ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ಆಯುಷ್ಮಾನ್​ ಖುರಾನಾ; ತಿಂಗಳ ರೆಂಟ್ ಎಷ್ಟು ಲಕ್ಷ?

ಆಯುಷ್ಮಾನ್ ಖುರಾನಾ ಅವರು ಆ್ಯಕ್ಷನ್ ಹೀರೋ ಅಲ್ಲ. ಹಾಸ್ಯದ ಮೂಲಕ ಸಿನಿಮಾ ಪ್ರೇಕ್ಷಕರ ಎದುರು ತೆರೆದಿಡುವ ಕಲೆ ಅವರಿಗೆ ಬಂದಿದೆ. ‘ಡಾಕ್ಟರ್ ಜಿ’, ‘ಡ್ರೀಮ್​ ಗರ್ಲ್’ ರೀತಿಯ ಸಿನಿಮಾಗಳನ್ನು ಅವರು ಪ್ರೇಕ್ಷಕರ ಎದುರು ಇಟ್ಟಿದ್ದಾರೆ.

ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ಆಯುಷ್ಮಾನ್​ ಖುರಾನಾ; ತಿಂಗಳ ರೆಂಟ್ ಎಷ್ಟು ಲಕ್ಷ?
ಆಯುಷ್ಮಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Sep 14, 2024 | 7:33 AM

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು 2012ರಲ್ಲಿ ರಿಲೀಸ್ ಆದ ‘ವಿಕ್ಕಿ ಡೋನರ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ವಿಕ್ಕಿ ಅರೋರಾ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಈ ಚಿತ್ರ ಯಶಸ್ಸು ಕಂಡಿತು. ಬಾಲಿವುಡ್​ನಲ್ಲಿ ಅವರು ಒಳ್ಳೆಯ ಹೆಸರು ಮಾಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ಅವರ ನಟನೆಯ ‘ಡ್ರೀಮ್ ಗರ್ಲ್​ 2’ ಚಿತ್ರ ದೊಡ್ಡ ಯಶಸ್ಸು ಕಂಡಿತು. ಇದು ಅವರ 20ನೇ ಸಿನಿಮಾ ಆಗಿತ್ತು. ಇಂದು (ಸೆಪ್ಟೆಂಬರ್ 14) ಅವರಿಗೆ ಜನ್ಮದಿನ. ಈ ಸಂದರ್ಭದಲ್ಲೇ ಶುಭಸುದ್ದಿ ಸಿಕ್ಕಿದೆ.

ಆಯುಷ್ಮಾನ್ ಖುರಾನಾ ಅವರು ಆ್ಯಕ್ಷನ್ ಹೀರೋ ಅಲ್ಲ. ಹಾಸ್ಯದ ಮೂಲಕ ಸಿನಿಮಾ ಪ್ರೇಕ್ಷಕರ ಎದುರು ತೆರೆದಿಡುವ ಕಲೆ ಅವರಿಗೆ ಬಂದಿದೆ. ‘ಡಾಕ್ಟರ್ ಜಿ’, ‘ಡ್ರೀಮ್​ ಗರ್ಲ್’ ರೀತಿಯ ಸಿನಿಮಾಗಳನ್ನು ಅವರು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಆಯುಷ್ಮಾನ್ ಖುರಾನಾ ಅವರು ಲೈವ್ ಶೋ ಮಾಡುತ್ತಿದ್ದಾರೆ. ಕೆಲವು ಸಾಂಗ್​ಗಳನ್ನು ಹಾಡಿ ರಿಲೀಸ್ ಮಾಡುತ್ತಿದ್ದಾರೆ. ಅವರು ಸಿನಿಮಾದ ಹಾಡಿಗೆ ಧ್ವನಿ ಆಗುತ್ತಿದ್ದಾರೆ.

ಆಯುಷ್ಮಾನ್ ಉದ್ಯಮಿ ಕೂಡ ಹೌದು. 2018ರಲ್ಲಿ ಅವರು ‘ದಿ ಮ್ಯಾನ್’ ಕಂಪನಿಯಲ್ಲಿ ಅವರು ದೊಡ್ಡ ಹೂಡಿಕೆ ಮಾಡಿದ್ದರು. ಈ ಕಂಪನಿಯ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಕಂಪನಿಯ ಶೇರುದಾರರಾದಗಿನಿಂದ ಅವರು ಸಾಕಷ್ಟು ಜಾಹೀರಾತು ಮಾಡಿದ್ದಾರೆ. ಅವರು ಈ ಕಂಪನಿ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸುತ್ತಿದ್ದಾರೆ. ಈ ಸಂಸ್ಥೆಯ ವ್ಯಾಲುವೇಷನ್ 400 ಕೋಟಿ ರೂಪಾಯಿ ಆಗಿದೆ.  ಇದರಿಂದ ಅವರಿಗೆ ದೊಡ್ಡ ಲಾಭ ಆಗಿದೆ.

ಆಯುಷ್ಮಾನ್ ಖುರಾನಾ ಅವರ ಆಸ್ತಿ 80 ಕೋಟಿ ರೂಪಾಯಿ ಇದೆ. ಅವರಿಗೆ ಬ್ರ್ಯಾಂಡ್​ಗಳ ಮೂಲಕ ಸಾಕಷ್ಟು ಹಣ ಬರುತ್ತಿದೆ. ಅವರು ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಪಡೆಯುತ್ತಾರೆ. ಡ್ಯಾನಿಯಲ್ ವಿಲ್ಲಿಂಗ್ಟನ್, ಟೊಯಾಟೋ, ಬಾಲಾಜಿ ಅಲಿಯಾಂಜ್ ಸೇರಿ ಅನೇಕ ಬ್ರ್ಯಾಂಡ್​ಗಳಿಗೆ ಇವರು ಪ್ರಚಾರ ರಾಯಭಾರಿ ಆಗಿದ್ದಾರೆ. ಅವರು ಪ್ರತಿ ಬ್ರ್ಯಾಂಡ್ ಪ್ರಚಾರಕ್ಕೆ 3.5 ಕೋಟಿ ರೂಪಾಯಿ ಪಡೆಯುತ್ತಾರೆ.

ಇದನ್ನೂ ಓದಿ: 60 ಕೋಟಿ ರೂಪಾಯಿ ಗಳಿಸಿದ ‘ಡ್ರೀಮ್ ಗರ್ಲ್ 2’: ‘ಗದರ್ 2’ ಅಬ್ಬರದ ನಡುವೆಯೂ ಗೆದ್ದ ಆಯುಷ್ಮಾನ್​

ಆಯುಷ್ಮಾನ್ ಅವರು ಸದ್ಯ ಅಂಧೇರಿಯಲ್ಲಿ ವಾಸವಾಗಿದ್ದು, ಇದು ಬಾಡಿಗೆ ಮನೆ. ಅವರು ಪ್ರತಿ ತಿಂಗಳು 5 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರೆ. ಇದು 7 ಬೆಡ್​ರೂಂ ಮನೆ ಆಗಿದೆ.  ಆಯುಷ್ಮಾನ್ ಖುರಾನಾ ಅವರು ಪಂಚಕುಲಾ ಪ್ರಾಪರ್ಟಿ ಹೊಂದಿದ್ದಾರೆ. ಇದರ ಬೆಲೆ 9 ಕೋಟಿ ರೂಪಾಯಿ. ಅವರು ಮುಂಬೈನಲ್ಲಿ 19 ಕೋಟಿಯ ಪ್ರಾಪರ್ಟಿ ತೆಗೆದುಕೊಂಡಿದ್ದಾರೆ.

ಆಯುಷ್ಮಾನ್ ಬಳಿ ಮರ್ಸಿಡೀಸ ಮೇಬ್ಯಾಶ್ ಜಿಎಲ್​ಎಸ್​600 ಬೆಲೆ 2.80 ಕೋಟಿ ರೂಪಾಯಿ ಇದೆ. ಬಿಎಎಂಡಬ್ಲ್ಯೂ 5 ಸೀರಿಸ್ (74 ಲಕ್ಷ ರೂಪಾಯಿ), ಆಡಿ ಎ4 (48.96 ಲಕ್ಷ ರೂಪಾಯಿ) ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!