Gadar 2: 526 ಕೋಟಿ ರೂಪಾಯಿ ಗಳಿಸಿದ ‘ಗದರ್​ 2’ ಚಿತ್ರ ಈಗ ಒಟಿಟಿಯಲ್ಲಿ ಲಭ್ಯ; ಇಲ್ಲಿದೆ ಮಾಹಿತಿ..

|

Updated on: Oct 05, 2023 | 11:59 AM

Gadar 2 OTT Release: ಒಟಿಟಿಯಲ್ಲಿ ‘ಗದರ್​ 2’ ಸಿನಿಮಾವನ್ನು ಜನರು ಮುಗಿಬಿದ್ದು ನೋಡುವುದು ಗ್ಯಾರಂಟಿ. ಒಟಿಟಿಯಲ್ಲಿ ಈ ಸಿನಿಮಾ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುವ ನಿರೀಕ್ಷೆ ಇದೆ. ಸನ್ನಿ ಡಿಯೋಲ್​ ಅಭಿಮಾನಿಗಳು ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿ ಖುಷಿಪಟ್ಟಿದ್ದಾರೆ. ಈಗ ಮನೆಯಲ್ಲೇ ಕುಳಿತು ನೋಡುವ ಸಮಯ ಬಂದಿದೆ.

Gadar 2: 526 ಕೋಟಿ ರೂಪಾಯಿ ಗಳಿಸಿದ ‘ಗದರ್​ 2’ ಚಿತ್ರ ಈಗ ಒಟಿಟಿಯಲ್ಲಿ ಲಭ್ಯ; ಇಲ್ಲಿದೆ ಮಾಹಿತಿ..
ಸನ್ನಿ ಡಿಯೋಲ್​, ಅಮೀಷಾ ಪಟೇಲ್​
Follow us on

ಚಿತ್ರಮಂದಿರದಲ್ಲಿ ‘ಗದರ್​ 2’ ಸಿನಿಮಾ (Gadar 2) ಧೂಳೆಬ್ಬಿಸಿತು. ಈ ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ ಗಳಿಸಿದ್ದು ಬರೋಬ್ಬರಿ 526 ಕೋಟಿ ರೂಪಾಯಿ. ನಟ ಸನ್ನಿ ಡಿಯೋಲ್ ಅವರಿಗೆ ಬಾಲಿವುಡ್​ನಲ್ಲಿ ಈ ಚಿತ್ರದಿಂದ ದೊಡ್ಡ ಸಕ್ಸಸ್​ ಸಿಕ್ಕಿದೆ. ಅವರು ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. ‘ಗದರ್​ 2’ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಎಂದು ಬಹುತೇಕರು ಊಹಿಸಿರಲಿಲ್ಲ. ದೊಡ್ಡ ಪರದೆಯಲ್ಲಿ ಅಬ್ಬರಿಸಿದ ಈ ಸಿನಿಮಾ ಈಗ ಒಟಿಟಿಗೆ ಕಾಲಿಡುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. ‘ಗದರ್​ 2’ ಸಿನಿಮಾದ ಒಟಿಟಿ ಹಕ್ಕು ‘ಜೀ5’ (Zee5) ಸಂಸ್ಥೆಯ ಪಾಲಾಗಿದೆ. ಅಕ್ಟೋಬರ್​ 6ರಿಂದ ಈ ಸಿನಿಮಾ ಒಟಿಟಿಯಲ್ಲಿ (OTT) ಸ್ಟ್ರೀಮ್​ ಆಗಲಿದೆ.

‘ಗದರ್ 2’ ಸಿನಿಮಾ ಅಭೂತಪೂರ್ವ ಯಶಸ್ಸು ಗಳಿಸಲು ಕಾರಣ ಆಗಿದ್ದೇ ಏಕಪರದೆ ಚಿತ್ರಮಂದಿರಗಳು. ಮಾಸ್​ ಅಂಶಗಳು ಹೆಚ್ಚಾಗಿದ್ದ ಈ ಸಿನಿಮಾವನ್ನು ಸಿಂಗಲ್​ ಸ್ಕ್ರೀನ್​ ಥಿಯೇಟರ್​ಗಳಲ್ಲಿ ಜನರು ಸಖತ್​ ಎಂಜಾಯ್​ ಮಾಡಿದರು. ಹಾಗೆಯೇ ಮಲ್ಟಿಪ್ಲೆಕ್ಸ್​ನಲ್ಲೂ ಈ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಂಡಿತು. ಹಾಗಾಗಿ ಸಿನಿಮಾಗೆ ಈ ಪರಿ ಕಲೆಕ್ಷನ್​ ಆಗಲು ಸಾಧ್ಯವಾಯ್ತು. ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗಿ ಪೈಪೋಟಿ ನೀಡಿದರೂ ಕೂಡ ‘ಗದರ್​ 2’ ಜಗ್ಗಲಿಲ್ಲ.

ಇದನ್ನೂ ಓದಿ: ‘ಪಠಾಣ್​’ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದ ‘ಗದರ್​ 2’; ಏನಿದು ಲೆಕ್ಕಾಚಾರ?

ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಜಾಸ್ತಿ ಇದೆ. ಹೊಸ ಸಿನಿಮಾಗಳನ್ನು ಜನರಿಗೆ ತಲುಪಿಸಲುವಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ಗಳು ಸ್ಪರ್ಧೆಗೆ ಇಳಿದಿವೆ. ಅದರಲ್ಲೂ ‘ಗದರ್​ 2’ ರೀತಿಯ ಬ್ಲಾಕ್​ ಬಸ್ಟರ್​ ಹಿಟ್​ ಸಿನಿಮಾಗಳು ಒಟಿಟಿಯಲ್ಲಿ ಸ್ಟ್ರೀಮ್​ ಆದರೆ ಜನರು ಮುಗಿಬಿದ್ದು ನೋಡುತ್ತಾರೆ ಎಂಬ ಗ್ಯಾರಂಟಿ ಇರುತ್ತದೆ. ಒಟಿಟಿಯಲ್ಲಿ ಈ ಸಿನಿಮಾ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುವ ನಿರೀಕ್ಷೆ ಇದೆ.

‘ಗದರ್​ 2’ ಸಿನಿಮಾಗೆ ಅನಿಲ್​ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್​ ಅವರಿಗೆ ಜೋಡಿಯಾಗಿ ಅಮೀಷಾ ಪಟೇಲ್​ ನಟಿಸಿದ್ದಾರೆ. ಅವರಿಗೂ ಕೂಡ ಈ ಚಿತ್ರದಿಂದ ಯಶಸ್ಸು ಸಿಕ್ಕಿದೆ. ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಸನ್ನಿ ಡಿಯೋಲ್​ ಅವರು ದೊಡ್ಡ ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಬಾಲಿವುಡ್​ನ ಅನೇಕರು ಭಾಗಿಯಾಗಿ ಸನ್ನಿ ಡಿಯೋಲ್​ ಅವರಿಗೆ ಅಭಿನಂದನೆ ತಿಳಿಸಿದರು. ಈಗ ಸನ್ನಿ ಡಿಯೋಲ್​ ನಟನೆಯ ಹೊಸ ಸಿನಿಮಾಗೆ ಆಮಿರ್ ಖಾನ್​ ಬಂಡವಾಳ ಹೂಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.