Annatthe: ಅದ್ದೂರಿಯಾಗಿ ಬಿಡುಗಡೆಯಾದ ಅಣ್ಣಾತೆ; ರಜಿನಿ ಫ್ಯಾನ್ಸ್​​ಗೆ ಡಬಲ್ ಸಂಭ್ರಮ

Rajinikanth: ಇಂದು ರಜಿನಿಕಾಂತ್ ನಟನೆಯ ಬಹುನಿರೀಕ್ಷಿತ ‘ಅಣ್ಣಾತೆ’ ಚಿತ್ರ ಬಿಡುಗಡೆಯಾಗಿದೆ. ಬರೋಬ್ಬರಿ 19 ತಿಂಗಳ ನಂತರ ರಜಿನಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಫ್ಯಾನ್ಸ್ ಮುಖದಲ್ಲಿ ಸಂಭ್ರಮ ಮನೆಮಾಡಿದೆ.

Annatthe: ಅದ್ದೂರಿಯಾಗಿ ಬಿಡುಗಡೆಯಾದ ಅಣ್ಣಾತೆ; ರಜಿನಿ ಫ್ಯಾನ್ಸ್​​ಗೆ ಡಬಲ್ ಸಂಭ್ರಮ
ರಜಿನಿಕಾಂತ್
Follow us
TV9 Web
| Updated By: shivaprasad.hs

Updated on:Nov 04, 2021 | 9:59 AM

ದೀಪಾವಳಿ ಹಬ್ಬ ರಜಿನಿ ಫ್ಯಾನ್ಸ್​​ಗೆ ಡಬಲ್ ಸಂಭ್ರಮ. ಕಾರಣ, ರಜಿನಿಯ ಬಹುನಿರೀಕ್ಷಿತ ಚಿತ್ರ ‘ಅಣ್ಣಾತೆ’ ಇಂದು ಎಲ್ಲೆಡೆ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಇದು ಫ್ಯಾನ್ಸ್​​ಗೆ ದೀಪಾವಳಿಯ ಸಂಭ್ರಮದ ಜೊತೆಗೆ, ರಜಿನಿ ಹಬ್ಬದ ಸಂಭ್ರಮವನ್ನೂ ತಂದಿದೆ. ಅಭಿಮಾನಿಗಳು ಚಿತ್ರಮಂದಿರದ ಸುತ್ತ ಅಕ್ಷರಶಃ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಾ ಕಡೆ ಬೆಳಗ್ಗೆ 8 ಗಂಟೆಯಿಂದಲೇ ಪ್ರದರ್ಶನ ಪ್ರಾರಂಭವಾಗಿದ್ದು, ಎಲ್ಲಾ ಚಿತ್ರಮಂದಿರದಲ್ಲೂ ಮಾರ್ನಿಂಗ್ ಶೋ ಟಿಕೇಟ್ಸ್ ಸೋಲ್ಡ್ ಔಟ್ ಆಗಿದೆ. ಪ್ರಪಂಚದಾದ್ಯಂತ 1200ಕ್ಕೂ ಅಧಿಕ ಸ್ಕ್ರೀನ್ ನಲ್ಲಿ ಅಣ್ಣಾತೆ ರಿಲೀಸ್ ಆಗಿದ್ದು, ವಿಂಟೇಜ್ ರಜಿನಿಯ ದರ್ಶನಕ್ಕೆ ಅಭಿಮಾನಿಗಳು ಕಾದಿದ್ದಾರೆ. ರಜಿನಿಯ ಈ ಹಿಂದಿನ ‘ಮುತ್ತು’, ‘ಪಡಿಯಪ್ಪ’, ‘ಅರುಣಾಚಲಂ’ ಮೊದಲಾದ ಚಿತ್ರಗಳಂತೆ ‘ಅಣ್ಣಾತೆ’ ಮೂಡಿಬಂದಿರುವುದರಿಂದ ನಿರೀಕ್ಷೆ ಇಮ್ಮಡಿಯಾಗಿದೆ.

ರಜಿನಿಯ ಈ ಹಿಂದಿನ ಚಿತ್ರ ‘ದರ್ಬಾರ್’ ಬಿಡುಗಡೆಯಾಗಿದ್ದು ಒಂದೂವರೆ ವರ್ಷದ ಹಿಂದೆ. ಬರೋಬ್ಬರಿ 19 ತಿಂಗಳುಗಳ ನಂತರ ‘ಅಣ್ಣಾತೆ’ಯ ಮುಖಾಂತರ ರಜಿನಿ ಕಮ್​ಬ್ಯಾಕ್ ಮಾಡಿದ್ದು, ಫ್ಯಾನ್ಸ್​​ಗೆ ಸಂತಸ ತಂದಿದೆ. ಅಣ್ಣಾತೆ ಚಿತ್ರದಲ್ಲಿ ಕೀರ್ತಿಸುರೇಶ್ , ನಯನತಾರ, ಪ್ರಕಾಶ್ ರೈ, ಜಗಪತಿಬಾಬು, ಖುಷ್ಬೂ, ಮೀನಾ ಮೊದಲಾದ ಖ್ಯಾತ ತಾರೆಯರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಶಿವ ಆಕ್ಷನ್ ಕಟ್ ಹೇಳಿದ್ದು, ಸನ್ ಪಿಕ್ಚರ್ಸ್ ನಿರ್ಮಿಸಿದೆ.

ಚೆನ್ನೈನಲ್ಲಿ ಅಣ್ಣಾತೆ ಚಿತ್ರದ ಬಿಡುಗಡೆಯ ಸಂಭ್ರಮ:

ಮುಂಬೈನಲ್ಲಿ ಅಣ್ಣಾತೆ ಬಿಡುಗಡೆ ಸಂಭ್ರಮ:

ಬಾಲಾಜಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ರಜಿನಿ ಸ್ನೇಹಿತ ರಾಜ್ ಬಹದ್ದೂರ್ ನಗರದ ಶ್ರೀ ಬಾಲಾಜಿ ಥಿಯೇಟರ್ ಗೆ ರಜಿನಿಕಾಂತ್ ಸ್ನೇಹಿತ ರಾಜ್ ಬಹದ್ದೂರ್ ಇಂದು ಭೇಟಿ ನೀಡಿದ್ದಾರೆ. ಅವರು ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದು, ನಂತರ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಅಪ್ಪು ಗಿಡವನ್ನ ವಿತರಿಸಿದ್ದಾರೆ. ಕರ್ನಾಟಕ ರಾಜ್ಯ ರಜಿನಿಕಾಂತ್ ಫ್ಯಾನ್ಸ್ ಅಸೋಸಿಯೇಷನ್ ಅವರಿಂದ ಸಸಿ ವಿತರಣೆ ಮಾಡಲಾಗುತ್ತಿದೆ.

‘ಅಣ್ಣಾತೆ’ ಚಿತ್ರದ ಬಿಡುಗಡೆ ಸಂಭ್ರಮದ ಲೈವ್ ಇಲ್ಲಿ ಲಭ್ಯವಿದೆ: ಇದನ್ನೂ ಓದಿ:

Viral Video: ಮನಿಕೆ ಮಗೆ ಹಿತೆ ಹಾಡಲು ಪ್ರಯತ್ನಿಸಿದ ವ್ಯಕ್ತಿ! ವಿಡಿಯೊ ಮಜವಾಗಿದೆ ನೀವೇ ನೋಡಿ

‘ಆ ದಿನ ಪುನೀತ್ ಡಲ್ ಆಗಿದ್ದರು’; ಅಪ್ಪು ಸಾವಿನ ನಂತರ ಅಚ್ಚರಿಯ ವಿಚಾರ ಬಿಚ್ಚಿಟ್ಟ ಶಿವರಾಜ್​ಕುಮಾರ್​

Published On - 9:55 am, Thu, 4 November 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ