AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ ‘ದಿ ಆಡಸ್ಸಿ’, ಎಲ್ಲೆಲ್ಲಿ ನೋಡಬಹುದು?

ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ದಿ ಆಡಸ್ಸಿ’ ಸಿನಿಮಾ ರಿಲೀಸ್ ಆದ ಬಳಿಕವೂ ಸಹ ಅದ್ಭುತ ಪ್ರದರ್ಶನ ಕಂಡಿತು. ‘ಸ್ಪೈಡರ್ ಮ್ಯಾನ್’ ಸಿನಿಮಾ ಕಾರಣಕ್ಕೆ ತುಸು ಹಿನ್ನಡೆ ಆಯಿತಾದರೂ ಸಿನಿಮಾ 16,860 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತು. ಬೆಂಗಳೂರು ಸೇರಿದಂತೆ ವಿಶ್ವದ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಈಗಲೂ ಸಿನಿಮಾ ಪ್ರದರ್ಶನ ಆಗುತ್ತಲೇ ಇದೆ. ಆದರೆ ಇದೀಗ ಸಿನಿಮಾ ಒಟಿಟಿಗೆ ಸಹ ಬರುತ್ತಿದೆ.

ಹಲವು ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ ‘ದಿ ಆಡಸ್ಸಿ’, ಎಲ್ಲೆಲ್ಲಿ ನೋಡಬಹುದು?
The Odessey
ಮಂಜುನಾಥ ಸಿ.
|

Updated on: Nov 17, 2026 | 6:51 PM

Share

ಕ್ರಿಸ್ಟೊಫರ್ ನೋಲನ್, ವಿಶ್ವ ಚಿತ್ರರಂಗದ ಹಾಲಿ ನಂಬರ್ 1 ನಿರ್ದೇಶಕ ಎನ್ನಲಾಗುತ್ತದೆ. ಅವರ ನಿರ್ದೇಶನದ ಸಿನಿಮಾಗಳಿಗಾಗಿ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳ ವರ್ಷಾನುಗಟ್ಟಲೆ ಕಾಯುತ್ತಾರೆ. ಅವರ ನಿರ್ದೇಶನದ ‘ದಿ ಆಡಸ್ಸಿ’ ಸಿನಿಮಾ ಇದೇ ವರ್ಷ ಜುಲೈ ತಿಂಗಳಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದ ಮುಂಗಡ ಬುಕಿಂಗ್ ಒಂದು ವರ್ಷಕ್ಕೂ ಹಿಂದೆಯೇ ಓಪನ್ ಆಗಿದ್ದವು. ಈ ಸಿನಿಮಾದ ಟಿಕೆಟ್​​ಗಳನ್ನು ಕೆಲವರು ಬ್ಲ್ಯಾಕ್ ಮಾರ್ಕೆಟ್​​ನಲ್ಲಿ ಭಾರಿ ಮೊತ್ತಕ್ಕೆ ಮಾರಾಟವನ್ನೂ ಸಹ ಮಾಡಿದ್ದರು. ಸಿನಿಮಾ ರಿಲೀಸ್ ಆದ ಬಳಿಕವೂ ಸಹ ಅದ್ಭುತ ಪ್ರದರ್ಶನ ಕಂಡಿತು. ‘ಸ್ಪೈಡರ್ ಮ್ಯಾನ್’ ಸಿನಿಮಾ ಕಾರಣಕ್ಕೆ ತುಸು ಹಿನ್ನಡೆ ಆಯಿತಾದರೂ ಸಿನಿಮಾ 16,860 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತು. ಬೆಂಗಳೂರು ಸೇರಿದಂತೆ ವಿಶ್ವದ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಈಗಲೂ ಸಿನಿಮಾ ಪ್ರದರ್ಶನ ಆಗುತ್ತಲೇ ಇದೆ. ಆದರೆ ಇದೀಗ ಸಿನಿಮಾ ಒಟಿಟಿಗೆ ಸಹ ಬರುತ್ತಿದೆ.

ಕ್ರಿಸ್ಟೊಫರ್ ನೋಲನ್, ತಮ್ಮ ಸಿನಿಮಾಗಳನ್ನು ಸಣ್ಣ ಪರದೆಗಳಲ್ಲಿ ನೋಡುವುದನ್ನು ಇಷ್ಟಪಡುವುದಿಲ್ಲ. ಇದೇ ಕಾರಣಕ್ಕೆ ಉದ್ದೇಶಪೂರ್ವಕವಾಗಿ ತಮ್ಮ ಸಿನಿಮಾಗಳನ್ನು ಒಟಿಟಿಗೆ ಬಹಳ ತಡವಾಗಿ ಬಿಡುಗಡೆ ಮಾಡುತ್ತಾರೆ. ಇದೀಗ ‘ದಿ ಆಡಸ್ಸಿ’ ಸಿನಿಮಾ ಒಟಿಟಿಗೆ ಬರುತ್ತಿದ್ದು, ಒಂದಲ್ಲ ಬದಲಿಗೆ ಹಲವು ಒಟಿಟಿಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಇಂದಿನಿಂದ (ನವೆಂಬರ್ 17) ಈ ಸಿನಿಮಾ ಅಮೆಜಾನ್ ಪ್ರೈಂ, ಆಪಲ್ ಟಿವಿ, ಫ್ಯಾಂಡಾಗೊ ಅಟ್ ಹೋಮ್ ಜೊತೆಗೆ ಇನ್ನೂ ಕೆಲವು ವಿಡಿಯೋ ಆನ್ ಡಿಮಾಂಡ್ ವೇದಿಕೆಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಈ ಎಲ್ಲ ವೇದಿಕೆಗಳಲ್ಲಿಯೂ ಸಿನಿಮಾ ನೋಡಲು ಸಬ್​​ಸ್ಕ್ರೀಪ್ಷನ್ ಜೊತೆಗೆ ಹೆಚ್ಚುವರಿ ಹಣ ನೀಡಬೇಕಾಗಿರುತ್ತದೆ.

ಇದನ್ನೂ ಓದಿ:ಆ್ಯಕ್ಷನ್-ಕಟ್ ಹೇಳಿ ಗೆದ್ದ ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳಿವರು

ಆದರೆ ಇದೇ ಸಿನಿಮಾ ಜಿಯೋ ಹಾಟ್​​ಸ್ಟಾರ್​​​ನಲ್ಲಿ ಅಥವಾ ‘ಪೀಕಾಕ್’ನಲ್ಲಿ 2027ರ ಆರಂಭದಲ್ಲಿ ರಿಲೀಸ್ ಆಗಲಿದ್ದು, ಆಗ ಸಿನಿಮಾ ಅನ್ನು ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ. ಆದರೆ ಈಗಲೇ ಒಟಿಟಿಯಲ್ಲಿ ‘ದಿ ಆಡಸ್ಸಿ’ ಸಿನಿಮಾ ವೀಕ್ಷಿಸಬೇಕೆಂದರೆ ವೀಕ್ಷಕರು ಹೆಚ್ಚುವರಿ ಹಣವನ್ನು ನೀಡಬೇಕಾಗಿರುತ್ತದೆ. ‘ದಿ ಆಡಸ್ಸಿ’ ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮೆರಾ ಮತ್ತು ರೀಲ್ ಬಳಸಿ ಚಿತ್ರೀಕರಣ ಮಾಡಿದ ಸಿನಿಮಾ ಆಗಿದೆ. ಐಮ್ಯಾಕ್ಸ್ ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಸಂಪೂರ್ಣ ಅನುಭವವನ್ನು ಪಡೆಯಬಹುದಾಗಿದೆ. ಆದರೆ ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ.

‘ದಿ ಆಡಸ್ಸಿ’ ಸಿನಿಮಾವು ಹೋಮರ್ ಬರೆದ ಕಾವ್ಯವನ್ನು ಆಧರಿಸಿದ ಸಿನಿಮಾ ಆಗಿದೆ. ಸಿನಿಮಾನಲ್ಲಿ ಮ್ಯಾಟ್ ಡೇಮನ್, ಸ್ಪೈಡರ್ ಮ್ಯಾನ್ ಖ್ಯಾತಿಯ ಟಾಮ್ ಹಾಲೆಂಡ್, ಬ್ಯಾಟ್​​ಮ್ಯಾನ್ ಖ್ಯಾತಿಯ ರಾಬರ್ಟ್ ಪ್ಯಾಟಿನ್​​ಸನ್, ಖ್ಯಾತ ನಟಿ ಅನ್ನಾ ಹಾತ್​​ವೇ, ಜೆಂಡೆಯಾ, ಟ್ರೈವಸ್ ಸ್ಕಾಟ್ ಇನ್ನೂ ಹಲವಾರು ಖ್ಯಾತ ನಟ-ನಟಿಯರು ನಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?