ಕನ್ನಡದಲ್ಲೊಂದು ವೆಬ್ ಸಿರೀಸ್ ಬಿಡುಗಡೆಗೆ ಸಿದ್ಧ; ಗಮನ ಸೆಳೆದ ‘ವೈಟ್ ಆ್ಯಂಡ್ ಬ್ಲಾಕ್’ ಪೋಸ್ಟರ್

White and Black web series: ‘ವೈಟ್ ಆ್ಯಂಡ್ ಬ್ಲಾಕ್' ಒಂದು ಮಿನಿ ಸಿರೀಸ್. ತಲಾ 20 ನಿಮಿಷಗಳ ಮೂರು ಎಪಿಸೋಡ್‌ಗಳನ್ನು ಒಳಗೊಂಡಿದೆ‌.‌ ಜ.8ರಂದು ಬಿಡುಗಡೆ ಆಗಲಿದೆ.

ಕನ್ನಡದಲ್ಲೊಂದು ವೆಬ್ ಸಿರೀಸ್ ಬಿಡುಗಡೆಗೆ ಸಿದ್ಧ; ಗಮನ ಸೆಳೆದ ‘ವೈಟ್ ಆ್ಯಂಡ್ ಬ್ಲಾಕ್' ಪೋಸ್ಟರ್
‘ವೈಟ್ ಆ್ಯಂಡ್ ಬ್ಲಾಕ್' ಪೋಸ್ಟರ್
Follow us
TV9 Web
| Updated By: ಮದನ್​ ಕುಮಾರ್​

Updated on: Jan 03, 2022 | 1:59 PM

ಬೇರೆ ಭಾಷೆಯಲ್ಲಿ ವೆಬ್ ಸಿರೀಸ್‌ಗಳ (web series) ಟ್ರೆಂಡ್ ಜೋರಾಗಿದೆ. ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ಕೂಡ ವೆಬ್ ಸರಣಿಗಳಲ್ಲಿ ನಟಿಸಿ ಜನಮನ ಗೆಲ್ಲುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ವೆಬ್ ಸಿರೀಸ್‌ಗಳು ಗಮನ ಸೆಳೆಯುತ್ತಿವೆ. ಸಮಂತಾ, ಸೈಫ್ ಅಲಿ ಖಾನ್ ಮುಂತಾದ ಸ್ಟಾರ್ ಕಲಾವಿದರು ಈ ಟ್ರೆಂಡ್‌ನಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ಕನ್ನಡದಲ್ಲಿ ವೆಬ್ ಸರಣಿಗಳ ಸಂಖ್ಯೆ ಕಡಿಮೆ.‌ ಈ ನಡುವೆ ಹೊಸಬರ ತಂಡವೊಂದು ಇಂಥ ಪ್ರಯತ್ನ ಮಾಡಿದೆ. ‘ವೈಟ್ ಆ್ಯಂಡ್ ಬ್ಲಾಕ್’ (White and Black web series) ಶೀರ್ಷಿಕೆಯಲ್ಲಿ ವೆಬ್ ಸಿರೀಸ್ ನಿರ್ಮಾಣವಾಗಿದ್ದು ಇದಕ್ಕೆ ಅಭಿನಂದನ್ ನಿರ್ದೇಶನ ಮಾಡಿದ್ದಾರೆ. ಜ.8ರಂದು ಆನ್‌ಲೈನ್‌ನಲ್ಲಿ ಈ ವೆಬ್ ಸಿರೀಸ್ ಬಿಡುಗಡೆ ಆಗಲಿದೆ. ಸತ್ಯ ಸೀರಿಯಲ್ ಬಾಲಾ ಖ್ಯಾತಿಯ ನಟ ಶಶಿ ರಾಜ್, ಚೆನ್ನಕೇಶವ, ಪ್ರಿಯಾಂಕಾ ಪ್ರಕಾಶ್, ಸವಿತಾ ಎನ್‌ಎಸ್‌ಡಿ ಮುಂತಾದವರು ನಟಿಸಿದ್ದಾರೆ. ಈ ಎಲ್ಲ ಕಲಾವಿದರು ರಂಗಭೂಮಿಯ ಹಿನ್ನೆಲೆಯಿಂದ ಬಂದವರು.

ಕೇರಳ ಮೂಲದ ನೀಸ್ಟ್ರೀಮ್ ಒಟಿಟಿ ಪ್ಲಾಟ್‌ಫರ್ಮ್ ಮೂಲಕ ‘ವೈಟ್ ಆ್ಯಂಡ್ ಬ್ಲಾಕ್’ ಪ್ರಸಾರ ಆಗಲಿದೆ.‌ ನೆಟ್‌ಫ್ಲಿಕ್ಸ್, ಅಮೇಜಾನ್ ವಿಡಿಯೋ ಮುಂತಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡದ ಹೊಸಬರ ಕಂಟೆಂಟ್‌ಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿಲ್ಲ. ಹಾಗಾಗಿ ‘ವೈಟ್ ಆ್ಯಂಡ್ ಬ್ಲಾಕ್’ ತಂಡ ನೀಸ್ಟ್ರೀಮ್ ಆ್ಯಪ್‌ನ ಮೊರೆ ಹೋಗಿದೆ. ರಿಲೀಸ್ ಆದ ಬಳಿಕ ಈ ವೆಬ್ ಸರಣಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಅಭಿನಂದನ್.

ಇದೊಂದು ಮಿನಿ ಸಿರೀಸ್. ತಲಾ 20 ನಿಮಿಷಗಳ ಮೂರು ಎಪಿಸೋಡ್‌ಗಳನ್ನು ಒಳಗೊಂಡಿದೆ‌.‌ ಈಗ ಪ್ರೋಮೋ ಬಿಡುಗಡೆ ಆಗುತ್ತಿದೆ.‌ ‘ಸಲಗ’ ಸಿನಿಮಾದಲ್ಲಿ ‘ಟಿಣಿಂಗ ಮಿಣಿಂಗ ಟಿಶ್ಯಾ..’ ಗೀತೆಯನ್ನು ಹಾಡಿ ಫೇಮಸ್ ಆಗಿರುವ ಗಿರಿಜಾ ಸಿದ್ದಿ ಅವರು ಈ ಪ್ರೋಮೋ ಬಿಡುಗಡೆ ಮಾಡಲಿದ್ದಾರೆ. ಈ ವೆಬ್​ ಸೀರಿಸ್​ನಲ್ಲಿ ನಟಿಸಿರುವ ಮತ್ತು ತೆರೆ ಹಿಂದೆ ಕೆಲಸ ಮಾಡಿರುವ ಬಹುತೇಕರು ರಂಗಭೂಮಿ ಹಿನ್ನೆಲೆಯವರು. ಪ್ರತಿ ಸಮಾಜದಲ್ಲಿಯೂ ಒಂದೊಂದು ಆಚರಣೆ ಇರುತ್ತದೆ. ಅದರಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಆದರೆ ಅವುಗಳನ್ನು ಅರ್ಥೈಸುವವರು ಬೇರೆ ಬೇರೆ ರೀತಿ ನೋಡುತ್ತಾರೆ.‌ ಈ ವಿಷಯದ ಹಿನ್ನೆಲೆಯಲ್ಲಿ ನಿರ್ದೇಶಕ ಅಭಿನಂದನ್ ಅವರು ಒಂದು ಕಾಲ್ಪನಿಕ‌ ಕಥೆ ಹೆಣೆದು ಈ ವೆಬ್ ಸರಣಿ ಮಾಡಿದ್ದಾರೆ.

‘ವೈಟ್ ಆ್ಯಂಡ್ ಬ್ಲಾಕ್’ ವೆಬ್ ಸರಣಿಯ ಥೀಮ್ ಏನು ಎಂಬುದನ್ನು ತಿಳಿಸುವಂತಹ ವಿಶೇಷವಾದ ಪೋಸ್ಟರ್ ಬಿಡುಗಡೆ ಆಗಿದೆ. ‘ಪ್ರತಿ ಆಚರಣೆಗೆ ಎರಡು ಮುಖ ಇರುತ್ತದೆ. ಈ ಸಮಾಜವು ಕತ್ತಲಲ್ಲಿ ಒಂದು ರೀತಿ ಇರುತ್ತದೆ, ಬೆಳಕಿನಲ್ಲಿ ಬೇರೆ ರೀತಿ ವರ್ತಿಸುತ್ತದೆ. ಹಾಗಾಗಿ ವೈಟ್ ಆ್ಯಂಡ್ ಬ್ಲಾಕ್’ ಎಂದು ಶೀರ್ಷಿಕೆ ಇಡಲಾಗಿದೆ. ಬೇರೆ ವೆಬ್ ಸರಣಿಯಲ್ಲಿ ಬೋಲ್ಡ್ ದೃಶ್ಯಗಳು, ಅವಾಚ್ಯ ಪದಗಳಿರುವ ಡೈಲಾಗ್‌ಗಳು ಇರುತ್ತವೆ. ಆದರೆ ನಾವು ಅಂಥದ್ದನ್ನೆಲ್ಲ ಅವಾಯ್ಡ್ ಮಾಡಿದ್ದೇವೆ’ ಎಂದು ಹೇಳಿದ್ದಾರೆ ನಿರ್ದೇಶಕ ಅಭಿನಂದನ್.

ಇದನ್ನೂ ಓದಿ:

‘ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜತೆ ಸಮಂತಾ ಮತ್ತೊಂದು ವೆಬ್​ ಸೀರಿಸ್​; ಆ್ಯಕ್ಷನ್​ನಲ್ಲಿ ಮಿಂಚಲಿದ್ದಾರೆ ಸ್ಯಾಮ್

ವೆಬ್​ ಸೀರಿಸ್​ ನಿರ್ಮಾಣ ಮಾಡಲಿದ್ದಾರೆ ವಿಜಯ್​ ದೇವರಕೊಂಡ; ಹೊಸ ವಿಚಾರ ಬಿಚ್ಚಿಟ್ಟ ನಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ