ತೆಲುಗಿನ ಬಿಗ್ ಬಜೆಟ್ ಚಿತ್ರಗಳಿಗೆ ಸಿಗುತ್ತಿಲ್ಲ ಒಟಿಟಿ ಡೀಲ್; ಕಾರಣ ತುಂಬಾನೇ ಸಿಂಪಲ್

ಅನೇಕರು ಒಟಿಟಿ ಸಬ್​ಸ್ಕ್ರಿಪ್ಶನ್ ಪಡಡೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಬಿಗ್ ಬಜೆಟ್ ಚಿತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಅನೇಕ ಒಟಿಟಿ ಪ್ಲಾಟ್​ಫಾರ್ಮ್​ಗಳು ಪ್ರಯತ್ನಿಸುತ್ತವೆ. ಆದರೆ, ಡೀಲ್ ಪೂರ್ಣಗೊಳಿಸಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಆಗಿರೋದು ಸಿನಿಮಾ ರಿಲೀಸ್ ಡೇಟ್.

ತೆಲುಗಿನ ಬಿಗ್ ಬಜೆಟ್ ಚಿತ್ರಗಳಿಗೆ ಸಿಗುತ್ತಿಲ್ಲ ಒಟಿಟಿ ಡೀಲ್; ಕಾರಣ ತುಂಬಾನೇ ಸಿಂಪಲ್
ಸಾಂದರ್ಭಿಕ ಚಿತ್ರ
Edited By:

Updated on: Mar 02, 2024 | 8:30 AM

ಬಿಗ್ ಬಜೆಟ್ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ರಿಲೀಸ್​ಗೂ ಮೊದಲೇ ಈ ರೀತಿಯ ಸಿನಿಮಾಗಳು ಟೀಸರ್, ಟ್ರೇಲರ್ ಮೂಲಕ ಸದ್ದು ಮಾಡುತ್ತವೆ. ಹೀಗಾಗಿ, ಈ ಚಿತ್ರಗಳನ್ನು ಖರೀದಿಸಲು ಒಟಿಟಿ (OTT) ಪ್ಲಾಟ್​ಫಾರ್ಮ್​ಗಳು ಸಾಕಷ್ಟು ಆಸಕ್ತಿ ತೋರಿಸುತ್ತವೆ. ದೊಡ್ಡ ಮೊತ್ತಕ್ಕೆ ಬಿಡ್ ಮಾಡಿ ಸಿನಿಮಾ ಖರೀದಿ ಮಾಡಲಾಗುತ್ತದೆ. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ ಎನ್ನುತ್ತಿವೆ ಮೂಲಗಳು. ಹಲವು ಬಿಗ್ ಬಜೆಟ್ ಸಿನಿಮಾಗಳಿಗೆ ರಿಲೀಸ್ ಡೇಟ್ ಲಾಕ್ ಮಾಡೋಕೆ ಆಗುತ್ತಿಲ್ಲ. ಇದಕ್ಕೆ ಕಾರಣ ತುಂಬಾನೇ ಸಿಂಪಲ್ ಎನ್ನಲಾಗಿದೆ.

ಕೊವಿಡ್ ಕಾಣಿಸಿಕೊಂಡ ಬಳಿಕ ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿ ಬಂತು. ಈ ವೇಳೆ ಒಟಿಟಿ ಪ್ಲಾಟ್​ಫಾರ್ಮ್​ಗಳ ಜನಪ್ರಿಯತೆ ಹೆಚ್ಚಿತು. ಕೆಲವೇ ವರ್ಷಗಳಲ್ಲಿ ಒಟಿಟಿ ಸಾಕಷ್ಟು ಜನಪ್ರಿಯತೆ ಪಡೆಯಿತು. ಸೀರಿಸ್​ಗಳು ಸಿದ್ಧವಾಗಲು ಶುರುವಾದವು. ಈ ಕಾರಣಕ್ಕೆ ಅನೇಕರು ಒಟಿಟಿ ಸಬ್​ಸ್ಕ್ರಿಪ್ಶನ್ ಪಡಡೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಬಿಗ್ ಬಜೆಟ್ ಚಿತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಅನೇಕ ಒಟಿಟಿ ಪ್ಲಾಟ್​ಫಾರ್ಮ್​ಗಳು ಪ್ರಯತ್ನಿಸುತ್ತವೆ. ಆದರೆ, ಡೀಲ್ ಪೂರ್ಣಗೊಳಿಸಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಆಗಿರೋದು ಸಿನಿಮಾ ರಿಲೀಸ್ ಡೇಟ್.

ಹೌದು, ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡುವಾಗ ಹತ್ತಾರು ಅಡೆತಡೆಗಳು ಬರುತ್ತವೆ. ಹೀರೋ, ಹೀರೋಯಿನ್ ಡೇಟ್ಸ್​ಗಳನ್ನು ಹೊಂದಿಸಬೇಕು. ಹೀರೋಗೆ ಅನಾರೋಗ್ಯದ ಸಮಸ್ಯೆ ಉಂಟಾದರೆ, ಶೂಟಿಂಗ್​ನಲ್ಲಿ ಅವಘಡ ಸಂಭವಿಸಿದರೆ ಸಿನಿಮಾ ಶೂಟಿಂಗ್ ಮುಂದೂಡಿಕೊಳ್ಳಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಅಂದುಕೊಂಡ ದಿನಾಂಕದಂದು ಸಿನಿಮಾ ರಿಲೀಸ್ ಮಾಡೋಕೆ ಸಾಧ್ಯವಾಗುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ತೆಲುಗಿನಲ್ಲಿ ಬಹುತೇಕ ಬಿಗ್ ಬಜೆಟ್ ಸಿನಿಮಾಗಳು ಮೊದಲು ಘೋಷಣೆ ಮಾಡಿದ ರಿಲೀಸ್ ದಿನಾಂಕದಂದು ಬಂದಿದ್ದು ಬಹಳ ಕಡಿಮೆ. ಈ ರೀತಿ ಆದಾಗ ಒಟಿಟಿ ಪ್ಲಾಟ್​ಫಾರ್ಮ್​ಗಳು ಸಿನಿಮಾ ಖರೀದಿ ಮಾಡೋಕೆ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ, ರಿಲೀಸ್ ದಿನಾಂಕ ಖಚಿತಪಡಿಸಿದ ಬಳಿಕವೇ ಸಿನಿಮಾ ಖರೀದಿಸುವುದಾಗಿ ಒಟಿಟಿ ಸಂಸ್ಥೆಗಳು ಹೇಳುತ್ತಿವೆ ಎನ್ನಲಾಗಿದೆ. ತೆಲುಗು ಚಿತ್ರರಂಗದ ನಿರ್ಮಾಪಕರು ಈ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಟೈಗರ್ ಶ್ರಾಫ್ ಜನ್ಮದಿನ; ಈ ನಟನ ಬಳಿ ಇದೆ ನೂರಾರು ಕೋಟಿ ರೂಪಾಯಿ ಆಸ್ತಿ

ಈ ಮೊದಲು ಹಲವು ಸಿನಿಮಾಗಳಿಗೆ ಈ ರೀತಿಯ ಸಮಸ್ಯೆ ಆಗಿದೆ. ‘ಆದಿಪುರುಷ್’ ಚಿತ್ರದ ಮೇಲೆ ಭರ್ಜರಿ ನಿರೀಕ್ಷೆ ಇತ್ತು. ಆದರೆ, ವಿಎಫ್​ಎಕ್ಸ್ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬ ಆಗುತ್ತಲೇ ಬಂದವು. ‘ಸಲಾರ್’ ಸಿನಿಮಾದ ಕಥೆಯೂ ಅಷ್ಟೇ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಚಿತ್ರ ಕಳೆದ ಸೆಪ್ಟೆಂಬರ್​ನಲ್ಲೇ ರಿಲೀಸ್ ಆಗಿರುತ್ತಿತ್ತು. ಆದರೆ, ಇದರ ಬಿಡುಗಡೆ ದಿನಾಂಕ ಡಿಸೆಂಬರ್​ಗೆ ಮುಂದೂಡಲ್ಪಟ್ಟಿತ್ತು. ಇತ್ತೀಚೆಗೆ ‘ದೇವರ’ ಸಿನಿಮಾ ಕೂಡ ಹಾಗೆಯೇ ಮಾಡಿದೆ. ಈ ಮೊದಲು ಏಪ್ರಿಲ್​ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ತಂಡ ಹೇಳಿತ್ತು. ಈಗ ಚಿತ್ರದ ಬಿಡುಗಡೆ ದಿನಾಂಕ ಅಕ್ಟೋಬರ್​ಗೆ ಮುಂದೂಡಲ್ಪಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us