ಎರಡನೇ ಪತಿಗೂ ವಿಚ್ಛೇದನ ಕೊಟ್ಟ ರುಕ್ಸಾರ್ ರೆಹಮಾನ್; 13 ವರ್ಷಗಳ ದಾಂಪತ್ಯ ಅಂತ್ಯ?
ಅಸದ್ ಅಹ್ಮದ್ ಅವರನ್ನು ನಟಿ ರುಕ್ಸಾರ್ ಅವರು ಮೊದಲು ಮದುವೆ ಆದರು. ಇಬ್ಬರೂ ಬಳಿಕ ಬೇರೆ ಆದರು. ಈಗ ಅವರು ಎರಡನೇ ಪತಿಯ ಜೊತೆಗೂ ವಿಚ್ಛೇದನ ಪಡೆಯುತ್ತಿದ್ದಾರೆ.
ಕೇವಲ 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರುಕ್ಸಾರ್ ರೆಹಮಾನ್ (Rukhsar Rehman) ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 1992ರಲ್ಲಿ ‘ಯಾದ್ ರಕೇಗಿ ದುನಿಯಾ’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ದೀರ್ಘ ಬ್ರೇಕ್ ಪಡೆದು, ರಾಮ್ ಗೋಪಾಲ್ ವರ್ಮಾ (Ram Gopal Varma) ನಿರ್ದೇಶನದ ‘ಸರ್ಕಾರ್’ (1995) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ಅವರು ಹಲವು ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಈಗ ಅವರು ಸುದ್ದಿಯಲ್ಲಿದ್ದಾರೆ. ಎರಡನೇ ಪತಿಗೆ ರುಕ್ಸಾರ್ ವಿಚ್ಛೇದನ ನೀಡುತ್ತಿದ್ದಾರೆ ಎನ್ನಲಾಗಿದೆ.
ಅಸದ್ ಅಹ್ಮದ್ ಅವರನ್ನು ನಟಿ ರುಕ್ಸಾರ್ ಅವರು ಮೊದಲು ಮದುವೆ ಆದರು. ಆದರೆ, ಇವರ ಮಧ್ಯೆ ಹೊಂದಾಣಿಕೆ ಬರಲಿಲ್ಲ. ಇಬ್ಬರೂ ಬಳಿಕ ಬೇರೆ ಆದರು. 2010ರಲ್ಲಿ ಖ್ಯಾತ ನಿರ್ದೇಶಕ ಫಾರೂಕ್ ಕಬೀರ್ ಅವರನ್ನು ರುಕ್ಸಾರ್ ಮದುವೆ ಆಗಿದ್ದರು. ವಿವಾಹ ಆಗಿ 13 ವರ್ಷಗಳ ನಂತರ ರುಕ್ಸಾರಾ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.
ಈ ವರ್ಷ ಫೆಬ್ರವರಿಯಿಂದ ರುಕ್ಸಾರ್ ಹಾಗೂ ಫಾರೂಕ್ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇಬ್ಬರೂ ಸಹಮತದೊಂದಿಗೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ‘ನಾವು ಬೇರ್ಪಟ್ಟಿದ್ದೇವೆ. ನಮ್ಮ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿವೆ. ಇದು ಸಂಪೂರ್ಣವಾಗಿ ನನ್ನ ವೈಯಕ್ತಿಕ ವಿಚಾರ. ಈ ಬಗ್ಗೆ ಈಗಲೇ ಮಾತನಾಡಲು ಬಯಸುವುದಿಲ್ಲ’ ಎಂದು ರುಕ್ಸಾರ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:Dhoni Entertainment: ತಮಿಳು ಸ್ಟಾರ್ ನಟ ಯೋಗಿ ಬಾಬುಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಎಂಎಸ್ ಧೋನಿ: ಫೋಟೋ ವೈರಲ್
ರುಕ್ಸಾರ್ ಮೊದಲು ಮದುವೆಯಾಗಿದ್ದು ಅಸದ್ ಅಹ್ಮದ್ ಅವರನ್ನು. ಇವರಿಗೆ ಹೆಣ್ಣು ಮಗು ಜನಿಸಿದ್ದು, ಅವಳಿಗೆ ಆಯಿಷಾ ಅಹಮದ್ ಎಂದು ಹೆಸರಿಡಲಾಗಿದೆ. ರುಕ್ಸಾರ್ ಮತ್ತು ಫಾರೂಕ್ ಅವರೊಂದಿಗೆ ಆರು ವರ್ಷಗಳ ಕಾಲ ಡೇಟಿಂಗ್ ಮಾಡಿ 2010ರಲ್ಲಿ ವಿವಾಹವಾದರು. ಕಳೆದ ವರ್ಷ ಅವರ ನಿರ್ದೇಶನದ ‘ಖುದಾ ಹಾಫೀಜ್ 2’ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದರು. ಇತ್ತೀಚೆಗೆ ರಿಲೀಸ್ ಆದ ‘ದಿ ನೈಟ್ ಮ್ಯಾನೇಜರ್’ ಸಿನಿಮಾದಲ್ಲಿ ರುಕ್ಸಾರ್ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ