ರವಿಚಂದ್ರನ್ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡುತ್ತಾರೆ ಮಗ ವಿಕ್ರಂ ರವಿಚಂದ್ರನ್

ಮೇ 30 ಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬ. ಪ್ರತಿವರ್ಷದಂತೆ ಕ್ರೇಜಿಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ಜನರಿಗೆ ರವಿಚಂದ್ರನ್ ಕನಸುಗಾರನಾಗಿ, ಕ್ರೇಜಿಸ್ಟಾರ್ ಆಗಿ ಗೊತ್ತು, ಆದರೆ ಅವರ ನಿಜ ವ್ಯಕ್ತಿತ್ವ ಗೊತ್ತಿರುವುದು ಅವರ ಕುಟುಂಬದವರಿಗೆ. ರವಿಚಂದ್ರನ್ ಮನೆಯಲ್ಲಿ ಹೇಗಿರುತ್ತಾರೆ, ಅವರ ಇಷ್ಟ-ಕಷ್ಟಗಳೇನು? ರವಿಚಂದ್ರನ್ ಹುಟ್ಟುಹಬ್ಬ ಮನೆಯಲ್ಲಿ ಹೇಗೆ ಆಚರಣೆ ಮಾಡಲಾಗುತ್ತದೆ ಇತ್ಯಾದಿ ಇಷಯವನ್ನು ರವಿಚಂದ್ರನ್ ಅವರ ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ.

ರವಿಚಂದ್ರನ್ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡುತ್ತಾರೆ ಮಗ ವಿಕ್ರಂ ರವಿಚಂದ್ರನ್
Follow us
|

Updated on:May 29, 2024 | 6:05 PM

ಮೇ 30 ನಟ ರವಿಚಂದ್ರನ್ (Ravichandran) ಹುಟ್ಟುಹಬ್ಬ. ಅಭಿಮಾನಿಗಳು ಹಾಗೂ ಕುಟುಂಬದವರೊಟ್ಟಿಗೆ ರವಿಚಂದ್ರನ್ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ಕನಸುಗಾರನಾಗಿ, ಕ್ರೇಜಿಸ್ಟಾರ್ ಆಗಿ ರವಿಚಂದ್ರನ್ ಪರಿಚಿತರು ಆದರೆ ಅವರ ಕುಟುಂಬದವರು ಅವರನ್ನು ಹೇಗೆ ನೋಡುತ್ತಾರೆ. ಪರದೆಯ ಮೇಲಿನ ರವಿಚಂದ್ರನ್​ಗೂ ಪರದೆಯ ಹಿಂದಿನ ರವಿಚಂದ್ರನ್​ಗೂ ಇರುವ ಭಿನ್ನತೆ ಏನು? ರವಿಚಂದ್ರನ್ ಕಿರಿಯ ಪುತ್ರ ವಿಕ್ರಂ ರವಿಚಂದ್ರನ್ (Vikram Ravichandran) ಅಪ್ಪನ ಬಗ್ಗೆ ಕೆಲವು ಆಪ್ತ ವಿಷಯಗಳನ್ನು ಟಿವಿ9 ಕನ್ನಡದ ಜೊತೆಗೆ ಹಂಚಿಕೊಂಡಿದ್ದಾರೆ.

ತಂದೆ ರವಿಚಂದ್ರನ್ ಅವರಿಂದ ಕಲಿತ ಪಾಠಗಳು ಯಾವುವು?

ಅಪ್ಪ ಇಡೀ ಜೀವನವನ್ನೇ ಕಲಿಸಿದ್ದಾರೆ. ಗೆಲ್ಲಬೇಕೆಂದರೆ ಜೀವನದಲ್ಲಿ ಕಷ್ಟಪಡಬೇಕು, ಸಂಕಷ್ಟದ ಸಮಯದಲ್ಲಿ ಹೇಗೆ ಸಮಚಿತ್ತದಿಂದ ವರ್ತಿಸಬೇಕು. ಸಾಕಷ್ಟು ಟೆನ್ಷನ್, ಒತ್ತಡಗಳ ನಡುವೆಯೂ ನಮ್ಮಲ್ಲಿ ನಾವು ಶಾಂತಿಯನ್ನು ಹೇಗೆ ಕಂಡುಕೊಳ್ಳಬೇಕು ಎಂಬುದನ್ನು ಅಪ್ಪ ಕಲಿಸಿದ್ದಾರೆ. ಅವರು ಯಾವುದನ್ನೂ ಭಾಷಣ ಮಾಡಿ ಕಲಿಸಿಲ್ಲ, ಬದಲಿಗೆ ಅವರು ಬದುಕುವ ಮೂಲಕ ಕಲಿಸಿದ್ದಾರೆ. ಅವರು ಬದುಕುವ ರೀತಿಯೇ ನಮಗೆ ಪಾಠ. ಅವರು ನಮ್ಮನ್ನು ತಮ್ಮ ಹೆಗಲ ಮೇಲಿಟ್ಟುಕೊಂಡು ನಮಗೆ ಜಗತ್ತು ತೋರಿಸಿದ್ದಾರೆ, ತೋರಿಸುತ್ತಿದ್ದಾರೆ.

ಅಪ್ಪನ ಆನ್​ಸ್ಕ್ರೀನ್ ವ್ಯಕ್ತಿತ್ವಕ್ಕೂ, ನಿಜ ಜೀವನದ ವ್ಯಕ್ತಿತ್ವಕ್ಕೂ ಭಿನ್ನತೆ ಇದೆಯೇ?

ಆನ್​ಸ್ಕ್ರೀನ್ ಆಫ್ ಸ್ಕ್ರೀನ್ ಎರಡೂ ಕಡೆ ಅಪ್ಪನ ಜೀವನದಲ್ಲಿ ಸಿನಿಮಾವನ್ನೇ ತಂಬಿಕೊಂಡಿದ್ದಾರೆ. ಆನ್​ಸ್ಕ್ರೀನ್​ನಲ್ಲಿ ರೊಮ್ಯಾಂಟಿಕ್, ತಮಾಷೆ ಪ್ರವೃತ್ತಿ ಪಾತ್ರಗಳನ್ನು ಅಪ್ಪ ಮಾಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ಶಿಸ್ತಿನ ವ್ಯಕ್ತಿ. ಹೆಚ್ಚಿನ ಸಮಯ ಅವರು ಗಂಭೀರವಾಗಿರುತ್ತಾರೆ. ಕೆಲಸದ ವಿಷಯದಲ್ಲಿ ಬೇಜವಾಬ್ದಾರಿತನ ಮಾಡುವವರಲ್ಲ. ಮನೆಯಲ್ಲಿ ಸಹ ಶಿಸ್ತಿನ ವ್ಯಕ್ತಿತ್ವ ಅವರದ್ದು. ಮಕ್ಕಳ ವಿಚಾರದಲ್ಲಿ ಶಿಸ್ತು, ಸ್ವಾತಂತ್ರ್ಯ ಎರಡನ್ನೂ ಕೊಟ್ಟಿದ್ದರು. ನಾವು ಸ್ವಲ್ಪ ಬೇಜಾವಾಬ್ದಾರಿಯಾಗಿ, ಸೋಮಾರಿತನದಿಂದ ವರ್ತಿಸುವುದಿದೆ ಆದರೆ ಅವರು ಎಂದಿಗೂ ಹಾಗೆ ಮಾಡಿದವರಲ್ಲ.

ನೀವು ಬಾಲ್ಯದಲ್ಲಿದ್ದಾಗ ಅಪ್ಪ ಬ್ಯುಸಿಯಾಗಿದ್ದರು ಆಗ ಅಪ್ಪ ಸಮಯ ಕೊಡಲ್ಲ ಎನಿಸಿದ್ದುಂಟೆ?

ಅಪ್ಪ ದಿನದ 22 ಗಂಟೆ ಕೆಲಸ ಮಾಡುತ್ತಿರುವಾಗಲೂ ಸಹ ಕುಟುಂಬದ ಜವಾಬ್ದಾರಿಗಳನ್ನು ಮರೆತವರಲ್ಲ. ಮಕ್ಕಳ ಹುಟ್ಟುಹಬ್ಬವನ್ನು ಮರೆತವರಲ್ಲ. ಅಮ್ಮನಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುವುದನ್ನು ಮರೆತವರಲ್ಲ. ನಮ್ಮ ಹುಟ್ಟುಹಬ್ಬವನ್ನು ದೊಡ್ಡ ಹಬ್ಬದ ರೀತಿ ಅವರು ಆಚರಣೆ ಮಾಡುತ್ತಿದ್ದರು. ಶೂಟಿಂಗ್​ಗಾಗಿ ಯಾವುದಾದರೂ ಪ್ರವಾಸಿ ಸ್ಥಳ ಅಥವಾ ಯಾವುದಾದರೂ ವಾಟರ್ ಪಾರ್ಕ್, ವಿದೇಶಗಳಿಗೆ ಹೋದಾಗ ಮಕ್ಕಳನ್ನೂ ಕರೆದುಕೊಂಡು ಹೋಗಿ ಅಲ್ಲಿ ಶೂಟಿಂಗ್ ಮಧ್ಯ ನಮ್ಮೊಡನೆ ಸಮಯ ಕಳೆಯುತ್ತಿದ್ದರು. ಅವರು ಎಷ್ಟೇ ಬ್ಯುಸಿಯಾಗಿದ್ದರೂ ಸಹ ಕುಟುಂಬದ ಜವಾಬ್ದಾರಿಯನ್ನು ಎಂದಿಗೂ ಮರೆತಿಲ್ಲ. ಮೊದಲೆಲ್ಲ ನಮಗೆ ಅವರು ಎಷ್ಟು ಕೆಲಸ ಮಾಡುತ್ತಾರೆ, ಎಷ್ಟು ಮುಖ್ಯವಾದ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಎಂಥಹಾ ಜವಾಬ್ದಾರಿ ಇದೆ. ಜನ ಅವರ ಮೇಲಿಟ್ಟಿರುವ ನಿರೀಕ್ಷೆಗಳೇನು ಎಂಬುದು ಗೊತ್ತಿರಲಿಲ್ಲ. ಆದರೆ ಒಂದು ಹಂತದ ಬಳಿಕ ಅವೆಲ್ಲ ಗೊತ್ತಾಗಲು ಆರಂಭಿಸಿದಾಗ ಅಪ್ಪ ಬ್ಯುಸಿಯಾಗಿದ್ದಿದ್ದರ ಬಗ್ಗೆ ನಮಗೆ ಹೆಮ್ಮೆ ಆಯಿತು. ಈಗಲೂ ಆ ಬಗ್ಗೆ ಹೆಮ್ಮೆ ಇದೆ.

ಇದನ್ನೂ ಓದಿ:‘ಕೆಡಿ’ ಸಿನಿಮಾನಲ್ಲಿ ರವಿಚಂದ್ರನ್, ರಮೇಶ್ ಪಾತ್ರವೇನು: ಪ್ರೇಮ್ ಹೇಳಿದ್ದು ಹೀಗೆ

ಮಕ್ಕಳು ಹೀಗೆ ಬೆಳೆಯಲಿ, ಇಂಥಹದ್ದು ಮಾಡಲಿ ಎಂದು ರವಿಚಂದ್ರನ್ ಅವರು ಆಶಿಸಿದ್ದುಂಟೆ?

ಖಂಡಿತ ಇಲ್ಲ. ಅವರಿಗೆ ಮಕ್ಕಳು ಒಳ್ಳೆಯದು ಮಾಡಲಿ ಎಂಬುದು ಬಿಟ್ಟರೆ ಇಂಥಹುದ್ದೇ ಮಾಡಲಿ ಇಂಥಹದ್ದು ಬೇಡ ಎಂಬ ಬಯಕೆ ಇಲ್ಲ. ನೀನು ನಟನಾಗಬೇಕು ಎಂದು ನನ್ನುನ್ನು ಒತ್ತಾಯಿಸಿದವರಲ್ಲ. ಅದು ನನ್ನೇದೇ ಆಸೆಯಾಗಿತ್ತು. ನಮ್ಮ ಸ್ವ ಇಚ್ಛೆಯಿಂದ ನಾನು-ಅಣ್ಣ ಸಿನಿಮಾ ರಂಗಕ್ಕೆ ಬಂದೆವು. ಇಲ್ಲಿಯೂ ಸಹ ಇಂಥಹುದೇ ಕತೆ ಮಾಡಬೇಕು, ಇಂಥಹದು ಮಾಡಬಾರದು ಎಂದೇನೂ ಹೇಳುವುದಿಲ್ಲ. ಶ್ರಮಪಟ್ಟು ಕೆಲಸ ಮಾಡಿ ಎಂದಷ್ಟೆ ಹೇಳುತ್ತಾರೆ. ನಮ್ಮ ಸಹೋದರಿ ಬ್ಯುಸಿನೆಸ್ ಮಾಡುತ್ತೀನಿ ಎಂದಾಗ ಸರಿ ಮಾಡಮ್ಮ ಎಂದಷ್ಟೆ ಹೇಳಿದ್ದರು. ಇಂಥಹುದ್ದು ಮಾಡಿ ಎನ್ನುವುದಿಲ್ಲ ಬದಲಿಗೆ ಶ್ರದ್ಧೆಯಿಂದ ಮಾಡಿ ಎಂದಷ್ಟೆ ಹೇಳುತ್ತಾರೆ.

ಅಪ್ಪನ ಹುಟ್ಟುಹಬ್ಬ ಮುಂಚೆ ಹೇಗಿರುತ್ತಿತ್ತು? ಈಗ ಹೇಗೆ ಬದಲಾಗಿದೆ?

ನನಗೆ ಬಹಳ ದೊಡ್ಡ ಬದಲಾವಣೆ ಕಾಣುತ್ತಿಲ್ಲ. ಆಗಲೂ ಅಭಿಮಾನಿಗಳು ಬರುತ್ತಿದ್ದರು, ಈಗಲೂ ಬರುತ್ತಾರೆ. ಆಗಲೂ ಅವರು ಬಹಳ ಆಕ್ಟಿವ್ ಆಗಿರುತ್ತಿದ್ದರು. ಈಗಲೂ ಸಹ ಅಷ್ಟೇ ಆಕ್ಟಿವ್ ಆಗಿರುತ್ತಾರೆ. ಆಗಲೂ ಸಹ ಹುಟ್ಟಿದ ಹಬ್ಬಕ್ಕೆ ದೇವಾಲಯಕ್ಕೆ ಹೋಗುತ್ತಿದ್ದರು, ಈಗಲೂ ಸಹ ಅವರು ದೇವಸ್ಥಾನಕ್ಕೆ ಹೋಗುತ್ತಾರೆ. ಹೊರಗಡೆಯಿಂದ ಬಂದು ಶುಭ ಹಾರೈಸುವವರಿಗೆ ಸಮಯ ಕೊಡುತ್ತಾರೆ. ಕೆಲಸಕ್ಕೆ ಹೋಗುತ್ತಾರೆ. ಈ ವಯಸ್ಸಿನಲ್ಲೂ ಅವರು ನಮಗಿಂತಲೂ ಹೆಚ್ಚು ಕೆಲಸ ಮಾಡುತ್ತಾರೆ. ಹುಟ್ಟುಹಬ್ಬಗಳು ಕಳೆದಂತೆ ಅವರು ಇನ್ನಷ್ಟು ಯುವಕರಾಗುತ್ತಿದ್ದಾರೆ ಅನಿಸುತ್ತದೆ.

ಅಪ್ಪನ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡಲಿದ್ದೀರಿ?

ಅಪ್ಪನ ಬಳಿ ಇಲ್ಲದ್ದು ಏನೂ ಇಲ್ಲ. ಒಳ್ಳೆಯ ಉಡುಗೆ, ಗ್ಲಾಸ್, ವಾಚು, ಕಾರು ಎಲ್ಲವೂ ಇದೆ. ಅಪ್ಪನಿಗೆ ಇಂಥಹಾ ಮೆಟಿರಿಯಲಿಸ್ಟಿಕ್ ವಸ್ತುಗಳ ಮೇಲೆ ವ್ಯಾಮೋಹವೂ ಇಲ್ಲ. ಹಾಗಾಗಿ ಇವ್ಯಾವುವನ್ನೂ ಸಹ ಉಡುಗೊರೆಯಾಗಿ ಕೊಡುವುದಿಲ್ಲ. ಅವರಿಗೆ ಕೊಡಬೇಕೆಂದಿರುವ ಉಡುಗೊರೆ ಎಂದರೆ ನನ್ನ ಗೆಲುವು. ಮಕ್ಕಳು ಗೆದ್ದರೆ ಅಪ್ಪನಿಗೆ ಬಹಳ ಖುಷಿಯಾಗುತ್ತದೆ. ಹಾಗಾಗಿ ನಾನು ಆರಿಸಿಕೊಂಡಿರುವ ಸಿನಿಮಾ ವೃತ್ತಿಯಲ್ಲಿ ಗೆದ್ದು ಆ ಗೆಲುವನ್ನು ಅಪ್ಪನಿಗೆ ಉಡುಗೊರೆಯಾಗಿ ನೀಡುವ ಆಸೆಯಿದೆ. ಅದಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಅಪ್ಪ, ಜೀವನವನ್ನು ನೋಡುವುದೇ ಸಿನಿಮಾ ಮೂಲಕ, ಹಾಗಾಗಿ ಆ ಸಿನಿಮಾ ರಂಗದಲ್ಲಿ ನಾನು ಯಶಸ್ಸುಗಳಿಸಿದರೆ ಅವರಿಗೆ ಬಹಳ ಖುಷಿಯುತ್ತದೆ.

ಮಕ್ಕಳ ಹುಟ್ಟುಹಬ್ಬವನ್ನು ರವಿಚಂದ್ರನ್ ಹೇಗೆ ಸೆಲೆಬ್ರೇಟ್ ಮಾಡುತ್ತಿದ್ದರು?

ಮಕ್ಕಳ ಹುಟ್ಟುಹಬ್ಬವನ್ನು ಅಪ್ಪ ಮರೆತವರಲ್ಲ. ಮುಂಚೆ ನಮ್ಮ ಹುಟ್ಟುಹಬ್ಬಗಳನ್ನು ಭಾರಿ ಅದ್ಧೂರಿಯಾಗಿ ಅವರು ಆಚರಿಸುತ್ತಿದ್ದರು. ಸಿನಿಮಾ ಸೆಟ್​ಗಳ ರೀತಿ ಸೆಟ್ ಹಾಕಿ ಹುಟ್ಟುಹಬ್ಬ ಮಾಡುತ್ತಿದ್ದರು. ಡೊನಾಲ್ಡ್ ಡಕ್, ಮಿಕ್ಕಿ ಮೌಸ್ ಮಾದರಿಯ 10 ಕೆಜಿ, 20 ಕೆಜಿ ಕೇಕ್​ಗಳನ್ನು ಮಾಡಿಸುತ್ತಿದ್ದಿದ್ದು ನನಗೆ ಈಗಲೂ ನೆನಪಿದೆ. ಉಡುಗೊರೆಗಳ ವಿಷಯದಲ್ಲೂ ಸಹ ಅಪ್ಪ ಬಹಳ ಧಾರಾಳ. ಮಕ್ಕಳಿಗೆ ಏನು ಇಷ್ಟವೋ ಅದನ್ನು ಕೊಡಿಸಿಯೇ ತೀರುತ್ತಿದ್ದರು. ಅವರನ್ನು ಎರಡನೇ ಬಾರಿ ಕೇಳುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಅಪ್ಪನಿಗೂ ಸಹ ಗೆಜೆಟ್​ಗಳ ಮೇಲೆ ತುಸು ಆಸಕ್ತಿ, ಹಾಗಾಗಿ ಆಗಲೇ ಹಲವು ರೀತಿಯ ಗೆಜೆಟ್​ಗಳನ್ನು ನಮಗೆ ಕೊಡಿಸುತ್ತಿದ್ದರು. ಒಂದು ವಿಷಯವೆಂದರೆ ಹುಟ್ಟುಹಬ್ಬದ ದಿನ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಅವರು ತಪ್ಪಿಸುತ್ತಿರಲಿಲ್ಲ. ಈಗಲೂ ಅಷ್ಟೆ.

ಇದನ್ನೂ ಓದಿ:ದರ್ಶನ್-ಯಶ್ ಮನೆಗೆ ಹೋಗ್ಬೇಕಾಗುತ್ತೆ ಅಷ್ಟೆ: ರವಿಚಂದ್ರನ್ ಗರಂ

ನಿಮ್ಮ ಸಿನಿಮಾ ಜರ್ನಿ ಹೇಗೆ ಸಾಗುತ್ತಿದೆ?

ಮೊದಲ ಸಿನಿಮಾ ‘ವಿಕ್ರಮಾದಿತ್ಯ’ ಅಂದುಕೊಂಡಷ್ಟು ಯಶಸ್ವಿ ಆಗಲಿಲ್ಲ. ಈಗ ‘ಮುಧೋಳ್’ ಹೆಸರಿನ ಸಿನಿಮಾ ಮಾಡುತ್ತಿದ್ದೇವೆ. ಸಿನಿಮಾಕ್ಕೆ ನಾನೇ ಬಂಡವಾಳ ಹಾಕುತ್ತಿದ್ದೇನೆ. ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣ ಈಗಾಗಲೇ ಆಗಿದೆ. ಚಿತ್ರೀಕರಣದ ಸಮಯದಲ್ಲಿ ನಡೆದ ಕೆಲವು ಅಪಘಾತಗಳಿಂದ ಚಿತ್ರೀಕರಣ ತಡವಾಗುತ್ತಿದೆ. ಚಿತ್ರೀಕರಣದ ಸಮಯದಲ್ಲಿ ನಾನು ಬಿದ್ದು ಗಾಯ ಮಾಡಿಕೊಂಡೆ, ಬಳಿಕ ನಮ್ಮ ಮಾಸ್ಟರ್ ಬಿದ್ದು ಗಾಯ ಮಾಡಿಕೊಂಡರು ಹಾಗಾಗಿ ಸಿನಿಮಾ ತಡವಾಗುತ್ತಿದೆ. ಆದರೆ ಒಳ್ಳೆಯ ಸಿನಿಮಾ ಕೊಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ‘ಮುಧೋಳ್’ ಬಹಳ ಭಿನ್ನವಾದ ಕತೆಯನ್ನು ಒಳಗೊಂಡಿದೆ. ಸಿನಿಮಾಕ್ಕೆ ‘ಮುಧೋಳ್’ ಹೆಸರು ಸೂಚಿಸಿದ್ದು ಅಪ್ಪನೇ.

ಸಿನಿಮಾ ಒಪ್ಪಿಕೊಳ್ಳುವ ಮುಂಚೆ ಅಪ್ಪನ ಬಳಿ ಒಪ್ಪಿಗೆ ಕೇಳುತ್ತೀರಾ?

ನನ್ನ ನಿರ್ಧಾರಗಳಿಗೆ ನಾನೇ ಜವಾಬ್ದಾರನಾಗಿಬೇಕು, ಅದರಿಂದ ಬರುವ ಫಲಗಳಿಗೂ ನಾನೇ ಜವಾಬ್ದಾರನಾಗಿರಬೇಕು ಎಂಬುದು ನನ್ನ ಪಾಲಿಸಿ. ಹಾಗಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮುಂಚೆ ಅನುಮತಿ ಎಂದೇನೂ ಕೇಳುವುದಿಲ್ಲ. ಆದರೆ ಸಿನಿಮಾದ ಕತೆಯ ಎಳೆಯನ್ನಷ್ಟೆ ಹೇಳುತ್ತೇನೆ. ಅವರು ಚೆನ್ನಾಗಿದೆ ಎನ್ನುತ್ತಾರೆ, ಏನಾದರೂ ಸಲಹೆ ಕೊಡಬೇಕು ಅನಿಸಿದರಷ್ಟೆ ಸಲಹೆ ಕೊಡುತ್ತಾರೆ ಇಲ್ಲವಾದರೆ ಶುಭ ಹಾರೈಸುತ್ತಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಒಳಿತು-ಕೆಡುಕುಗಳನ್ನು ನೋಡಬೇಕು ಅನುಭವ ಪಾಠವನ್ನು ಸ್ವಂತವಾಗಿ ಕಲಿಯುವ ಇಚ್ಛೆಯಿಂದಾಗಿ ನನ್ನ ನಿರ್ದಾರಗಳನ್ನು ನಾನೇ ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದೇನೆ.

ಅಪ್ಪ ದೊಡ್ಡ ಸ್ಟಾರ್, ಅವರ ಮಗನಾಗಿ ನಿಮಗೆ ಒತ್ತಡದ ಅನುಭವ ಆಗುತ್ತದೆಯೇ?

ಅಪ್ಪ ತಮ್ಮ ಸ್ಟಾರ್ ಗಿರಿಯನ್ನು ನಮಗೆ ತಾಗಲು ಬಿಟ್ಟಿಲ್ಲ. ಅಪ್ಪ ಎಷ್ಟು ದೊಡ್ಡ ಸ್ಟಾರ್ ಎಂಬುದು ನಮಗೆ ಅರಿವಾಗಿದ್ದೆ ಬಹಳ ತಡವಾಗಿ. ಮಕ್ಕಳು ತಮ್ಮ ಹೆಸರು ಹೇಳಿ ಕೆಲಸ ಗಿಟ್ಟಿಸಿಕೊಳ್ಳುವುದು ಸ್ವತಃ ಅವರಿಗೇ ಇಷ್ಟವಿಲ್ಲ. ನಮಗೂ ಅಷ್ಟೆ. ರವಿಚಂದ್ರನ್ ಮಗನಾಗಿರುವ ಮೊದಲ ಸಿನಿಮಾ ನಮಗೆ ಸಿಗುತ್ತದೆ ನಿಜ ಆದರೆ ಎರಡನೇ ಸಿನಿಮಾವನ್ನು ಪ್ರತಿಭೆಯ ಆಧಾರದ ಮೇಲೆಯೇ ಗಿಟ್ಟಿಸಿಕೊಳ್ಳಬೇಕು. ಅಪ್ಪನೊಂದಿಗೆ ಪ್ರೇಕ್ಷಕರು ಹೋಲಿಸಿ ನೋಡುತ್ತಾರೆ ಎಂಬುದನ್ನು ನಾನು ಒತ್ತಡ ಎಂದು ಭಾವಿಸುವುದಿಲ್ಲ. ಆ ಒತ್ತಡ ಇರುವುದರಿಂದ ಶ್ರಮಪಟ್ಟು ಕೆಲಸ ಮಾಡುವ ಚೈತನ್ಯ, ಜವಾಬ್ದಾರಿ ಮೂಡುತ್ತದೆ ಎಂದು ನನಗೆ ಅನಿಸುತ್ತದೆ. ಪ್ರೇಕ್ಷಕರಿಗೆ ನಿರೀಕ್ಷೆಗಳು ಇದ್ದೇ ಇರುತ್ತವೆ, ಅವು ಸಹಜ. ಚೆನ್ನಾಗಿ ನಟಿಸಬೇಕು, ಚೆನ್ನಾಗಿ ಡ್ಯಾನ್ಸ್ ಮಾಡಬೇಕು ಇಂಥಹಾ ನಿರೀಕ್ಷೆಗಳನ್ನು ತಪ್ಪು ಎಂದು ಹೇಳಲಾಗದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:49 am, Wed, 29 May 24

ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!