ರಿಲೀಸ್​​ಗೆ ಎರಡು ವರ್ಷ ಇರುವಾಗಲೇ 200 ಕೋಟಿ ರೂ. ಬಿಸ್ನೆಸ್ ಮಾಡಿದ ಬನ್ಸಾಲಿ ಸಿನಿಮಾ  

|

Updated on: Sep 17, 2024 | 10:27 AM

ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಕೆಲಸ ಮಾಡೋ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಈ ರೀತಿ ಅವಕಾಶ ಸಿಕ್ಕಾಗ ಹೀರೋಗಳು ಮುಂದೆ ಬಂದು ಖುಷಿಖುಷಿಯಿಂದ ಸಿನಿಮಾ ಮಾಡುತ್ತಾರೆ. ಈಗ ಸಂಜಯ್ ಲೀಲಾ ಬನ್ಸಾಲಿ ಹಾಗೂ ರಣಬೀರ್ ಕಪೂರ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಲವ್ ಆ್ಯಂಡ್ ವಾರ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡಿದೆ.

ರಿಲೀಸ್​​ಗೆ ಎರಡು ವರ್ಷ ಇರುವಾಗಲೇ 200 ಕೋಟಿ ರೂ. ಬಿಸ್ನೆಸ್ ಮಾಡಿದ ಬನ್ಸಾಲಿ ಸಿನಿಮಾ  
ಬನ್ಸಾಲಿ
Follow us on

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಆರಂಭಕ್ಕೆ ಇನ್ನೂ ಕೆಲವು ತಿಂಗಳು ಬೇಕಿದೆ. ಆಗಲೇ ಈ ಸಿನಿಮಾ ಎಲ್ಲಾ ಡೀಲ್​​ಗಳನ್ನು ಮಾಡಿ ಮುಗಿಸಿದೆಯಂತೆ. ರಿಲೀಸ್​ಗೂ ಮೊದಲೇ ಚಿತ್ರ 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.

ಸಿನಿಮಾದ ಟ್ರೇಲರ್ ಅಥವಾ ಟೀಸರ್ ನೋಡಿದ ಬಳಿಕ ಕೆಲವು ಒಟಿಟಿ ಸಂಸ್ಥೆಗಳು ಸಿನಿಮಾ ಖರೀದಿಗೆ ಮುಂದೆ ಬರುತ್ತವೆ. ಆದರೆ, ಬನ್ಸಾಲಿ ವಿಚಾರದಲ್ಲಿ ಆ ರೀತಿ ಅಲ್ಲ. ಬನ್ಸಾಲಿ ಅವರ ಕೆಲಸದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ‘ಹೀರಾಮಂಡಿ’ ಸೀರಿಸ್ ಮೂಲಕ ಹೆಸರು ಮಾಡಿದ್ದರು. ಈ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಕಂಡಿತ್ತು. ಈಗ ಇದೇ ಒಟಿಟಿ ಅವರ ಮುಂದಿನ ಚಿತ್ರವನ್ನು ಖರೀದಿ ಮಾಡಿದೆ.

‘ಲವ್ ಆ್ಯಂಡ್ ವಾರ್’ ಚಿತ್ರದ ಶೂಟಿಂಗ್ ಆರಂಭಕ್ಕೂ ಮೊದಲು 130 ಕೋಟಿ ರೂಪಾಯಿ ಕೊಟ್ಟು ಸಿನಿಮಾನ ನೆಟ್​ಫ್ಲಿಕ್ಸ್ ಖರೀದಿ ಮಾಡಿದೆ. ಒಂದೊಮ್ಮೆ ಸಿನಿಮಾ ಒಳ್ಳೆಯ ಗಳಿಕೆ ಮಾಡಿದರೆ ಈ ಮೊತ್ತವನ್ನು ಹೆಚ್ಚಿಸುವ ಬಗ್ಗೆಯೂ ಮಾತುಕತೆ ಆಗಿದೆಯಂತೆ. ಇನ್ನು, ಮ್ಯೂಸಿಕ್ ಹಕ್ಕನ್ನು ‘ಸರೆಗಮ’ 35 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಇನ್ನು, ಟಿವಿ ಹಕ್ಕು ಬರೋಬ್ಬರಿ 50 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬನ್ಸಾಲಿ ಹೊಸ ಚಿತ್ರಕ್ಕೆ ರಣಬೀರ್ ಕಪೂರ್ ಹೀರೋ; ಶೂಟಿಂಗ್​ಗೂ ಮೊದಲೇ ಷರತ್ತುಗಳ ಪಟ್ಟಿ ಇಟ್ಟ ನಟ

‘ಲವ್ ಆ್ಯಂಡ್ ವಾರ್’ ಸಿನಿಮಾದ ಬಜೆಟ್ 200 ಕೋಟಿ ರೂಪಾಯಿ. ಸಿನಿಮಾ ರಿಲೀಸ್​ಗೂ ಮೊದಲೇ ಬಜೆಟ್​ನಷ್ಟೇ ಬಿಸ್ನೆಸ್ ಸಿನಿಮಾ ಮಾಡಿದೆ. ಹೀಗಾಗಿ ಸಿನಿಮಾ ರಿಲೀಸ್ ಆದ ಬಳಿಕ ಬರೋದೆಲ್ಲವೂ ಲಾಭವೇ ಆಗಲಿದೆ. ಈ ಚಿತ್ರದಲ್ಲಿ ಬರುವ ಲಾಭದಲ್ಲಿ ರಣಬೀರ್ ಕಪೂರ್​ಗೂ ಪಾಲಿದೆ ಎನ್ನಲಾಗಿದೆ. ಈ ಸಿನಿಮಾ ರಿಲೀಸ್ ಆಗೋದು 2026ರಲ್ಲಿ ಎನ್ನಲಾಗಿದೆ. ಅಂದರೆ ಸಿನಿಮಾಗೆ ಇನ್ನೂ ಎರಡು ವರ್ಷ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.