Dunki Movie: ಒಟಿಟಿಗೆ ಕಾಲಿಟ್ಟ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ; ವೀಕ್ಷಣೆ ಎಲ್ಲಿ?

| Updated By: ರಾಜೇಶ್ ದುಗ್ಗುಮನೆ

Updated on: Feb 15, 2024 | 7:52 AM

ಶಾರುಖ್ ಖಾನ್ ಹಾಗೂ ರಾಜ್​ಕುಮಾರ್ ಹಿರಾನಿ ‘ಡಂಕಿ’ ಚಿತ್ರದ ಮೂಲಕ ಮೊದಲ ಬಾರಿಗೆ ಜೊತೆ ಕೈ ಜೋಡಿಸಿದರು. ಈ ಕಾರಣಕ್ಕೆ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ, ಈ ನಿರೀಕ್ಷೆಯ ಮಟ್ಟವನ್ನು ಸಂಪೂರ್ಣವಾಗಿ ತಲುಪಲು ಸಿನಿಮಾ ಬಳಿ ಸಾಧ್ಯವಾಗಿಲ್ಲ. ಈಗ ಸಿನಿಮಾ ಒಟಿಟಿಗೆ ಬಂದಿದೆ.

Dunki Movie: ಒಟಿಟಿಗೆ ಕಾಲಿಟ್ಟ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ; ವೀಕ್ಷಣೆ ಎಲ್ಲಿ?
ಶಾರುಖ್
Follow us on

ಶಾರುಖ್ ಖಾನ್ (Shah Rukh Khan) ನಟನೆಯ ‘ಡಂಕಿ’ ಸಿನಿಮಾ ಕಳೆದ ವರ್ಷ ಡಿಸೆಂಬರ್ 21ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರು ಮಾಸ್ ಅವತಾರ ಬಿಟ್ಟು ಕ್ಲಾಸ್ ಆಗಿ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಈ ಚಿತ್ರ ಸಾಮಾನ್ಯ ಗಳಿಕೆ ಮಾಡಿದೆ. ಈ ಚಿತ್ರದಿಂದ ಶಾರುಖ್ ಖಾನ್ ಅವರ ಇಮೇಜ್ ಹೆಚ್ಚಿದೆ. ಈ ಚಿತ್ರ ಯಾವಾಗ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಕಾದಿದ್ದ ಫ್ಯಾನ್ಸ್​ಗೆ ಉತ್ತರ ಸಿಕ್ಕಿದೆ. ಈ ಸಿನಿಮಾ ನೆಟ್​ಫ್ಲಿಕ್ಸ್ ಮೂಲಕ ಪ್ರಸಾರ ಆರಂಭಿಸಿದೆ.

ಇದು ಒಟಿಟಿ ಯುಗ. ಸಿನಿಮಾ ಥಿಯೇಟರ್​​ನಲ್ಲಿ ರಿಲೀಸ್ ಆಗಿ ಒಂದು ತಿಂಗಳ ಒಳಗೆ ಒಟಿಟಿಗೆ ಕಾಲಿಟ್ಟಿರುತ್ತದೆ. ಥಿಯೇಟರ್​ನಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡಿದರೆ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗೋಕೆ ಸ್ವಲ್ಪ ಹೆಚ್ಚಿನ ಸಮಯ ಹಿಡಿಯುತ್ತದೆ. ‘ಡಂಕಿ’ ರಿಲೀಸ್ ಆಗಿ ಎರಡು ತಿಂಗಳು ತುಂಬಲು ಒಂದು ವಾರ ಇರುವಾಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಫೆಬ್ರವರಿ 14 ಪ್ರೇಮಿಗಳ ದಿನ. ಈ ವಿಶೇಷ ದಿನದಂದು ರಾತ್ರಿ ಸಿನಿಮಾ ಪ್ರಸಾರ ಆರಂಭಿಸಿದೆ.

ನಿರ್ದೇಶಕ ರಾಜ್​ಕುಮಾರ್ ಹಿರಾನಿ ಅವರು ಬಾಲಿವುಡ್​ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ‘ಮುನ್ನಾ ಭಾಯ್ ಎಂಬಿಬಿಎಸ್’, ‘ಸಂಜು’, ‘3 ಈಡೀಯಟ್ಸ್’, ‘ಪಿಕೆ’ ರೀತಿಯ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ಅವರು ‘ಡಂಕಿ’ ಚಿತ್ರದ ಮೂಲಕ ಮೊದಲ ಬಾರಿಗೆ ಶಾರುಖ್ ಖಾನ್ ಜೊತೆ ಕೈ ಜೋಡಿಸಿದರು. ಈ ಕಾರಣಕ್ಕೆ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ, ಈ ನಿರೀಕ್ಷೆಯ ಮಟ್ಟವನ್ನು ಸಂಪೂರ್ಣವಾಗಿ ತಲುಪಲು ಸಿನಿಮಾ ಬಳಿ ಸಾಧ್ಯವಾಗಿಲ್ಲ.

‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ವಿಕ್ಕಿ ಕೌಶಲ್, ಬೋಮನ್ ಇರಾನಿ, ತಾಪ್ಸಿ ಪನ್ನು ಮೊದಲಾದವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರವನ್ನು ರಾಜ್​ಕುಮಾರ್ ಹಿರಾನಿ ಹಾಗೂ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ಥಿಯೇಟರ್​ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು. ಅಕ್ರಮವಾಗಿ ವಿದೇಶಕ್ಕೆ ತೆರಳುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾನಲ್ಲಿ ಶಾರುಖ್ ಖಾನ್ ನಟಿಸ್ತಾರಾ? ಯಶ್ ಕೊಟ್ಟರು ಉತ್ತರ

ಶಾರುಖ್ ಖಾನ್ ಅವರ ಬೇಡಿಕೆ ಹೆಚ್ಚಿದೆ. 2018ರಲ್ಲಿ ರಿಲೀಸ್ ಆದ ‘ಜೀರೋ’ ಚಿತ್ರದ ಬಳಿಕ ಶಾರುಖ್ ಖಾನ್ ಅವರು ಸೈಲೆಂಟ್ ಆದರು. ನಾಲ್ಕು ವರ್ಷ ಅವರು ಗ್ಯಾಪ್ ತೆಗೆದುಕೊಂಡರು. 2023ರಲ್ಲಿ ಅವರ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆದವು. ಕಳೆದ ವರ್ಷ ಜನವರಿ 25ರಂದು ರಿಲೀಸ್ ಆದ ‘ಪಠಾಣ್’ ಗೆಲುವು ಕಂಡಿತು. ನಂತರ ಸೆಪ್ಟೆಂಬರ್​ನಲ್ಲಿ ತೆರೆಗೆ ಬಂದ ‘ಜವಾನ್’ ಕೂಡ ಗೆದ್ದಿತು. ಈ ಎರಡೂ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ 1000 ಕೋಟಿ ರೂಪಾಯಿ ತಲುಪಿದೆ. ‘ಡಂಕಿ’ ಸಿನಿಮಾ ಕೂಡ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 400+ ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ