ಜಿಯೋ ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿಗಳನ್ನು ಟಿವಿಗೂ ಮೊದಲೇ ವೀಕ್ಷಿಸಬಹುದು; ಹೇಗೆ?

|

Updated on: May 08, 2024 | 2:25 PM

ಈ ಮೊದಲು ವೂಟ್ ಆ್ಯಪ್​ನಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಗಳನ್ನು 24 ಗಂಟೆ ಮೊದಲೇ ನೋಡುವ ಅವಕಾಶವನ್ನು ಕಲ್ಪಿಸಿತ್ತು. ಇಷ್ಟು ದಿನಗಳ ಕಾಲ ಜಿಯೋ ಸಿನಿಮಾದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಇಗ ಜಾರಿಗೊಳಿಸಿರೋ ಹೊಸ ಪ್ಲ್ಯಾನ್​ನಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ.

ಜಿಯೋ ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿಗಳನ್ನು ಟಿವಿಗೂ ಮೊದಲೇ ವೀಕ್ಷಿಸಬಹುದು; ಹೇಗೆ?
ಜಿಯೋ ಸಿನಿಮಾ
Follow us on

ಕಲರ್ಸ್​ ಕನ್ನಡ, ಕಲರ್ಸ್ ಟಿವಿ ಸೇರಿ ವಯಕಾಂ ನೆಟ್ವರ್ಕ್ ಅಡಿಯಲ್ಲಿ ಬರುವ ಎಲ್ಲಾ ಚಾನೆಲ್​ನ ಧಾರಾವಾಹಿಗಳನ್ನು ಜಿಯೋ ಸಿನಿಮಾದಲ್ಲಿ (Jio Cinema) ವೀಕ್ಷಿಸಬಹುದು. ಈ ಮೊದಲು ವೂಟ್​ನಲ್ಲಿ ಇವುಗಳು ಲಭ್ಯವಾಗುತ್ತಿದ್ದವು. ಈಗ ಅದನ್ನು ಜಿಯೋ ಸಿನಿಮಾ ಆ್ಯಪ್​ಗೆ ಸ್ಥಳಾಂತರಿಸಲಾಗಿದೆ. ಈಗ ನೀವು ಈ ಚಾನೆಲ್​​ಗಳಲ್ಲಿ ಬರೋ ಧಾರಾವಾಹಿಗಳನ್ನು ಟಿವಿಗೂ ಮೊದಲೇ ಈ ಆ್ಯಪ್​ನಲ್ಲಿ ನೋಡಬಹುದು. ಇದಕ್ಕೆ ನೀವು ಮಾಸಿಕ 29 ರೂಪಾಯಿ ಅಥವಾ 89 ರೂಪಾಯಿ ಪ್ಲ್ಯಾನ್ ತೆಗೆದುಕೊಳ್ಳಬೇಕು.

ಈ ಮೊದಲು ವೂಟ್ ಆ್ಯಪ್​ನಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಗಳನ್ನು 24 ಗಂಟೆ ಮೊದಲೇ ನೋಡುವ ಅವಕಾಶವನ್ನು ಕಲ್ಪಿಸಿತ್ತು. ಇಷ್ಟು ದಿನಗಳ ಕಾಲ ಜಿಯೋ ಸಿನಿಮಾದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಇಗ ಜಾರಿಗೊಳಿಸಿರೋ ಹೊಸ ಪ್ಲ್ಯಾನ್​ನಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಭಾಗ್ಯಲಕ್ಷ್ಮಿ‘, ‘ಲಕ್ಷ್ಮೀ ಬಾರಮ್ಮ‘, ‘ರಾಮಾಚಾರಿ’, ‘ಶ್ರೀಗೌರಿ’, ‘ಅಂತರ ಪಟ’ ಸೇರಿ ಎಲ್ಲಾ ಧಾರಾವಾಹಿಗಳನ್ನು 6 ಗಂಟೆ ಮೊದಲೇ ವೀಕ್ಷಿಸಲು ಅವಕಾಶ ಇದೆ.

ಜಿಯೋ ಸಿನಿಮಾದಲ್ಲಿ 20+ ಟಿವಿ ಚಾನೆಲ್​ಗಳು ಸ್ಟ್ರೀಮಿಂಗ್​ ಆಗುತ್ತಿವೆ. ಇವೆಲ್ಲವನ್ನೂ ಜಾಹೀರಾತು ಮುಕ್ತವಾಗಿ ವೀಕ್ಷಿಸಬಹುದು. ಇದರ ಜೊತೆಗೆ ಎಚ್​​ಡಿ, ಆಫ್​ಲೈನ್ ವೀಕ್ಷಣೆ ಮತ್ತಿತರ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದರ ಲಾಭವನ್ನು ವೀಕ್ಷಕರು ಪಡೆದುಕೊಳ್ಳಬಹುದು.

ಇದನ್ನೂ ಓದಿ: ಜಿಯೋ ಸಿನಿಮಾದ ಪ್ಲ್ಯಾನ್​ಗಳಲ್ಲಿ ಯಾವುದು ಬೆಸ್ಟ್? ಏನೆಲ್ಲ ಆಫರ್​ಗಳಿವೆ?

ಇತ್ತೀಚೆಗೆ ತಿಂಗಳಿಗೆ 29 ರೂಪಾಯಿ ಹಾಗೂ 89 ರೂಪಾಯಿ ಮಾಸಿಕ ಶುಲ್ಕದ ಪ್ಲ್ಯಾನ್​ಗಳನ್ನು ಜಿಯೋ ಸಿನಿಮಾ ಘೋಷಣೆ ಮಾಡಿತ್ತು. 29 ರೂಪಾಯಿ ಅಡಿಯಲ್ಲಿ ಕ್ರಿಕೆಟ್ ಹಾಗೂ ಲೈವ್ ಟಿವಿ ಹೊರತುಪಡಿಸಿ ಉಳಿದೆಲ್ಲವನ್ನೂ ಜಾಹೀರಾತಿನ ಕಿರಿಕಿರಿ ಇಲ್ಲದೆ ವೀಕ್ಷಿಸಬಹುದು. 29 ರೂಪಾಯಿ ಪ್ಲ್ಯಾನ್​ ಅಡಿಯಲ್ಲಿ ಕೇವಲ ಒಂದು ಡಿವೈಸ್​ಗೆ ಮಾತ್ರ ಕನೆಕ್ಟ್ ಮಾಡಬಹುದು. 89 ರೂಪಾಯಿ ಪ್ಲ್ಯಾನ್​ನಲ್ಲಿ ನೀವು ನಾಲ್ಕು ಡಿವೈಸ್​ನಲ್ಲಿ ಏಕಕಾಲಕ್ಕೆ ಜಿಯೋ ಸಿನಿಮಾ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.