ಇಷ್ಟು ದಿನ ವೀಕ್ಷಕರು ನೋಡಿದ ಬಿಗ್ ಬಾಸ್ ಒಂದು ರೀತಿ ಇತ್ತು. ಆದರೆ ಈಗ ನೋಡುತ್ತಿರುವ ಬಿಗ್ ಬಾಸ್ ಬೇರೆ ರೀತಿ ಇದೆ. ಅಂದರೆ, ವೂಟ್ನಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್ ಬಾಸ್ ಓಟಿಟಿ’ (Bigg Boss OTT) ಕಾರ್ಯಕ್ರಮ ಸಿಕ್ಕಾಪಟ್ಟೆ ಭಿನ್ನವಾಗಿ ಮೂಡಿಬರುತ್ತಿದೆ. ಓಟಿಟಿ ಎಂದರೆ ಅಲ್ಲಿ ಸದ್ಯಕ್ಕೆ ಸೆನ್ಸಾರ್ನ ಹಂಗಿಲ್ಲ. ಹಾಗಾಗಿ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಹಾಟ್ ಆಗಿ ಈ ಶೋ ಮೂಡಿಬರುತ್ತಿದೆ. ಅನೇಕ ವಿವಾದಾತ್ಮಕ ವ್ಯಕ್ತಿಗಳೇ ದೊಡ್ಮನೆಗೆ ಕಾಲಿಟ್ಟಿರುವುದರಿಂದ ಹಲವು ಟ್ವಿಸ್ಟ್ಗಳು ಸಿಗುತ್ತಿವೆ. ಇತ್ತೀಚೆಗೆ ನಟಿ ಊರ್ಫಿ ಜಾವೇದ್ (Urfi Javed) ತಮ್ಮ ವಿಚಿತ್ರ ಕಾಸ್ಟ್ಯೂಮ್ ಮೂಲಕ ಗಮನ ಸೆಳೆದರು.
ತಮ್ಮ ಬಟ್ಟೆಗಳನ್ನು ನಾವೇ ಡಿಸೈನ್ ಮಾಡಿಕೊಳ್ಳುವ ಮೂಲಕ ಊರ್ಫಿ ಜಾವೇದ್ ಅವರು ಫೇಮಸ್ ಆಗಿದ್ದರು. ಬಿಗ್ ಬಾಸ್ ಮನೆಯ ಒಳಗೂ ಅವರು ಅದನ್ನು ಮುಂದುವರಿಸಿದ್ದಾರೆ. ಆದರೆ ದೊಡ್ಮನೆಯೊಳಗೆ ತಮ್ಮ ಇಷ್ಟದ ಪ್ರಕಾರ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಳ್ಳಲು ಅವರಿಗೆ ಎಲ್ಲ ಪರಿಕರಗಳು ಸಿಕ್ಕಿಲ್ಲ. ಹಾಗಾಗಿ ಇರುವ ಕೆಲವು ವಸ್ತುಗಳನ್ನೇ ಬಳಸಿಕೊಂಡು ಅವರು ತಮ್ಮ ಕ್ರಿಯೇಟಿವಿಟಿ ತೋರಿಸುತ್ತಿದ್ದಾರೆ. ಅಚ್ಚರಿ ಎಂದರೆ ಅವರು ಕಸದ ಚೀಲವನ್ನು ಬಳಸಿಕೊಂಡು ತಮ್ಮ ಹೊಸ ಕಾಸ್ಟ್ಯೂಮ್ ವಿನ್ಯಾಸ ಮಾಡಿದ್ದಾರೆ.
ಕಸವನ್ನು ಹಾಕಲು ಕಪ್ಪು ಬಣ್ಣ ಪ್ಲಾಸಿಕ್ ಕವರ್ ಬಳಸಲಾಗುತ್ತದೆ. ಅದನ್ನೇ ಇಟ್ಟುಕೊಂಡು ಹೊಸ ಬಗೆಯಲ್ಲಿ ಊರ್ಫಿ ಜಾವೇದ್ ಅವರು ಕಾಸ್ಟ್ಯೂಮ್ ವಿನ್ಯಾಸ ಮಾಡಿದ್ದೂ ಅಲ್ಲದೆ, ಅದನ್ನು ಧರಿಸಿಕೊಂಡು ವಿಂಚಿದ್ದಾರೆ. ಆ ಬಟ್ಟೆ ತುಂಬ ಗ್ಲಾಮರಸ್ ಆಗಿಯೂ ಕಾಣಿಸಿತು ಎಂಬುದು ವಿಶೇಷ. ಊರ್ಫಿಯ ಪ್ರತಿಭೆ ಕಂಡು ಇನ್ನುಳಿದ ಸದಸ್ಯರೆಲ್ಲ ಮೆಚ್ಚುಗೆ ಸೂಚಿಸಿದ್ದಾರೆ. ಬಿಗ್ ಬಾಸ್ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಊರ್ಫಿ ಇಷ್ಟೆಲ್ಲ ಕ್ರಿಯೇಟಿವಿಟಿ ತೋರಿಸುತ್ತಿದ್ದಾರೆ. ಮುಂದೆ ಅವರು ಏನೆಲ್ಲ ಮಾಡಬಹುದು ಎಂಬ ಕೌತುಕ ಮೂಡಿದೆ.
ಬಿಗ್ ಬಾಸ್ ಓಟಿಟಿ ಕೇವಲ ಆರು ವಾರಗಳ ಕಾಲ ನಡೆಯಲಿದೆ. ಹಾಗಾಗಿ ಇಲ್ಲಿ ಸ್ಪರ್ಧಿಗಳಿಗೆ ಗುರುತಿಸಿಕೊಳ್ಳಲು ಹೆಚ್ಚು ಸಮಯಾವಕಾಶ ಇಲ್ಲ. ಇರುವ ಸಮಯದಲ್ಲೇ ಏನಾದರೂ ಮಾಡಿ ಎಲಿಮಿನೇಷನ್ನಿಂದ ಸೇವ್ ಆಗಬೇಕಿದೆ. ಇತ್ತೀಚೆಗೆ ಗಾಯಕಿ ನೇಹಾ ಭಾಸಿನ್ ಅವರು ನಟಿ ರಿಧಿಮಾ ಪಂಡಿತ್ ತುಟಿಗೆ ಮುತ್ತಿಟ್ಟು ಹೈಪ್ ಸೃಷ್ಟಿಸಿದ್ದರು. ಈಗ ಕಸದ ಬ್ಯಾಗ್ನಿಂದ ಊರ್ಫಿ ಜಾವೇದ್ ಕಾಸ್ಟ್ಯೂಮ್ ಮಾಡಿ ಹಾಕಿಕೊಂಡಿರುವುದು ಚರ್ಚೆ ಆಗುತ್ತಿದೆ.
ಇದನ್ನೂ ಓದಿ:
‘ಒಮ್ಮೆ ಅವನು ನನ್ನ ಜತೆ ಲಿಮಿಟ್ ಕ್ರಾಸ್ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ
ನೈತಿಕತೆ ಬಿಟ್ಟು ಮಹಿಳಾ ಸ್ಪರ್ಧಿಗೆ ಲಿಪ್ ಕಿಸ್ ಮಾಡಿದ ಗಾಯಕಿ; ಎತ್ತ ಸಾಗುತ್ತಿದೆ ಬಿಗ್ ಬಾಸ್?
Published On - 3:29 pm, Sun, 15 August 21