ಒಟಿಟಿಯಲ್ಲಿ ಅಶ್ಲೀಲ ಕಂಟೆಂಟ್; ಕೇಂದ್ರ ಹಾಗೂ ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಸುಪ್ರೀಂ ನೋಟಿಸ್

ಒಟಿಟಿ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಅಶ್ಲೀಲ ವಿಷಯದ ಹೆಚ್ಚಳದ ಬಗ್ಗೆ ಸಲ್ಲಿಕೆ ಆದ ಅರ್ಜಿ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಬಂದಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಯೂಟ್ಯೂಬ್ ಮುಂತಾದ ಪ್ಲಾಟ್‌ಫಾರ್ಮ್‌ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಮಕ್ಕಳ ಮೇಲೆ ಈ ವಿಷಯಗಳ ಪ್ರಭಾವ ಮತ್ತು ಅಪರಾಧ ದರ ಹೆಚ್ಚಳದ ಸಾಧ್ಯತೆಯನ್ನು ಅರ್ಜಿದಾರರು ಪ್ರಸ್ತಾಪಿಸಿದ್ದಾರೆ.

ಒಟಿಟಿಯಲ್ಲಿ ಅಶ್ಲೀಲ ಕಂಟೆಂಟ್; ಕೇಂದ್ರ ಹಾಗೂ ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಸುಪ್ರೀಂ ನೋಟಿಸ್
ಒಟಿಟಿ

Updated on: Apr 28, 2025 | 1:27 PM

ಸೋಶಿಯಲ್ ಮೀಡಿಯಾ ಹಾಗೂ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ (OTT Platform) ಅಶ್ಲೀಲ ಕಂಟೆಂಟ್​ಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಥಿಯೇಟರ್​​ಗಳಲ್ಲಿ ಸಿನಿಮಾ ಪ್ರಸಾರ ಮಾಡುವುದರ ಮೇಲೆ, ಅವುಗಳ ವಿಷಯಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಸೆನ್ಸಾರ್ ಮಂಡಳಿ ಇದೆ. ಆದರೆ, ಒಟಿಟಿಯಲ್ಲಿ ಇದಕ್ಕೆ ಯಾವುದೇ ಅಡೆತಡೆ ಇಲ್ಲ. ಹೀಗಾಗಿ ವೆಬ್​ ಸೀರಿಸಿಗಳಲ್ಲಿ ಹೆಚ್ಚಾಗಿ ಅಶ್ಲೀಲ ಕಂಟೆಂಟ್ ಮತ್ತು ಅಶ್ಲೀಲ ಶಬ್ದಗಳ ಬಳಕೆ ಆಗುತ್ತಿದೆ. ಇದರ ಮೇಲೆ ತಡೆ ಹೇರಬೇಕು ಎಂದು ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಆಗಿತ್ತು. ಇದನ್ನು ಕೋರ್ಟ್​ ವಿಚಾರಣೆ ನಡೆಸಿದೆ. ಅಲ್ಲದೆ, ಕೇಂದ್ರ, ಒಟಿಟಿ ಹಾಗೂ ಸೋಶಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​​ಗಳಿಗೆ ನೋಟಿಸ್ ನೀಡಲಾಗಿದೆ.

ಕೇಂದ್ರ ಸರ್ಕಾರ ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಉಲ್ಲು, ಆಲ್ಟ್, ಟ್ವಿಟರ್, ಫೇಸ್​ಬುಕ್, ಇನ್​ಸ್ಟಾಗ್ರಾಮ್, ಯೂಟ್ಯೂಬ್​ ಹಾಗೂ ಇತರ ಪ್ಲಾಟ್​ಫಾರ್ಮ್​ಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಈ ವಿಚಾರವಾಗಿ ಶೀಘ್ರವೇ ಪ್ರತಿಕ್ರಿಯಿಸುವಂತೆ ಕೋರ್ಟ್ ತಿಳಿಸಿದೆ.

ಇದನ್ನೂ ಓದಿ
ಇಡಿ ವಿಚಾರಣೆಗೆ ಹಾಜರಿ ಹಾಕಲ್ಲ ಮಹೇಶ್ ಬಾಬು; ಕಾರಣ ಇಲ್ಲಿದೆ
ಉಗ್ರರ ಉದ್ದೇಶ ಹಾಳು ಮಾಡಲು ಕಾಶ್ಮೀರಕ್ಕೆ ಹೋದ ನಟ ಅತುಲ್ ಕುಲಕರ್ಣಿ
ನಾನಿಗೆ ಕನ್ನಡ ಪಾಠ ಮಾಡಿದ ಶ್ರೀನಿಧಿ ಶೆಟ್ಟಿ; ಎಷ್ಟು ಕ್ಯೂಟ್ ನೋಡಿ
ಮುಂಜಾನೆ ಎದ್ದು ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್

‘ಒಟಿಟಿಯ ಬಳಕೆಯನ್ನು ಯಾರು ಬೇಕಾದರೂ ಮಾಡಬಹುದು. ತಂದೆಯ ಮೊಬೈಲ್ ತೆಗೆದುಕೊಂಡು ಮಕ್ಕಳು ಅಶ್ಲೀಲ ವಿಷಯಗಳನ್ನು ನೋಡಲು ಅವಕಾಶ ಇದೆ. ಇದು ಯುವಕರು, ಮಕ್ಕಳು ಹಾಗೂ ವಯಸ್ಕರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಇದು ವಿಕೃತ ಮತ್ತು ಅಸ್ವಾಭಾವಿಕ ಲೈಂಗಿಕ ಪ್ರವೃತ್ತಿಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ಅಪರಾಧ ಪ್ರಮಾಣ ಹೆಚ್ಚಾಗುತ್ತದೆ’ ಎಂದು ಅರ್ಜಿದಾರರು ವಾದಿಸಿದ್ದರು.

ನ್ಯಾಯಮೂರ್ತಿ ಬಿಆರ್​ ಗವಾಯಿ ಹಾಗೂ ಆಗಸ್ಟಿನ್ ಜಾರ್ಜ್ ಮಸಿಹ್ ಅವರ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿತು. ಆ ಬಳಿಕ ನೋಟಿಸ್ ಕೊಡಲಾಗಿದೆ. ಹೊಸ ನಿಯಮಗಳನ್ನು ಜಾರಿಗೆ ತರುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 500 ಕೋಟಿ ರೂಪಾಯಿ ವಜ್ರ ದೋಚುವ ಕಥೆ; ಒಟಿಟಿಯಲ್ಲಿರೋ ಸಿನಿಮಾನ ಮಿಸ್ ಮಾಡಬೇಡಿ

ಒಟಿಟಿಯಲ್ಲಿ ಪ್ರಸಾರ ಆಗುವ ಕಂಟೆಂಟ್​ಗಳಿಗೂ ಸೆನ್ಸಾರ್ ಹಾಕಬೇಕು ಎನ್ನುವ ಆಗ್ರಹ ಈ ಮೊದಲು ಕೇಳಿ ಬಂದಿತ್ತು. ಆದರೆ, ಈವರೆಗೆ ಅದು ಸಾಧ್ಯವಾಗಿಲ್ಲ. ‘ಭಾರತ ಮಾತ್ರವಲ್ಲದೆ, ವಿದೇಶದ ಕಂಟೆಂಟ್​ಗಳೂ ಒಟಿಟಿಯಲ್ಲಿ ಇರುತ್ತವೆ. ಹೀಗಾಗಿ, ಅವುಗಳಿಗೂ ಸೆನ್ಸಾರ್ ಮಾಡೋದು ಅಸಾಧ್ಯ’ ಎಂದು ಈ ಮೊದಲು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.