AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆಬ್​ ಸೀರಿಸ್​ ನಿರ್ಮಾಣ ಮಾಡಲಿದ್ದಾರೆ ವಿಜಯ್​ ದೇವರಕೊಂಡ; ಹೊಸ ವಿಚಾರ ಬಿಚ್ಚಿಟ್ಟ ನಟ

ತಮ್ಮನಿಗೆ ಬೆಂಬಲ ನೀಡುವ ಸಲುವಾಗಿ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸುವಾಗ ಅವರು ಅಚ್ಚರಿಯ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ‘

ವೆಬ್​ ಸೀರಿಸ್​ ನಿರ್ಮಾಣ ಮಾಡಲಿದ್ದಾರೆ ವಿಜಯ್​ ದೇವರಕೊಂಡ; ಹೊಸ ವಿಚಾರ ಬಿಚ್ಚಿಟ್ಟ ನಟ
ವಿಜಯ್ ದೇವರಕೊಂಡ
TV9 Web
| Edited By: |

Updated on: Nov 07, 2021 | 6:07 PM

Share

ವಿಜಯ್​ ದೇವರಕೊಂಡ ನಟನೆಯ ಜತೆಗೆ ಉದ್ಯಮದತ್ತಲೂ ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಅವರು ಮಲ್ಟಿಪ್ಲೆಕ್ಸ್​ ಒಂದನ್ನು ಆರಂಭಿಸಿದ್ದರು. ಇದರ ಜತೆಗೆ ‘ಕಿಂಗ್​ ಆಫ್​ ದಿ ಹಿಲ್​’ ಬ್ಯಾನರ್​ ಆರಂಭಿಸಿ ಸಿನಿಮಾ ನಿರ್ಮಾಣ ಕಾರ್ಯದಲ್ಲೂ ಅವರು ಬ್ಯುಸಿ ಆಗಿದ್ದಾರೆ. ವಿಜಯ್​ ಸಹೋದರ ಆನಂದ್​ ದೇವರಕೊಂಡ ನಟನೆಯ ‘ಪುಷ್ಪಕ ವಿಮಾನಂ’ ಚಿತ್ರ ನ.12ರಂದು ಬಿಡುಗಡೆ ಆಗುತ್ತಿದೆ. ಆ ಸಿನಿಮಾವನ್ನು ವಿಜಯ್​ ದೇವರಕೊಂಡ ಅರ್ಪಿಸುತ್ತಿದ್ದಾರೆ. ಈ ಮೂಲಕ ತಮ್ಮನ ಸಿನಿಮಾಗೆ ಬೆಂಬಲ ನೀಡುತ್ತಿದ್ದಾರೆ. ಈಗ ಅವರು ವೆಬ್​ ಸೀರಿಸ್​ ನಿರ್ಮಾಣ ಮಾಡೋಕೆ ಮುಂದಾಗಿದ್ದಾರೆ.

ತಮ್ಮನಿಗೆ ಬೆಂಬಲ ನೀಡುವ ಸಲುವಾಗಿ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸುವಾಗ ಅವರು ಅಚ್ಚರಿಯ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ‘ಪುಷ್ಪಕ ವಿಮಾನಂ’ ಸಿನಿಮಾವನ್ನು ದಾಮೋದರ ಅವರು ಡೈರೆಕ್ಷನ್​ ಮಾಡಿದ್ದಾರೆ. ಈ ನಿರ್ದೇಶಕರು ವಿಜಯ್​ ದೇವರಕೊಂಡಗೆ ಕಥೆ ಒಂದನ್ನು ಹೇಳಿದ್ದಾರೆ. ಇದು ವಿಜಯ್​ಗೆ ಇಷ್ಟವಾಗಿದೆ. ಹೀಗಾಗಿ, ತಮ್ಮ ಬ್ಯಾನರ್​ ಮೂಲಕ ವೆಬ್​ ಸೀರಿಸ್ ನಿರ್ಮಾಣ ಮಾಡೋಕೆ ವಿಜಯ್​ ಮುಂದಾಗಿದ್ದಾರೆ.

ಇತ್ತೀಚೆಗೆ ವಿಜಯ್​ ಅವರು ಮದುವೆ ಬಗ್ಗೆ ಮಾತನಾಡಿದರು. ವಿಜಯ್​ ದೇವರಕೊಂಡ ಅವರಿಗೆ 32 ವರ್ಷ ವಯಸ್ಸಾಗಿದೆ. ಆನಂದ್​ಗೆ​ ಈಗಿನ್ನೂ 25ರ ಪ್ರಾಯ. ವಾಡಿಕೆಯಂತೆ ಅಣ್ಣನ ಮದುವೆ ಮೊದಲು ಆಗುತ್ತದೆ. ಆದರೆ ಈ ನಿಯಮವನ್ನು ಆನಂದ್​ ಮುರಿಯುತ್ತಾರೆ ಎಂಬ ಅರ್ಥದಲ್ಲಿ ವಿಜಯ್​ ಮಾತನಾಡಿದ್ದಾರೆ. ಆದರೆ ಅವರ ಮಾತಿಗೆ ಆನಂದ್​ ಸಮ್ಮತಿ ಸೂಚಿಸಿಲ್ಲ. ಅದೆಲ್ಲ ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಅವರು ತಲೆ ಅಲ್ಲಾಡಿಸಿದ್ದಾರೆ. ಸಂದರ್ಶನದ ಪ್ರೋಮೋದಲ್ಲಿ ಈ ವಿಚಾರ ಹೈಲೈಟ್​ ಆಗಿತ್ತು.

ವಿಜಯ್​ ದೇವರಕೊಂಡ ನಟಿಸುತ್ತಿರುವ ‘ಲೈಗರ್​’ ಚಿತ್ರಕ್ಕೆ ಪುರಿ ಜಗನ್ನಾಥ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ಬಾಕ್ಸರ್​ ಮೈಕ್ ಟೈಸನ್​ ಕೂಡ ನಟಿಸುತ್ತಿದ್ದಾರೆ. ಇತ್ತೀಚೆಗೆ ಮೈಕ್​ ಟೈಸನ್​ ಲುಕ್​ಅನ್ನು ಚಿತ್ರತಂಡ ರಿಲೀಸ್​ ಮಾಡಿತ್ತು. ಇದಕ್ಕೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: Duniya Vijay: ತೆಲುಗು ಸ್ಟಾರ್​ ನಟನಿಗೆ ದುನಿಯಾ ವಿಜಯ್​ ವಿಲನ್​? ಟಾಲಿವುಡ್​ ಅಂಗಳದಿಂದ ಕೇಳಿಬಂತು ಬಿಗ್​ ನ್ಯೂಸ್​

Annatthe: ಅದ್ದೂರಿಯಾಗಿ ಬಿಡುಗಡೆಯಾದ ಅಣ್ಣಾತೆ; ರಜಿನಿ ಫ್ಯಾನ್ಸ್​​ಗೆ ಡಬಲ್ ಸಂಭ್ರಮ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್