ನಟಿ ಶ್ರೀಲೀಲಾ (Sreeleela) ಅವರ ಕೈಯಲ್ಲಿ ಈಗ ಅನೇಕ ಸಿನಿಮಾಗಳಿವೆ. ಕನ್ನಡದಿಂದ ವೃತ್ತಿಜೀವನ ಆರಂಭಿಸಿದ ಅವರಿಗೆ ಪರಭಾಷೆಯಲ್ಲೂ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಶ್ರೀಲೀಲಾ ನಟಿಸಿದ ಮೊದಲ ತೆಲುಗು ಸಿನಿಮಾ ‘ಪೆಳ್ಳಿ ಸಂದಡಿ’ (Pelli Sandadi). ಆ ಚಿತ್ರಕ್ಕೆ ಥಿಯೇಟರ್ನಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿಲ್ಲ. ಆದರೆ ನಟಿ ಶ್ರೀಲೀಲಾ ಅವರ ಹೆಸರು ಇಡೀ ಟಾಲಿವುಡ್ನಲ್ಲಿ ಪ್ರಚಲಿತಕ್ಕೆ ಬರಲು ಆ ಚಿತ್ರ ಕಾರಣವಾಯಿತು. ಅನೇಕರು ‘ಪೆಳ್ಳಿ ಸಂದಡಿ’ ಸಿನಿಮಾವನ್ನು ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡಿದ್ದಾರೆ. ಅಂಥವರಿಗಾಗಿ ಈಗ ಒಟಿಟಿಯಲ್ಲಿ ಬರುತ್ತಿದೆ. ಜೀ5 (Zee5 OTT) ತೆಕ್ಕೆಗೆ ‘ಪೆಳ್ಳಿ ಸಂದಡಿ’ ಸಿನಿಮಾದ ಪ್ರಸಾರ ಹಕ್ಕುಗಳು ಸಿಕ್ಕಿದೆ. ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಲಾಕ್ಡೌನ್ ಬಳಿಕ ಒಟಿಟಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಿತು. ಅನೇಕರು ಮನೆಯಲ್ಲೇ ಕುಳಿತು ಸಿನಿಮಾ ನೋಡುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಅಂಥವರಿಗಾಗಿ ಹೊಸ ಹೊಸ ಸಿನಿಮಾಗಳನ್ನು ಪ್ರಸಾರ ಮಾಡುವಲ್ಲಿ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಸದ್ಯ ‘ಪೆಳ್ಳಿ ಸಂದಡಿ’ ಚಿತ್ರವನ್ನು ಪ್ರಸಾರ ಮಾಡಲು ಜಿ5 ಸಜ್ಜಾಗಿದೆ. ಪ್ರಸಾರ ದಿನಾಂಕದ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಶ್ರೀಲೀಲಾ ನಟನೆ; ಯಾವ ಪಾತ್ರ? ಇಲ್ಲಿದೆ ಟ್ವಿಸ್ಟ್..
ಜೂನ್ 24ರಂದು ‘ಪೆಳ್ಳಿ ಸಂದಡಿ’ ಚಿತ್ರದ ಒಟಿಟಿ ಪ್ರೀಮಿಯರ್ ಆಗಲಿದೆ. ಈ ಸಿನಿಮಾದಲ್ಲಿ ಶ್ರೀಲೀಲಾ ಅವರನ್ನು ನೋಡಿ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಾಡುಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ಅವರಿಗೆ ಬೇರೆ ಸ್ಟಾರ್ ನಟರ ಸಿನಿಮಾಗಳಿಂದ ಆಫರ್ ಬರಲು ಆರಂಭಿಸಿದೆ. ಹಾಗಾಗಿ ಶ್ರೀಲೀಲಾ ಅವರ ಬಣ್ಣದ ಬದುಕಿಗೆ ಹೊಸ ತಿರುವು ನೀಡುವಲ್ಲಿ ಈ ಸಿನಿಮಾ ಯಶಸ್ವಿ ಆಗಿದೆ.
ಟಾಲಿವುಡ್ನಲ್ಲಿ ಶ್ರೀಲೀಲಾ ಅವರು ರವಿತೇಜ ನಟನೆಯ ‘ಧಮಾಕಾ’ ಸಿನಿಮಾಗೆ ನಾಯಕಿ ಆಗಿದ್ದಾರೆ. ‘ಅನಗನಗ ಒಕ ರಾಜು’ ಸೇರಿದಂತೆ ಹಲವು ಚಿತ್ರಗಳಿಗೆ ಅವರು ಸಹಿ ಮಾಡಿದ್ದಾರೆ. ಕನ್ನಡದಲ್ಲೂ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ನಭಾ ನಟೇಶ್ ಸೇರಿದಂತೆ ಕನ್ನಡದ ಅನೇಕ ನಟಿಯರು ತೆಲುಗು ಚಿತ್ರರಂಗದಲ್ಲಿ ಶೈನ್ ಆಗುತ್ತಿದ್ದಾರೆ. ಅವರ ಸಾಲಿಗೆ ಶ್ರೀಲೀಲಾ ಕೂಡ ಸೇರ್ಪಡೆ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.