ತಮಿಳಿನ ‘ಕೆಜಿಎಫ್’ ಕತೆ ‘ತಂಗಲಾನ್’ ಒಟಿಟಿ ಬಿಡುಗಡೆ ಯಾವಾಗ?

|

Updated on: Sep 10, 2024 | 12:21 PM

Tangalaan on OTT: ಚಿಯಾನ್ ವಿಕ್ರಂ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ತಂಗಲಾನ್’ ಕೆಜಿಎಫ್ ಚಿನ್ನದ ಗಣಿಯ ಕತೆ ಒಳಗೊಂಡಿದೆ ಎಂದು ಪ್ರಚಾರ ಮಾಡಲಾಗಿತ್ತು. ಚಿತ್ರಮಂದಿರದಲ್ಲಿ ಸಾಧಾರಣ ಯಶಸ್ಸು ಕಂಡ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ.

ತಮಿಳಿನ ‘ಕೆಜಿಎಫ್’ ಕತೆ ‘ತಂಗಲಾನ್’ ಒಟಿಟಿ ಬಿಡುಗಡೆ ಯಾವಾಗ?
Follow us on

ಒಟಿಟಿಯಲ್ಲಿ ಕಳೆದ ವಾರದಿಂದ ಕೆಲವು ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಕನ್ನಡದ ಹಿಟ್ ಸಿನಿಮಾ ‘ಭೀಮ’ ಸೇರಿದಂತೆ ಬಾಲಿವುಡ್​ನ ‘ಕಿಲ್’, ಮಲಯಾಳಂನ ಸದಭಿರುಚಿಯ ಹಾಸ್ಯಪ್ರಧಾನ ಸಿನಿಮಾ ‘ಅಡಿಯೋಸ್ ಅಮಿಗೊ’ ಇನ್ನೂ ಕೆಲವು ಬಹಳ ಉತ್ತಮ ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಆದರೆ ಸಿನಿಮಾ ಪ್ರೇಮಿಗಳು ವಿಕ್ರಂ ನಟನೆಯ ‘ತಂಗಲಾನ್’ ಸಿನಿಮಾ ಏಕಿನ್ನೂ ಒಟಿಟಿಗೆ ಬಂದಿಲ್ಲ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ನಿರೀಕ್ಷೆಗೆ ಬ್ರೇಕ್ ಬೀಳುವ ಸಮಯ ಬಂದಿದೆ. ‘ತಂಗಲಾನ್’ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟವಾಗಿದೆ.

ತಮಿಳಿನ ‘ಕೆಜಿಎಫ್’ ಕತೆ ಎಂದೇ ಪ್ರಚಾರ ಮಾಡಲಾಗಿದ್ದ ಕರ್ನಾಟಕದ ಕೋಲಾರ ಮತ್ತಿತರೆ ಭಾಗಗಳಲ್ಲಿ ಚಿತ್ರೀಕರಣಗೊಂಡಿರುವ ‘ತಂಗಲಾನ್’ ಸಿನಿಮಾ ಕಳೆದ ತಿಂಗಳು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾವನ್ನು ಪಾ ರಂಜಿತ್ ನಿರ್ದೇಶನ ಮಾಡಿದ್ದರು. ಚಿಯಾನ್ ವಿಕ್ರಂ, ಪಾರ್ವತಿ ಮೆನನ್ ಸೇರಿದಂತೆ ಇನ್ನೂ ಕೆಲವು ಜನಪ್ರಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿತು. ಜೊತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತ್ತು.

ಇದನ್ನೂ ಓದಿ:ರವಿಚಂದ್ರನ್ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡುತ್ತಾರೆ ಮಗ ವಿಕ್ರಂ ರವಿಚಂದ್ರನ್

ಇದೀಗ ‘ತಂಗಲಾನ್’ ಸಿನಿಮಾ ಸೆಪ್ಟೆಂಬರ್ 20ಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಒಟಿಟಿ ದೈತ್ಯ ನೆಟ್​ಫ್ಲಿಕ್ಸ್​ನಲ್ಲಿ ‘ತಂಗಲಾನ್’ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಈ ಹಿಂದೆ ಈ ಸಿನಿಮಾವನ್ನು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗಿತ್ತು. ಅದಾದ ಬಳಿಕ ಬೇಡಿಕೆ ಬಂದ ಕಾರಣ ಹಿಂದಿಗೂ ಡಬ್ ಮಾಡಿ ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಅದಾದ ಕೆಲವೇ ವಾರಗಳ ಬಳಿಕ ಇದೀಗ ಈ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ.

ವಿಕ್ರಂ ನಟನೆಯ ‘ತಂಗಲಾನ್’ ಸಿನಿಮಾ ಕೆಜಿಎಫ್ ಕತೆ ಹೊಂದಿದೆ. ಕೆಜಿಎಫ್​ನಲ್ಲಿ ಚಿನ್ನದ ಗಣಿಗಾರಿಕೆ ಪ್ರಾರಂಭವಾದ ಸಂಘರ್ಷದ ಕತೆಯನ್ನು ಸಿನಿಮಾ ಹೇಳುತ್ತಿದೆ. ಚಿನ್ನದ ಗಣಿಗಾರಿಕೆ ಆರಂಭಕ್ಕೂ ಮುನ್ನ ಸ್ಥಳೀಯರ ಜೀವನ ಇದ್ದ ರೀತಿ, ಗಣಿಗಾರಿಕೆ ಉದ್ದೇಶದಿಂದ ಬಂದ ಬ್ರಿಟೀಷರ ಎದುರು ಅವರ ಹೋರಾಟ ಇನ್ನಿತರೆ ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಪಾ ರಂಜಿತ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ