AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘2026ಕ್ಕೆ ಸಿಎಂ’: ದಳಪತಿ ವಿಜಯ್ ಕಾರ್ ನಂಬರ್ ನೋಡಿದ್ರಾ?

Thalapathy Vijay: ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯ ಪ್ರವೇಶಿಸಿದ್ದು, ಈಗಾಗಲೇ ತಮ್ಮ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ವಿಜಯ್ ಕಣ್ಣಿಟ್ಟಿದ್ದಾರೆ. ಇದರ ನಡುವೆ ಅವರ ಕಾರಿನ ಸಂಖ್ಯೆ ಗಮನ ಸೆಳೆಯುತ್ತಿದೆ.

‘2026ಕ್ಕೆ ಸಿಎಂ’: ದಳಪತಿ ವಿಜಯ್ ಕಾರ್ ನಂಬರ್ ನೋಡಿದ್ರಾ?
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 14, 2024 | 6:34 PM

Share

ದಳಪತಿ ವಿಜಯ್ ಅವರ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆದಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈಗ ಅವರ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿದೆ. ಇದು ಅವರ ಕೊನೆಯ ಸಿನಿಮಾ ಆಗಿರಲಿದೆ. ಈ ಮಧ್ಯೆ ವಿಜಯ್ ಅವರು ರಾಜಕೀಯದಲ್ಲಿ ತೊಡಗಿಕೊಳ್ಳಲು ರೆಡಿ ಆಗಿದ್ದಾರೆ. 2026ರಲ್ಲಿ ಅವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಈಗ ಅವರ ಕಾರ್ ನಂಬರ್ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ದೊಡ್ಡ ಗುಟ್ಟು ರಿವೀಲ್ ಮಾಡಿದಂತೆ ಇದೆ.

ದಳಪತಿ ವಿಜಯ್ ಅವರು ಇತ್ತೀಚೆಗೆ ಕಾರ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಿನ ಸಂಖ್ಯೆ “TN 07 CM 2026” ಎಂದಿದೆ. ಇದು ವೆಂಕಟ್ ಪ್ರಭು ಕಾರು ಎನ್ನಲಾಗಿದೆ. ವೆಂಕಟ್ ಪ್ರಭು ಅವರ ಫೇವರಿಟ್ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ. ಈ ಕಾರಣದಿಂದಲೇ ಅವರು 07 ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. CM 2026 ನಂಬರ್ ಕೂಡ ಇಲ್ಲಿ ಚರ್ಚೆ ಹುಟ್ಟುಹಾಕಿದೆ. ವಿಜಯ್ಗೋಸ್ಕರ ವೆಂಕಟ್ ಅವರು ಈ ರೀತಿ ನಂಬರ್ಪ್ಲೇಟ್ ಹಾಕಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಕೊನೆ ಸಿನಿಮಾಕ್ಕೆ ಭಾರಿ ಸಂಭಾವನೆ ಪಡೆಯುತ್ತಿರುವ ದಳಪತಿ ವಿಜಯ್

ತಮಿಳುನಾಡಿನಲ್ಲಿ 2026ರಲ್ಲಿ ಚುನಾವಣೆ ನಡೆಯುತ್ತಿದೆ. ಅವರು ತಮಿಳಗ ವೆಟ್ರಿ ಕಳಗಮ್ ಹೆಸರಿನ ಪಕ್ಷ ಲಾಂಚ್ ಮಾಡಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಅವರು ಬ್ಯುಸಿ ಆಗಲಿದ್ದಾರೆ. ಈ ಕಾರಣದಿಂದಲೇ ವೆಂಕಟ್ ಪ್ರಭು ಅವರು ‘ಸಿಎಂ 2026’ ನಂಬರ್ಪ್ಲೇಟ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಜಯ್ ಅವರು ತಮಿಳುನಾಡು ಸಿಎಂ ಆಗಲಿ ಎಂಬುದು ವೆಂಕಟ್ ಪ್ರಭು ಅವ ಕನಸೂ ಆಗಿದೆ.

ದಳಪತಿ ವಿಜಯ್ ಹಾಗೂ ವೆಂಕಟ್ ಪ್ರಭು ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಆದರೆ, ಚಿತ್ರ ಯಾಕೋ ಅಂದುಕೊಂಡಷ್ಟು ಕಮಾಲ್ ಮಾಡಿಲ್ಲ. ಈ ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಸದ್ದು ಕಡಿಮೆ ಆಗಿದೆ. 2025ರಿಂದ ವಿಜಯ್ ಅವರು ಪಕ್ಷ ಬೆಳೆಸುವ ಕಾರ್ಯದಲ್ಲಿ ತೊಡಗಲಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ