ರಿಲೀಸ್ ಆದ ಒಂದೇ ತಿಂಗಳಿಗೆ ಒಟಿಟಿಗೆ ಬಂದ ದಳಪತಿ ವಿಜಯ್ ನಟನೆಯ ‘GOAT’ ಸಿನಿಮಾ

ಭಾರತದಲ್ಲಿ ಸಿನಿಮಾ ಒಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಸಹ ಒಬ್ಬರು. ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘GOAT’ ಚಿತ್ರ ರಿಲೀಸ್ ಆಗಿತ್ತು. ಈ ಚಿತ್ರ ಈಗ ಒಟಿಟಿಗೆ ಕಾಲಿಡುತ್ತಿದೆ.

ರಿಲೀಸ್ ಆದ ಒಂದೇ ತಿಂಗಳಿಗೆ ಒಟಿಟಿಗೆ ಬಂದ ದಳಪತಿ ವಿಜಯ್ ನಟನೆಯ ‘GOAT’ ಸಿನಿಮಾ
Follow us
ರಾಜೇಶ್ ದುಗ್ಗುಮನೆ
|

Updated on: Oct 01, 2024 | 2:28 PM

ದಳಪತಿ ವಿಜಯ್ ನಟನೆಯ ‘GOAT’ ಸಿನಿಮಾ ಸೆಪ್ಟೆಂಬರ್ 5ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಆದರೆ, ಸಿನಿಮಾ ಹೈಪ್ ಸೃಷ್ಟಿ ಮಾಡುವಲ್ಲಿ ವಿಫಲವಾಯಿತು. ಈ ಚಿತ್ರ ಸಾಧಾರಣ ಗಳಿಕೆ ಮಾಡಿದೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ ಅನ್ನೋದಕ್ಕೆ ಸಿನಿಮಾದ ಒಟಿಟಿ ರಿಲೀಸ್ ದಿನಾಂಕವೇ ಸಾಕ್ಷಿ. ಈ ಚಿತ್ರ ಈಗ ಒಟಿಟಿಗೆ ಕಾಲಿಡೋಕೆ ರೆಡಿ ಆಗಿದೆ. ಅಕ್ಟೋಬರ್ 3ರಂದು ಸಿನಿಮಾ ನೆಟ್​ಫ್ಲಿಕ್ಸ್ ಮೂಲಕ ಬಿಡುಗಡೆ ಕಾಣುತ್ತಿದೆ. ಈ ಬಗ್ಗೆ ನೆಟ್​ಫ್ಲಿಕ್ಸ್ ಕಡೆಯಿಂದಲೇ ಮಾಹಿತಿ ಸಿಕ್ಕಿದೆ.

‘ಸಿಂಹ G.O.A.T ಆಗೋದನ್ನು ಯಾವಾಗಲೂ ನೋಡಿದ್ದೀರಾ? ದಳಪತಿ ವಿಜಯ್ G.O.A.T (ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಅಕ್ಟೋಬರ್ 3ರಂದು ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗುತ್ತಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಲಭ್ಯ’ ಎಂದು ಬರೆಯಲಾಗಿದೆ.

ವೆಂಕಟ್​ ಪ್ರಭು ಅವರು ‘ಗೋಟ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ವಿಮರ್ಶಕರಿಂದ ಒಳ್ಳೆಯ ರೀತಿಯಲ್ಲಿ ಪ್ರಕ್ರಿಯೆ ಬಂದಿಲ್ಲ. ಇದು ದಳಪತಿ ವಿಜಯ್ ಅವರ 68ನೇ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಪ್ರಶಾಂತ್, ಪ್ರಭುದೇವ, ಅಜ್ಮಲ್ ಅಮೀರ್, ಮೋಹನ್ ಮೊದಲಾದವರು ಪ್ರಮುಖ ಪಾತ್ರ ಮಾಡಿದ್ದಾರೆ. ಎಜಿಎಸ್​ ಎಂಟರ್​ಟೇನ್​ಮೆಂಟ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ.

ಇದನ್ನೂ ಓದಿ: ‘2026ಕ್ಕೆ ಸಿಎಂ’: ದಳಪತಿ ವಿಜಯ್ ಕಾರ್ ನಂಬರ್ ನೋಡಿದ್ರಾ?

ಸದ್ಯ ಎಲ್ಲರೂ ದಳಪತಿ ವಿಜಯ್ ಅವರ 69ನೇ ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರವನ್ನು ‘ಕೆವಿಎನ್​ ಪ್ರೊಡಕ್ಷನ್ಸ್’ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದ ಟೈಟಲ್ ಇನ್ನಷ್ಟೇ ರಿವೀಲ್ ಆಗಬೇಕಿದೆ. ಸದ್ಯ ಮಂಜು ವಾರಿಯರ್ ಅವರು ಸಿನಿಮಾದ ತಂಡ ಸೇರಿದ್ದಾರೆ. ಅವರು ನಿರ್ದೇಶಕ ಎಚ್​. ವಿನೋದ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ‘ತುನಿವು’ ರೀತಿಯ ಸಿನಿಮಾನ ಅವರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.