ಸಸ್ಪೆನ್ಸ್ ಥ್ರಿಲ್ಲರ್ ಕತೆಯೊಟ್ಟಿಗೆ ಒಟಿಟಿಗೆ ಕಾಲಿಟ್ಟ ‘ಕವಲು ದಾರಿ’ ರಿಷಿ

OTT: ಒಟಿಟಿಯಲ್ಲಿ ಕನ್ನಡ ಕಂಟೆಂಟ್​ಗೆ ಮಾರುಕಟ್ಟೆ ಇಲ್ಲ ಮಾತುಗಳು ಸದ್ಯಕ್ಕೆ ಚಾಲ್ತಿಯಲ್ಲಿವೆ. ಆದರೆ ಆ ಕೊರತೆಯನ್ನು ನೀಗಿಸುವ ಪ್ರಯತ್ನವೂ ಚಾಲ್ತಿಯಲ್ಲಿದೆ. ನಟ ರಿಷಿ ವೆಬ್ ಸರಣಿಯೊಂದರಲ್ಲಿ ನಟಿಸಿದ್ದು ಜನಪ್ರಿಯ ಒಟಿಟಿಯಲ್ಲಿ ಸ್ಟ್ರೀಂ ಆಗಲಿದೆ ವೆಬ್ ಸರಣಿ.

ಸಸ್ಪೆನ್ಸ್ ಥ್ರಿಲ್ಲರ್ ಕತೆಯೊಟ್ಟಿಗೆ ಒಟಿಟಿಗೆ ಕಾಲಿಟ್ಟ 'ಕವಲು ದಾರಿ' ರಿಷಿ
ಸೈತಾನ್
Follow us
|

Updated on: May 31, 2023 | 8:27 PM

ಒಟಿಟಿಯಲ್ಲಿ (OTT) ಕನ್ನಡ ಕಂಟೆಂಟ್​ಗೆ (Kannada Content) ಮಾರುಕಟ್ಟೆ ಇಲ್ಲ ಮಾತುಗಳು ಸದ್ಯಕ್ಕೆ ಚಾಲ್ತಿಯಲ್ಲಿವೆ. ಆದರೆ ಆ ಕೊರತೆಯನ್ನು ನೀಗಿಸುವ ಪ್ರಯತ್ನವೂ ಚಾಲ್ತಿಯಲ್ಲಿದೆ. ಇತ್ತೀಚೆಗೆ ಕನ್ನಡದಲ್ಲಿಯೂ ವೆಬ್ ಸಿರೀಸ್ ಗಳ (Web Series) ನಿರ್ಮಾಣ ಜೋರಾಗಿ ನಡೆಯುತ್ತಿದೆ. ಕೆಲವು ಹೆಸರಾಂತ ತಾರೆಯರು ಸಹ ಇತ್ತೀಚೆಗೆ ವೆಬ್ ಸರಣಿಗಳ ಮೇಲೆ ಗಮನ ಹರಿಸಿ ನಟಿಸಲು ಆರಂಭಿಸಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಪ್ರತಿಭಾನ್ವಿತ ನಟ ರಿಷಿ. ಸಿನಿಮಾಗಳು ಹಾಗೂ ಪಾತ್ರಗಳ ಆಯ್ಕೆಯಲ್ಲಿ ಇವರು ಬಹಳ ವಿಭಿನ್ನ.

ಸಸ್ಪೆನ್ಸ್, ಕಾಮಿಡಿ, ಲವ್ ಸ್ಟೋರಿ ಯಾವುದೇ ಇರಲಿ ಎಲ್ಲದಕ್ಕೂ ಸರಿಹೊಂದುವ ನಟ ರಿಷಿ. ಅದಕ್ಕೆ ಉದಾಹರಣೆ ಅಪರೇಷನ್ ಅಲಮೇಲಮ್ಮ, ಕವಲುದಾರಿ, ನೋಡಿ ಸ್ವಾಮಿ ಇವನು ಇರೋದೆ ಹೀಗೆ ಸಿನಿಮಾಗಳು. ಪ್ರತಿ ಸಿನಿಮಾದಲ್ಲಿಯೂ ಹೊಸ ಬಗೆಯ ಕಂಟೆಂಟ್, ಕ್ಯಾರೆಕ್ಟರ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ತಾವೊಬ್ಬ ಪ್ರತಿಭಾನ್ವಿತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸದ್ಯ ರಾಮನ ಅವತಾರ ಸಿನಿಮಾ ರಿಲೀಸ್​ಗೆ ಎದುರು ನೋಡುತ್ತಿರುವ ರಿಷಿ ಒಂದಷ್ಟು ಹೊಸ ಪ್ರಾಜೆಕ್ಟ್ ಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ ಈಗ ವೆಬ್ ಸಿರೀಸ್ ಜಗತ್ತಿನಲ್ಲಿಯೂ‌ ತಮ್ಮ ನಟನ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ತೆಲುಗಿನ ಹೆಸರಾಂತ ನಿರ್ದೇಶಕರಾದ ಮಹಿ ರಾಘವ್ ನಿರ್ದೇಶನದ ಕ್ರೈಮ್ ಡ್ರಾಮಾ ‘ಶೈತಾನ್’ ಮೂಲಕ ರಿಷಿ ತೆಲುಗು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವೆಬ್ ಸರಣಿಯಲ್ಲಿ ರಿಷಿ, ಬಾಲಿ‌ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕ ಹಾಗೂ ಖಳನಾಯಕ ಎರಡು ಶೇಡ್ ನಲ್ಲಿರುವ ಬಾಲಿ ಪಾತ್ರದ ಸಣ್ಣ ಝಲಕ್ ರಿಲೀಸ್ ಆಗಿದ್ದು, ಕಂಪ್ಲೀಟ್ ಮಾಸ್ ಅವತರಾದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 2018 Movie: ‘2018’ ಚಿತ್ರದ ಒಟಿಟಿ ಬಿಡುಗಡೆಗೆ ದಿನಾಂಕ ನಿಗದಿ; ಈ ಸಿನಿಮಾದಲ್ಲಿದೆ ನಿಜವಾದ ಕೇರಳ ಸ್ಟೋರಿ

ಜೂನ್ 15ರಂದು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಶೈತಾನ್ ಸ್ಟ್ರೀಮಿಂಗ್ ಆಗಲಿದೆ. ತೆಲುಗು ಭಾಷೆ ಜೊತೆಗೆ ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿಯೂ ವೆಬ್ ಸರಣಿ ಮೂಡಿಬರಲಿದೆ. ರವಿಕಾಳೆ, ಜಾಫರ್ ಸಾದಿಕ್, ಲೀನಾ, ಮಣಿಕಂದನ್ ಮುಂತಾದವರು ಶೈತಾನ್ ಸಿರೀಸ್ ಭಾಗವಾಗಿದ್ದಾರೆ. ಹಾಗ್ ನೋಡಿದರೆ ತೆಲುಗು ಚಿತ್ರರಂಗದಲ್ಲಿಯೂ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಹಾಗಿದ್ದರೂ ರಿಷಿ ಅವರಿಗೆ ಶೈತಾನ್ ವೆಬ್ ಸಿರೀಸ್ ಸಿಗೋದಿಕ್ಕೆ ಅವರ ಅಭಿನಯವೇ ಕಾರಣ. ರಿಷಿ ಸಿನಿಮಾಗಳನ್ನು ನೋಡಿ ಥ್ರಿಲ್ ಆಗಿದ್ದ ನಿರ್ದೇಶಕ ಮಹಿ ರಾಘವ್ ತಮ್ಮ ವೆಬ್ ಸಿರೀಸ್ ತಾವೇ ನಟಿಸುವ ಆಫರ್ ಇಟ್ಟಿದ್ದರು. ಅದಕ್ಕೆ‌ ನೋ ಎನ್ನದ ರಿಷಿ, ಬಾಲಿಯಾಗಿ ಅಬ್ಬರಿಸಿದ್ದಾರೆ. ಇತ್ತೀಚೆಗೆ ಕನ್ನಡ ಸಿನಿಮಾಗಳು ಹಾಗೂ ಕನ್ನಡ ಕಲಾವಿದರ ನಟನೆಗೆ ಒಂದೊಳ್ಳೆ ಬೆಲೆ ಸಿಗುತ್ತಿದೆ.

ನಮ್ಮ ಇಂಡಸ್ಟ್ರೀಯ ಸ್ಟಾರ್ಸ್ ಅಕ್ಕಪಕ್ಕದ ಸಿನಿ ಲೋಕದಲ್ಲಿ ಮಿಂಚು ಹರಿಸುತ್ತಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆ ರಿಷಿ. ಕಾಮಿಡಿ, ಸಸ್ಪೆನ್ಸ್ ಪಾತ್ರದ ಮೂಲಕ ಗಮನಸೆಳೆದಿದ್ದ ಅವರೀಗ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ದರ್ಶನ ಕೊಡಲು ಸಜ್ಜಾಗಿದ್ದಾರೆ. ಬಹುಕೋಟಿ ಬಜೆಟ್ ನಲ್ಲಿ ತಯಾಗಿರುವ ಶೈತಾನ್ ಮೂಲಕ ಇಡೀ ಇಂಡಿಯನ್ ಸಿನಿಲೋಕಕ್ಕೆ ಪರಿಚಯವಾಗಲಿದ್ದಾರೆ. ಕನ್ನಡದ ಹುಡ್ಗನ ಪ್ರತಿಭೆ ಗಮನಿಸಿ, ಅವರಿಂದ ಮಾತ್ರ ಈ ಪಾತ್ರ ಮಾಡಲು ಸಾಧ್ಯ ಅಂತಾ ಅವಕಾಶ ನೀಡಿರುವ ನಿರ್ದೇಶಕ ಮಹಿ ರಾಘವ್ ಹಾಗೂ ಇಡೀ ಚಿತ್ರತಂಡಕ್ಕೆ ರಿಷಿ ಧನ್ಯವಾದ ಅರ್ಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ