100 ಕೋಟಿ ರೂಪಾಯಿಗೆ ಸೇಲ್ ಆಯ್ತು ಶಾರುಖ್ ಸಿನಿಮಾದ ಒಟಿಟಿ ಹಕ್ಕು; ಥಿಯೇಟರ್ ಕಥೆ ಏನು?

ಕೊವಿಡ್ ಬಳಿಕ ಒಟಿಟಿ ವ್ಯಾಪ್ತಿ ಹೆಚ್ಚಿದೆ. ಚಿತ್ರಮಂದಿರದಲ್ಲಿ ಸಿನಿಮಾಗಳನ್ನು ನೋಡಿ ಆನಂದಿಸುತ್ತಿದ್ದವರು ಈಗ ಮನೆಯಲ್ಲೇ ಕುಳಿತು ಸಿನಿಮಾ ನೋಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣಕ್ಕೆ ಒಟಿಟಿ ಪ್ಲಾಟ್​ಫಾರ್ಮ್​ಗಳ ಮಧ್ಯೆ ಸ್ಪರ್ಧೆ ಜೋರಾಗಿದೆ.

100 ಕೋಟಿ ರೂಪಾಯಿಗೆ ಸೇಲ್ ಆಯ್ತು ಶಾರುಖ್ ಸಿನಿಮಾದ ಒಟಿಟಿ ಹಕ್ಕು; ಥಿಯೇಟರ್ ಕಥೆ ಏನು?
ಶಾರುಖ್​
Edited By:

Updated on: Oct 13, 2022 | 4:05 PM

ಶಾರುಖ್ ಖಾನ್ (Shah Rukh Khan) ಚಿತ್ರಗಳು ಇತ್ತೀಚಿಗೆ ಸೋಲು ಕಾಣುತ್ತಿವೆ. ಈಗ ಒಂದು ದೊಡ್ಡ ಗ್ಯಾಪ್​ನ ಬಳಿಕ ಮರಳುತ್ತಿರುವುದಕ್ಕೆ ಅವರ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಹೀಗಾಗಿ, ಶಾರುಖ್​ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಮತ್ತೆ ಒಳ್ಳೆಯ ಬಿಸ್ನೆಸ್ ಮಾಡುವ ನಿರೀಕ್ಷೆ ಇದೆ. ಈಗ ಶಾರುಖ್ ಖಾನ್ ನಟನೆಯ ‘ಜವಾನ್​’ ಸಿನಿಮಾದ (Jawan Movie)  ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳುವ ಮೊದಲೇ ಈ ಚಿತ್ರದ ಒಟಿಟಿ ಹಕ್ಕು ನೂರಾರು ಕೋಟಿ ರೂಪಾಯಿಗೆ ಸೇಲ್ ಆಗಿದೆ ಎಂದು ವರದಿ ಆಗಿದೆ. ಹಾಗಂದ ಮಾತ್ರಕ್ಕೆ ಈ ಚಿತ್ರ ನೇರವಾಗಿ ಒಟಿಟಿಗೆ ರಿಲೀಸ್ ಆಗಲಿದೆ ಎಂದರ್ಥವಲ್ಲ. ‘ಜವಾನ್​’ ಚಿತ್ರಮಂದಿರದಲ್ಲಿ ರಿಲೀಸ್ ಆದ ಬಳಿಕವೇ ಒಟಿಟಿಗೆ ಹೆಜ್ಜೆ ಹಾಕಲಿದೆ.

ಕೊವಿಡ್ ಬಳಿಕ ಒಟಿಟಿ ವ್ಯಾಪ್ತಿ ಹೆಚ್ಚಿದೆ. ಚಿತ್ರಮಂದಿರದಲ್ಲಿ ಸಿನಿಮಾಗಳನ್ನು ನೋಡಿ ಆನಂದಿಸುತ್ತಿದ್ದವರು ಈಗ ಮನೆಯಲ್ಲೇ ಕುಳಿತು ಸಿನಿಮಾ ನೋಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣಕ್ಕೆ ಒಟಿಟಿ ಪ್ಲಾಟ್​ಫಾರ್ಮ್​ಗಳ ಮಧ್ಯೆ ಸ್ಪರ್ಧೆ ಜೋರಾಗಿದೆ. ಸ್ಟಾರ್ ನಟರ ಚಿತ್ರಗಳನ್ನು ದೊಡ್ಡ ಮೊತ್ತಕ್ಕೆ ಒಟಿಟಿ ಕಂಪನಿಗಳು ಪಡೆದುಕೊಳ್ಳುತ್ತಿವೆ. ಈಗ ಶಾರುಖ್ ನಟನೆಯ ‘ಜವಾನ್​’ ಚಿತ್ರದ ಶೂಟಿಂಗ್ ಪೂರ್ಣಗೊಳ್ಳುವ ಮೊದಲೇ ಇದನ್ನು ಅಮೇಜಾನ್ ಪ್ರೈಮ್ ವಿಡಿಯೋ 100 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

‘ಜವಾನ್’ ಚಿತ್ರಕ್ಕೆ ದಕ್ಷಿಣ ಭಾರತ ಹಾಗೂ ಬಾಲಿವುಡ್​ ಎರಡೂ ಕಡೆ ನಿರೀಕ್ಷೆ ಸೃಷ್ಟಿ ಆಗಿದೆ. ಇದಕ್ಕೆ ಕಾರಣ ಈ ಚಿತ್ರಕ್ಕೆ ತಮಿಳಿನ ಅಟ್ಲಿ ನಿರ್ದೇಶನ ಮಾಡುತ್ತಿರುವುದು ಹಾಗೂ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ನಟಿಸುತ್ತಿರುವುದು. ದಳಪತಿ ವಿಜಯ್ ಜತೆ ಸೇರಿ ಮಾಡಿದ ಮೂರು ಚಿತ್ರಗಳು ಹಿಟ್ ಆಗಿರುವುದರಿಂದ ಅಟ್ಲಿ ನಿರ್ದೇಶನದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಸತತವಾಗಿ ಸೋಲು ಕಂಡಿರುವ ಶಾರುಖ್​ಗೆ ಮತ್ತೆ ಗೆಲುವಿನ ರುಚಿಯನ್ನು ಅಟ್ಲಿ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ
Shah Rukh Khan: ಶಾರುಖ್​ ಖಾನ್​ ಮನೆಯಲ್ಲಿ ಗಣೇಶ ಚತುರ್ಥಿ; ಮೋದಕ ತಿಂದು ನಟ ಹೇಳಿದ್ದೇನು?
Nayanthara: ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು

ಇದನ್ನೂ ಓದಿ: Nayanthara: ಅವಳಿ ಮಕ್ಕಳನ್ನು ಪಡೆದ ಬೆನ್ನಲ್ಲೇ ಶಾರುಖ್​ ಜೊತೆ ರಾಜಸ್ಥಾನಕ್ಕೆ ಹೊರಡಲು ಸಜ್ಜಾದ ನಯನತಾರಾ

‘ಜವಾನ್​’ನ ಕೊನೆಯ ಹಂತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಯಲಿದೆ. ಇಡೀ ತಂಡ ಅಲ್ಲಿಗೆ ತೆರಳಲು ರೆಡಿ ಆಗಿದೆ. ಶಾರುಖ್ ಖಾನ್​ಗೆ ಜತೆಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ‘ಗಾಡ್​ಫಾದರ್’ ಚಿತ್ರದಲ್ಲಿ ನಯನತಾರಾ ನಟಿಸಿದ್ದರು. ಈ ಸಿನಿಮಾ ಗೆದ್ದಿರುವುದರಿಂದ ಅವರಿಗೆ ಹೊಸ ಹುರುಪು ಸಿಕ್ಕಿದೆ. ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಅವರು ಅವಳಿ ಮಕ್ಕಳನ್ನು ಪಡೆದಿರುವುದರಿಂದ ಕುಟುಂಬದಲ್ಲಿ ಖುಷಿ ಮೂಡಿದೆ.

Published On - 4:04 pm, Thu, 13 October 22