ಶ್ರೀಮಂತ ವೇಶ್ಯೆಯರ ಪಾತ್ರದಲ್ಲಿ ಫೇಮಸ್​ ನಟಿಯರು; ಇದು ‘ಹೀರಾಮಂಡಿ’ ಕಹಾನಿ

|

Updated on: Feb 01, 2024 | 12:45 PM

ಬಹುನಿರೀಕ್ಷಿತ ‘ಹೀರಾಮಂಡಿ’ ವೆಬ್​ ಸರಣಿಯ ಫಸ್ಟ್​ ಲುಕ್​ ವಿಡಿಯೋ ಬಿಡುಗಡೆ ಆಗಿದೆ. ‘ಹೀರಾಮಂಡಿ’ ಶೀರ್ಷಿಕೆಯ ಜೊತೆ ‘ದಿ ಡೈಮಂಡ್​ ಬಜಾರ್​’ ಎಂಬ ಟ್ಯಾಗ್​ ಲೈನ್​ ಗಮನ ಸೆಳೆಯುತ್ತದೆ. ನೆಟ್​ಫ್ಲಿಕ್ಸ್​ನಲ್ಲಿ ಈ ವೆಬ್​ ಸಿರೀಸ್​ ಬಿಡುಗಡೆ ಆಗಲಿದೆ. ವೈಭವದಿಂದ ಕೂಡಿರುವ ಫಸ್ಟ್​ ಲುಕ್​ ವಿಡಿಯೋದಲ್ಲಿ ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಅದಿತಿ ರಾವ್​ ಹೈದರಿ, ಮನೀಶಾ ಕೊಯಿರಾಲಾ ಮುಂತಾದ ನಟಿಯರ ಗೆಟಪ್​ ಗಮನ ಸೆಳೆಯುವಂತಿದೆ.

ಶ್ರೀಮಂತ ವೇಶ್ಯೆಯರ ಪಾತ್ರದಲ್ಲಿ ಫೇಮಸ್​ ನಟಿಯರು; ಇದು ‘ಹೀರಾಮಂಡಿ’ ಕಹಾನಿ
‘ಹೀರಾಮಂಡಿ’ ಪೋಸ್ಟರ್​
Follow us on

ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali) ಅವರು ಏನೇ ಮಾಡಿದರೂ ಅಲ್ಲೊಂದು ವಿಶೇಷ ಇದ್ದೇ ಇರುತ್ತದೆ. ಅವರ ಪ್ರತಿ ಸಿನಿಮಾ ಕೂಡ ವೈಭವದಿಂದ ಕೂಡಿರುತ್ತದೆ. ಇದೇ ಮೊದಲ ಬಾರಿಗೆ ಸಂಜಯ್​ ಲೀಲಾ ಬನ್ಸಾಲಿ ಅವರು ವೆಬ್​ ಸಿರೀಸ್​ ನಿರ್ದೇಶನ ಮಾಡಿದ್ದಾರೆ. ‘ಹೀರಾಮಂಡಿ’ (Heeramandi) ಶೀರ್ಷಿಕೆಯ ಈ ಸೀರಿಸ್​ನಲ್ಲಿ ಬಾಲಿವುಡ್​ನ ಅನೇಕ ನಟಿಯರು ಬಣ್ಣ ಹಚ್ಚಿದ್ದಾರೆ. ಮನೀಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಅದಿತಿ ರಾವ್​ ಹೈದರಿ ಸೇರಿದಂತೆ ಅನೇಕ ನಟಿಯರು ಈ ಸಿರೀಸ್​ನಲ್ಲಿ ನಟಿಸಿದ್ದಾರೆ. ಅವರೆಲ್ಲ ಶ್ರೀಮಂತ ವೇಶ್ಯೆಯರ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ. ನೆಟ್​ಫ್ಲಿಕ್ಸ್​ (Netflix) ಮೂಲಕ ‘ಹೀರಾಮಂಡಿ’ ಬಿಡುಗಡೆ ಆಗಲಿದೆ. ಈಗ ಇದರ ಫಸ್ಟ್​ ಲುಕ್​ ವಿಡಿಯೋ ರಿಲೀಸ್​ ಮಾಡಲಾಗಿದೆ.

‘ಹೀರಾಮಂಡಿ’ ವೆಬ್​ ಸರಣಿಯ ಫಸ್ಟ್​ ಲುಕ್​ ವಿಡಿಯೋ ನೋಡಿದ ಪ್ರೇಕ್ಷಕರಿಗೆ ಸಖತ್​ ಇಷ್ಟ ಆಗಿದೆ. ಗತ ಕಾಲದ ಕಹಾನಿಯನ್ನು ಇದು ಒಳಗೊಂಡಿದೆ. ಸ್ವಾತಂತ್ರ್ಯಪೂರ್ವದಲ್ಲಿ ಶ್ರೀಮಂತ ಗಿರಾಕಿಗಳನ್ನು ಹೊಂದಿದ್ದ ವೇಶ್ಯರ ಬದುಕಿನ ಬಗ್ಗೆ ‘ಹೀರಾಮಂಡಿ’ ವೆಬ್​ ಸರಣಿಯಲ್ಲಿ ತೋರಿಸಲಾಗುವುದು. ಅವರ ಜೀವನದಲ್ಲಿನ ಪ್ರೀತಿ ಮತ್ತು ದ್ರೋಹದ ಕಥೆ ಇದರಲ್ಲಿ ಇರಲಿದೆ. ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಕೂಡ ಇದರಲ್ಲಿ ನಟಿಸಿದ್ದಾರೆ.

ಬನ್ಸಾಲಿ ಹೊಸ ಚಿತ್ರಕ್ಕೆ ರಣಬೀರ್ ಕಪೂರ್ ಹೀರೋ; ಶೂಟಿಂಗ್​ಗೂ ಮೊದಲೇ ಷರತ್ತುಗಳ ಪಟ್ಟಿ ಇಟ್ಟ ನಟ

‘ದೇವದಾಸ್​’, ‘ಪದ್ಮಾವತ್​’, ‘ಬಾಜಿರಾವ್​ ಮಸ್ತಾನಿ’, ‘ಗಂಗೂಬಾಯಿ ಕಾಠಿಯಾವಾಡಿ’ ಮುಂತಾದ ಕ್ಲಾಸಿಕ್​ ಸಿನಿಮಾಗಳನ್ನು ನೀಡಿರುವ ಸಂಜಯ್​ ಲೀಲಾ ಬನ್ಸಾಲಿ ಅವರು ಇದೇ ಮೊದಲ ಬಾರಿಗೆ ವೆಬ್​ ಸಿರೀಸ್​ ನಿರ್ದೇಶನ ಮಾಡಿರುವುದರಿಂದ ‘ಹೀರಾಮಂಡಿ’ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಅದ್ದೂರಿ ಬಜೆಟ್​ನಲ್ಲಿ ಇದು ನಿರ್ಮಾಣ ಆಗಿದೆ. ಬನ್ಸಾಲಿ ಅವರ ಸಿನಿಮಾಗಳಲ್ಲಿ ಇರುವಂತಹ ಅದ್ದೂರಿತನ ‘ಹೀರಾಮಂಡಿ’ ಫಸ್ಟ್​ ಲುಕ್​ ವಿಡಿಯೋದಲ್ಲೂ ಕಾಣಿಸಿದೆ.

‘ಹೀರಾಮಂಡಿ’ ಫಸ್ಟ್​ ಲುಕ್​ ವಿಡಿಯೋ:

‘ಹೀರಾಮಂಡಿ’ ಶೀರ್ಷಿಕೆಗೆ ‘ದಿ ಡೈಮಂಡ್​ ಬಜಾರ್​’ ಎಂಬ ಟ್ಯಾಗ್​ ಲೈನ್​ ಇದೆ. ಈ ಸಿರೀಸ್​ ಯಾವಾಗ ರಿಲೀಸ್​ ಆಗಲಿದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಆದಷ್ಟು ಬೇಗ ಇದನ್ನು ಬಿಡುಗಡೆ ಮಾಡಿ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ. ಫಸ್ಟ್​ ಲುಕ್​ ವಿಡಿಯೋದಲ್ಲಿ ಸೋನಾಕ್ಷಿ ಸಿನ್ಹಾ, ಮನೀಶಾ ಕೊಯಿರಾಲಾ, ರಿಚಾ ಚಡ್ಡಾ, ಅದಿತಿ ರಾವ್​ ಹೈದರಿ ಮುಂತಾದ ನಟಿಯರ ಗೆಟಪ್​ ಗಮನ ಸೆಳೆಯುವಂತಿದೆ. ಒಟಿಟಿಯಲ್ಲಿ ಈ ಸೀರಿಸ್​ ಹೊಸ ದಾಖಲೆ ಬರೆಯಲಿದೆ ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ