇದು ಪರಭಾಷಿಕ ಪ್ರೇಕ್ಷಕರಿಗೂ ಇಷ್ಟ ಆಗಿದ್ದರಿಂದ ತಮಿಳು, ಹಿಂದಿ, ಮಲಯಾಳಂ, ತೆಲುಗು ಭಾಷೆಗಳಿಗೆ ಡಬ್​ ಮಾಡಿ ತೆರೆಕಾಣಿಸಲಾಯಿತು. ಜಾಗತಿಕ ಮಟ್ಟದಲ್ಲಿ ಈ ಸಿನಿಮಾ ಬಗ್ಗೆ ಚರ್ಚೆ ಆಗಿದೆ. ಇಂಗ್ಲಿಷ್​ನಲ್ಲೂ ವೀಕ್ಷಣೆಗೆ ಲಭ್ಯವಾಗಲಿರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿದೆ. ‘ಕಾಂತಾರ’ದ ಡೈಲಾಗ್​ಗಳನ್ನು ಇಂಗ್ಲಿಷ್​ನಲ್ಲಿ ಕೇಳಿ ಸವಿಯಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: ‘ನೀವು ನೋಡಿರೋದೇ ಎರಡನೇ ಭಾಗ’; ‘ಕಾಂತಾರ’ ಗುಟ್ಟು ರಿವೀಲ್ ಮಾಡಿದ ರಿಷಬ್ ಶೆಟ್ಟಿ

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ ಮೂಲಕ ನಿರ್ಮಾಪಕ ವಿಜಯ್​ ಕಿರಗಂದೂರು ಅವರು ‘ಕಾಂತಾರ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. 100 ದಿನಗಳ ಕಾಲ ಅದ್ದೂರಿ ಪ್ರದರ್ಶನ ಕಂಡಿದ್ದರಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಸಕ್ಸಸ್​ ಮೀಟ್​ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಸಂಭ್ರಮಿಸಿದೆ.

ಇದನ್ನೂ ಓದಿ: Kantara: ಹಿಂದಿಯಲ್ಲೂ 100 ದಿನ ಪೂರೈಸಿದ ‘ಕಾಂತಾರ’ ಚಿತ್ರ; ರಿಷಬ್​ ಶೆಟ್ಟಿಗೆ ಉತ್ತರ ಭಾರತದಲ್ಲಿ ಭರ್ಜರಿ ಮೆಚ್ಚುಗೆ

‘ಕಾಂತಾರ 2’ ಬರುವುದು ಖಚಿತವಾಗಿದೆ. ಈ ಬಗ್ಗೆ ಇಷ್ಟು ದಿನ ಸೈಲೆಂಟ್​ ಆಗಿದ್ದ ರಿಷಬ್​ ಶೆಟ್ಟಿ ಅವರು ಶತದಿನೋತ್ಸವದ ಸಂಭ್ರಮದಲ್ಲಿ ಮೌನ ಮುರಿದರು. ಆದರೆ ಎರಡನೇ ಪಾರ್ಟ್​ನಲ್ಲಿ ಹಿಂದಿನ ಭಾಗದ ಕಥೆ ಇರಲಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Kantara 2 Shooting: ‘ಕಾಂತಾರ 2’ ಆರಂಭಿಸಲು ಮಳೆಗಾಲಕ್ಕೆ ಕಾದಿರುವ ರಿಷಬ್​ ಶೆಟ್ಟಿ; ಮಾಹಿತಿ ನೀಡಿದ ವಿಜಯ್​ ಕಿರಗಂದೂರು

‘ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ, ರಿಷಬ್​ ಶೆಟ್ಟಿ ಅವರು ಜೋಡಿಯಾಗಿ ನಟಿಸಿದ್ದಾರೆ. ಅವರಿಬ್ಬರ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇನ್ನುಳಿದ ಕಲಾವಿದರಾದ ಮಾನಸಿ ಸುಧೀರ್​, ಪ್ರಮೋದ್​ ಶೆಟ್ಟಿ, ಅಚ್ಯುತ್ ಕುಮಾರ್​, ಕಿಶೋರ್​ ಮುಂತಾದ ಕಲಾವಿದರು ಸಹ ಗಮನ ಸೆಳೆದಿದ್ದಾರೆ. ಅಜನೀಶ್ ಲೋಕನಾಥ್​ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಹಾಡುಗಳು ಜನಮನ ಗೆದ್ದಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:51 pm, Tue, 7 February 23