ಅಭಿಮಾನಿಗಳಿಗೆ ಶಾರುಖ್​ ಖಾನ್​ ಸರ್​ಪ್ರೈಸ್​; ಲಾಂಚ್ ಆಗಲಿದೆ SRK+ ಒಟಿಟಿ

ಡಿಸ್ನಿ+ ಹಾಟ್​ಸ್ಟಾರ್​ ಈಗಾಗಲೇ ದೊಡ್ಡ ಮಟ್ಟದ ಹೆಸರು ಮಾಡಿದೆ. ಈ ಒಟಿಟಿ ಜತೆ ಎಸ್​ಆರ್​ಕೆ+ ಕೊಲಾಬರೇಷನ್​ ಮಾಡಿಕೊಳ್ಳಲಿದೆ ಎನ್ನಲಾಗಿದೆ.  ಶಾರುಖ್​ ಖಾನ್​ ಈ ಬಗ್ಗೆ ಶೀಘ್ರವೇ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಅಭಿಮಾನಿಗಳಿಗೆ ಶಾರುಖ್​ ಖಾನ್​ ಸರ್​ಪ್ರೈಸ್​; ಲಾಂಚ್ ಆಗಲಿದೆ SRK+ ಒಟಿಟಿ
ಶಾರುಖ್​ ಖಾನ್
Updated By: ರಾಜೇಶ್ ದುಗ್ಗುಮನೆ

Updated on: Mar 16, 2022 | 1:59 PM

ಇದು ಒಟಿಟಿ (OTT) ಯುಗ. ಕೊರೊನಾ ಕಾಣಿಸಿಕೊಂಡ ನಂತರದಲ್ಲಿ ಜನರು ಒಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಒಟಿಟಿ ಪ್ಲಾಟ್​ಫಾರ್ಮ್​ಗಳ ಮಧ್ಯೆ ದೊಡ್ಡ ಮಟ್ಟದ ಕಾಂಪಿಟೇಷನ್​ ನಡೆಯುತ್ತಿದೆ. ಹಲವು ದಿಗ್ಗಜರು ಒಟಿಟಿ ಪ್ಲಾಟ್​ಫಾರ್ಮ್​ ಪರಿಚಯಿಸುತ್ತಿದ್ದಾರೆ. ನೆಟ್​​ಫ್ಲಿಕ್ಸ್​, ಅಮೇಜಾನ್​ ಪ್ರೈಮ್​ ವಿಡಿಯೋ, ಡಿಸ್ನಿ+ ಹಾಟ್​ಸ್ಟಾರ್​ ನಡುವೆ ದೊಡ್ಡ ಮಟ್ಟದ ಕಾಂಪಿಟೇಷನ್​ ಇದೆ. ಈಗ ಶಾರುಖ್​ ಖಾನ್​ ಕೂಡ ಇದೇ ಉದ್ಯಮದತ್ತ ಮುಖ ಮಾಡಿದ್ದಾರೆ. ಶಾರುಖ್​ ಖಾನ್ (Shah Rukh Khan)​ ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟ. ‘ಪಠಾಣ್​’ ಸಿನಿಮಾ ಕೆಲಸದಲ್ಲಿ ಅವರು ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದರ ಜತೆಗೆ ನಿರ್ಮಾಣದಲ್ಲೂ ಶಾರುಖ್​ ಖಾನ್​ ಬ್ಯುಸಿ ಆಗಿದ್ದಾರೆ. ‘ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್​​’ ಸ್ಟುಡಿಯೋಸ್​ ಅಡಿಯಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗ ಅವರು ಒಟಿಟಿ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ. ಎಸ್​ಆರ್​ಕೆ+ (SRK+) ಹೆಸರಿನ ಒಟಿಟಿ ಪ್ಲಾಟ್​ಫಾರ್ಮ್​ ಲಾಂಚ್ ಮಾಡೋಕೆ ಶಾರುಖ್​ ರೆಡಿ ಆಗಿದ್ದಾರೆ.

ಎಸ್​ಆರ್​ಕೆ+ ಲೋಗೋವನ್ನು ಶಾರುಖ್​ ಖಾನ್​ ಶೇರ್​ ಮಾಡಿಕೊಂಡಿದ್ದಾರೆ. ‘ಒಟಿಟಿ ಜಗತ್ತಿನಲ್ಲಿ ಏನೇನೋ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಕಮೆಂಟ್​ ಬಾಕ್ಸ್​ನಲ್ಲಿ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಈ ವಿಚಾರ ಕೇಳಿ ಕರಣ್​ ಜೋಹರ್​ ಸಖತ್​ ಎಗ್ಸೈಟ್​ ಆಗಿದ್ದಾರೆ. ‘ಈ ವರ್ಷದ ಅತಿ ದೊಡ್ಡ ನ್ಯೂಸ್​. ಒಟಿಟಿ ಜಗತ್ತನ್ನು ಇದು ಬದಲಾಯಿಸಲಿದೆ. ಸೂಪರ್​ ಎಗ್ಸೈಟೆಡ್​’ ಎಂದು ಬರೆದುಕೊಂಡಿದ್ದಾರೆ ಕರಣ್​.

ಡಿಸ್ನಿ+ ಹಾಟ್​ಸ್ಟಾರ್​ ಈಗಾಗಲೇ ದೊಡ್ಡ ಮಟ್ಟದ ಹೆಸರು ಮಾಡಿದೆ. ಈ ಒಟಿಟಿ ಜತೆ ಎಸ್​ಆರ್​ಕೆ+ ಕೊಲಾಬರೇಷನ್​ ಮಾಡಿಕೊಳ್ಳಲಿದೆ ಎನ್ನಲಾಗಿದೆ.  ಶಾರುಖ್​ ಖಾನ್​ ಈ ಬಗ್ಗೆ ಶೀಘ್ರವೇ ಮಾಹಿತಿ ಹಂಚಿಕೊಳ್ಳಲಿದ್ದಾರೆ.

‘ಪಠಾಣ್​’ ರಿಲೀಸ್​ ಬಗ್ಗೆ ಶಾರುಖ್​ ಈ ಮೊದಲು ಮಾಹಿತಿ ನೀಡಿದ್ದರು.ಆಕ್ಷನ್ ಥ್ರಿಲ್ಲರ್ ಮಾದರಿಯ ‘ಪಠಾಣ್’ನಲ್ಲಿ ಸ್ಪೈ ಆಗಿ ಶಾರುಖ್ ಕಾಣಿಸಿಕೊಂಡಿದ್ದಾರೆ. ಟೀಸರ್ ಶೇರ್ ಮಾಡಿದ್ದ ಶಾರುಖ್, ‘ಬಹಳ ತಡವಾಗಿ ನಿಮ್ಮೆದುರು ಬರುತ್ತಿದ್ದೇವೆ ಎನ್ನುವುದು ನನಗೆ ತಿಳಿದಿದೆ. ಆದರೆ ದಿನಾಂಕವನ್ನು ನೆನಪಿಟ್ಟುಕೊಳ್ಳಿ. 2023ರ ಜನವರಿ 25ರಂದು ‘ಪಠಾಣ್’ ರಿಲೀಸ್ ಆಗಲಿದೆ’ ಎಂದು ಬರೆದಿದ್ದರು.

 

ಇದನ್ನೂ ಓದಿ: ತಾವೇ ನಟಿಸಿದ ಹಲವು ಹಿಟ್​ ಚಿತ್ರಗಳನ್ನು ನೋಡಿಯೇ ಇಲ್ಲ ಶಾರುಖ್​ ಖಾನ್​

80 ಕೋಟಿ ರೂಪಾಯಿಗೆ ಸೇಲ್​ ಆದ ಶಾರುಖ್​ ಖಾನ್ ಮತ್ತು ಆಲಿಯಾ ಭಟ್ ಹೊಸ​ ಚಿತ್ರ​

Published On - 4:20 pm, Tue, 15 March 22