‘ದಿ ನೈಟ್ ಮ್ಯಾನೇಜರ್’ ಚಿತ್ರಕ್ಕೆ ಬರಲಿದೆ ಎರಡನೇ ಪಾರ್ಟ್​; ಆದರೆ ಇದಕ್ಕಿದೆ ಟ್ವಿಸ್ಟ್

The Night Manager: ಅನಿಲ್ ಕಪೂರ್ ಅವರು ಶೆಲ್ಲಿ ಹಾಗೂ ಆದಿತ್ಯ ಅವರು ಶಾನ್ ಪಾತ್ರದಲ್ಲಿ ಮಿಂಚಿದ್ದರು. ಸದ್ಯ ಪ್ರಸಾರ ಕಂಡ ಸೀರಿಸ್​ನಲ್ಲಿ ಹಲವು ವಿಚಾರ ತೋರಿಸಿಲ್ಲ.

‘ದಿ ನೈಟ್ ಮ್ಯಾನೇಜರ್’ ಚಿತ್ರಕ್ಕೆ ಬರಲಿದೆ ಎರಡನೇ ಪಾರ್ಟ್​; ಆದರೆ ಇದಕ್ಕಿದೆ ಟ್ವಿಸ್ಟ್
ನೈಟ್ ಮ್ಯಾನೇಜರ್
Edited By:

Updated on: Jul 07, 2023 | 6:30 AM

ಇತ್ತೀಚೆಗೆ ರಿಲೀಸ್ ಆದ ‘ದಿ ನೈಟ್ ಮ್ಯಾನೇಜರ್’ (The Night Manager) ವೆಬ್ ಸೀರಿಸ್ ಸಾಕಷ್ಟು ಗಮನ ಸೆಳೆದಿತ್ತು. ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್, ಶೋಭಿತಾ ಧುಲಿಪಾಲ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆದಿತ್ಯ ರಾಯ್ ಕಪೂರ್ (Aditya Roy Kapurt) ಅವರು ರಾ ಏಜೆಂಟ್ ಆಗಿ ಕಾಣಿಸಿಕೊಂಡರೆ, ಅನಿಲ್ ಕಪೂರ್ ಅವರು ಶಸ್ತ್ರಾಸ್ತ್ರ ಡೀಲರ್ ಆಗಿ ನಟಿಸಿದ್ದಾರೆ. ಈಗ ಈ ಸೀರಿಸ್​ಗೆ ಸೀಕ್ವೆಲ್ ಮಾಡೋಕೆ ಸಿದ್ಧತೆ ನಡೆದಿದೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಅನೇಕರು ಖುಷಿ ಆಗಿದ್ದಾರೆ.

‘ದಿ ನೈಟ್ ಮ್ಯಾನೇಜರ್’ ಸೀರಿಸ್​ನ ಸಂದೀಪ್ ಮೋದಿ, ಪ್ರಿಯಾಂಕಾ ಘೋಷ್ ಅವರು ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಬ್ರಿಟನ್ ಕಾದಂಬರಿ ‘ದಿ ನೈಟ್ ಮ್ಯಾನೇಜರ್’ ಆಧರಿಸಿ ಈ ವೆಬ್ ಸೀರಿಸ್ ಸಿದ್ಧಗೊಂಡಿದೆ. ಹಾಟ್​ಸ್ಟಾರ್ ಮೂಲಕ ನೇರವಾಗಿ ಇದು ಪ್ರಸಾರ ಕಂಡಿದೆ. ಸಖತ್ ಸಸ್ಪೆನ್ಸ್​ ಆಗಿ ಈ ವೆಬ್ ಸರಣಿ ಮೂಡಿ ಬಂದಿತ್ತು. ಈಗ ಈ ಸರಣಿಗೆ ಪ್ರೀಕ್ವೆಲ್ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿದ್ದಾರಂತೆ.

ಅನಿಲ್ ಕಪೂರ್ ಅವರು ಶೆಲ್ಲಿ ಹಾಗೂ ಆದಿತ್ಯ ಅವರು ಶಾನ್ ಪಾತ್ರದಲ್ಲಿ ಮಿಂಚಿದ್ದರು. ಸದ್ಯ ಪ್ರಸಾರ ಕಂಡ ಸೀರಿಸ್​ನಲ್ಲಿ ಇವರ ಹಿನ್ನೆಲೆ ಬಗ್ಗೆ, ಇವರು ಯಾಕೆ ಆ ಕೆಲಸಕ್ಕೆ ಒಪ್ಪಿಕೊಂಡರು ಎನ್ನುವ ವಿಚಾರ ರಿವೀಲ್ ಆಗಿಲ್ಲ. ಇಬ್ಬರಿಗೂ ಅವರದ್ದೇ ಆದ ಹಿನ್ನೆಲೆ ಇದೆ. ಇನ್ನು, ಶೋಭಿತಾ ಪಾತ್ರ ಕೂಡ ಹೈಲೈಟ್ ಆಗಿದ್ದು ಅವರು ನಿರ್ವಹಿಸಿರುವ ಪಾತ್ರದ ಹಿಂದೂ ಒಂದು ಕಥೆ ಇದೆ. ಇವುಗಳನ್ನು ಪ್ರೀಕ್ವೆಲ್​ನಲ್ಲಿ ತೋರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಎರಡನೇ ಪತಿಗೂ ವಿಚ್ಛೇದನ ಕೊಟ್ಟ ರುಕ್ಸಾರ್ ರೆಹಮಾನ್; 13 ವರ್ಷಗಳ ದಾಂಪತ್ಯ ಅಂತ್ಯ?

ದೀಪಕ್ ಧಾರ್, ರಿಷಿ ನೇಗಿ, ರಾಜೇಶ್ ಚಡ್ಡಾ ಅವರು ‘ದಿ ನೈಟ್ ಮ್ಯಾನೇಜರ್​’ನ ನಿರ್ಮಾಣ ಮಾಡಿದ್ದಾರೆ. ಮೊದಲ ಸೀಸನ್ ಎರಡು ಭಾಗದಲ್ಲಿ ರಿಲೀಸ್ ಆಗಿದೆ. ಆರ್ಮ್ಸ್ ಡೀಲರ್ ಜೊತೆ ಸೇರಿಕೊಳ್ಳುವ ರಾ ಏಜೆಂಟ್ ಆತನನ್ನು ಹೇಗೆ ಸರ್ವನಾಶ ಮಾಡುತ್ತಾನೆ ಅನ್ನೋದು ಈ ಸೀರಿಸ್​ನ ಕಥೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ