
ಕಮಲ್ ಹಾಸನ್ ಅವರು ‘ವಿಕ್ರಮ್’ ಸಿನಿಮಾ ಮೂಲಕ ಭರ್ಜರಿ ಗೆಲುವು ಕಂಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲಾಗಲೇ ಚಿತ್ರದ ಒಟಿಟಿ ಪ್ರಸಾರ ದಿನಾಂಕದ ಬಗ್ಗೆ ಘೋಷಣೆ ಮಾಡಲಾಗಿದೆ.

ಜುಲೈ 8ರಿಂದ ‘ವಿಕ್ರಮ್’ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆರಂಭಿಸಲಿದೆ. ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ ಮೂಲಕ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ. ಈ ಸುದ್ದಿ ಕೇಳಿ ಕಮಲ್ ಹಾಸನ್ ಫ್ಯಾನ್ ಖುಷಿಪಟ್ಟಿದ್ದಾರೆ.

ಚಿತ್ರಮಂದಿರದಲ್ಲಿ ಈ ಸಿನಿಮಾ ತಮಿಳಿನಲ್ಲಿ ಮಾತ್ರ ರಿಲೀಸ್ ಆಗಿತ್ತು. ಈಗ ಬೇರೆ ಭಾಷೆಗಳಿಗೂ ಡಬ್ ಆಗಿದೆ. ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಒಟಿಟಿ ಮೂಲಕ ಹೆಚ್ಚಿನ ಜನರನ್ನು ‘ವಿಕ್ರಮ್’ ಚಿತ್ರ ತಲುಪಲಿದೆ.

ಬಾಕ್ಸ್ ಆಫೀಸ್ನಲ್ಲಿ ‘ವಿಕ್ರಮ್’ ಸಿನಿಮಾ ಭಾರಿ ಗೆಲುವು ಕಂಡಿದೆ. ವಿಶ್ವಾದ್ಯಂತ ಅಂದಾಜು 400 ಕೋಟಿ ರೂಪಾಯಿ ಗಳಿಸಿರುವುದು ಈ ಚಿತ್ರದ ಹೆಚ್ಚುಗಾರಿಕೆ. ಒಟಿಟಿಯಲ್ಲೂ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುವ ನಿರೀಕ್ಷೆ ಇದೆ.

ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಫಹಾದ್ ಫಾಸಿಲ್, ವಿಜಯ್ ಸೇತುಪತಿ ನಟಿಸಿದ್ದಾರೆ. ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಕಮಲ್ ಹಾಸನ್ ಅವರ ಹೋಮ್ ಪ್ರೊಡಕ್ಷನ್ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಮೂಲಕ ಈ ಸಿನಿಮಾ ಮೂಡಿಬಂದಿದೆ.
Published On - 1:43 pm, Wed, 29 June 22