30 ಕೋಟಿ ರೂ. ಬಜೆಟ್ ಸಿನಿಮಾ ಗಳಿಸಿದ್ದು ಕೇವಲ 30 ಲಕ್ಷ; ಕರೀನಾಗೆ ದೊಡ್ಡ ಹಿನ್ನಡೆ
Kareena Kapoor: ಬಾಲಿವುಡ್ ಬೆಬೊ ಕರೀನಾ ಕಪೂರ್, ದೊಡ್ಡ ಸಂಭಾವನೆ ಪಡೆವ ಸಿನಿಮಾ ನಟಿಯರಲ್ಲಿ ಒಬ್ಬರು. ಆದರೆ ಅವರ ಹೊಸ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಟ್ಟರ್ ಫ್ಲಾಪ್ ಆಗಿದೆ. ಕೋಟಿಗಳ ಬಜೆಟ್ನ ಸಿನಿಮಾ ಗಳಿಸಿರುವುದು ಲಕ್ಷಗಳಷ್ಟೆ.
ಕರೀನಾ ಕಪೂರ್ ಸಿನಿಮಾಗಳು ಎಂದರೆ ಒಂದು ಹಂತಕ್ಕೆ ಕಲೆಕ್ಷನ್ ಮಾಡುತ್ತವೆ ಅನ್ನೋದು ನಿರ್ಮಾಪಕರ ನಂಬಿಕೆ. ಆದರೆ, ಈ ನಂಬಿಕೆ ಏಕೋ ಸುಳ್ಳಾಗುತ್ತಿದೆ. ಅವರು ಚಿತ್ರರಂಗದಿಂದ ದೂರ ಇಲ್ಲ. ತಮಗೆ ಹೊಂದಿಕೆ ಆಗೋ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಇದ್ದಾರೆ. ಈಗ ಅವರ ನಟನೆಯ ‘ದಿ ಬಕ್ಕಿಂಗ್ಹ್ಯಾಮ್ ಮರ್ಡರ್ಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಕರೀನಾ ವೃತ್ತಿ ಜೀವನದಲ್ಲೇ ಅತೀ ಕಳಪೆ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.
ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆದರೆ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತದೆ. ‘ದಿ ಬಕ್ಕಿಂಗ್ಹ್ಯಾಮ್ ಮರ್ಡರ್ಸ್’ ಸಿನಿಮಾಗೆ ಹೈಪ್ ಸಿಕ್ಕಿರಲಿಲ್ಲ. ಈ ಕಾರಣಕ್ಕೋ ಏನೋ 30 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಮೊದಲ ದಿನ ಕೇವಲ 37 ಲಕ್ಷ ಬಾಚಿಕೊಂಡಿದೆ. ಇದು ಚಿತ್ರಕ್ಕೆ ಹಿನ್ನಡೆ ತಂದಿದೆ. ಈ ಸಿನಿಮಾದಲ್ಲಿ ಶೇ.70 ಹಿಂದಿ ಹಾಗೂ ಶೇ.30 ಇಂಗ್ಲಿಷ್ ಇದೆಯಂತೆ.
ಶುಕ್ರವಾರ ಈ ಸಿನಿಮಾದ ಒಟ್ಟಾರೆ ಅಕ್ಯುಪೆನ್ಸ್ ಕೇವಲ 6.93 ಇದೆ. ಅಂದರೆ ನೂರು ಸೀಟ್ಗಳಿದ್ದರೆ ಭರ್ತಿ ಆಗಿದ್ದು ಕೇವಲ ಏಳು ಸೀಟ್ಗಳು ಮಾತ್ರ. ಭಾರತದಲ್ಲಿ ಸಿನಿಮಾಗೆ 1300 ಶೋಗಳು ಸಿಕ್ಕಿವೆ. ವಿದೇಶದಲ್ಲಿ 366 ಶೋಗಳು ಸಿಕ್ಕಿವೆ. ಆದರೂ ಸಿನಿಮಾ ಕಮಾಲ್ ಮಾಡುತ್ತಿಲ್ಲ.
ಇದನ್ನೂ ಓದಿ:ಗೆಳತಿಗಾಗಿ ದೊಡ್ಡ ತ್ಯಾಗ ಮಾಡಿದ ಕರೀನಾ ಕಪೂರ್
2022ರಲ್ಲಿ ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ ಸಿನಿಮಾ ಶೂಟ್ ಆರಂಬಿಸಲಾಯಿತು. ಈ ಸಿನಿಮಾದ ಬಹುತೇಕ ಶೂಟ್ ಲಂಡನ್ನಲ್ಲಿ ನಡೆದಿದೆ. ಕಥಾ ನಾಯಕಿ ಬ್ರಿಟಿಷ್-ಇಂಡಿಯಾ ಡಿಟೆಕ್ಟಿವ್ ಆಗಿರುತ್ತಾಳೆ. ಅವಳೂ ಆಗತಾನೇ ಮಗು ಕಳೆದುಕೊಂಡಿರುತ್ತಾಳೆ. ಈ ವೇಳೆ ಅವಳನ್ನು 10 ವರ್ಷದ ಮಗುವಿನ ಹತ್ಯೆ ಪ್ರಕರಣದ ತನಿಖೆಗೆ ಅಸೈನ್ ಮಾಡಲಾಗುತ್ತದೆ. ಇದು ಸಿನಿಮಾದ ಕಥೆ. ಈ ಚಿತ್ರದಲ್ಲಿ ಕರೀನಾ ಕಪೂರ್, ಆಶ್ ಟಂಡನ್, ರಣವೀರ್ ಬ್ರಾರ್ ಮೊದಲಾದವರು ನಟಿಸಿದ್ದಾರೆ. ಕರೀನಾ ಕಪೂರ್ ಅವರು ಈ ವರ್ಷ ‘ಕ್ರ್ಯೂ’ ಮೂಲಕ ಗೆದ್ದು ಬೀಗಿದ್ದಾರೆ. ಹೀರೋಯಿನ್ ಪಾತ್ರ ಒಪ್ಪಿಕೊಂಡು ಮರಸುತ್ತುವ ಪಾತ್ರಗಳಿಗೆ ಅವರು ಸೀಮಿತ ಆಗುತ್ತಿಲ್ಲ. ಅವರು ಬೇರೆಯದೇ ರೀತಿಯ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Sat, 14 September 24