Mia Khalifa: ಮಿಯಾ ಖಲೀಫಾಗೆ ಪಾಕ್​ ಶಾಕ್​; ಮಾಜಿ ನೀಲಿ ತಾರೆ ಉತ್ತರ ಸಖತ್​ ಖಡಕ್​

ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ ಪೋಸ್ಟ್​ಗಳನ್ನು ಮಿಯಾ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನ ಈ ಮೊದಲು ಅವರ ಟಿಕ್​ ಟಾಕ್​ ಖಾತೆಯನ್ನು ಬ್ಯಾನ್​ ಮಾಡಿತ್ತು. ಏಪ್ರಿಲ್​ ತಿಂಗಳಲ್ಲಿ ಈ ನಿಷೇಧವನ್ನು ಹಿಂಪಡೆಯಲಾಗಿತ್ತು.

Mia Khalifa: ಮಿಯಾ ಖಲೀಫಾಗೆ ಪಾಕ್​ ಶಾಕ್​; ಮಾಜಿ ನೀಲಿ ತಾರೆ ಉತ್ತರ ಸಖತ್​ ಖಡಕ್​
ಮಿಯಾ ಖಲೀಫಾ

Updated on: May 27, 2021 | 8:25 PM

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಟಿಕ್​ ಟಾಕ್​ನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಹಾಕುವ ಪೋಸ್ಟ್​​​ಗಳನ್ನು ನೋಡೋಕೆ ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ. ಈಗ ಪಾಕಿಸ್ತಾನ ಅವರಿಗೆ ಟಿಕ್ ಟಾಕ್​​ ಖಾತೆಯನ್ನು ಬ್ಯಾನ್​ ಮಾಡುವ ಮೂಲಕ ಶಾಕ್​ ನೀಡಿದೆ. ಹಾಗಂತ ಮಿಯಾ ಕೈಕಟ್ಟಿ ಕೂತಿಲ್ಲ. ಅವರು ಖಡಕ್​ ಆಗಿಯೇ ಇದಕ್ಕೆ ಉತ್ತರಿಸಿದ್ದಾರೆ.

ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ ಪೋಸ್ಟ್​ಗಳನ್ನು ಮಿಯಾ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನ ಈ ಮೊದಲು ಅವರ ಟಿಕ್​ ಟಾಕ್​ ಖಾತೆಯನ್ನು ಬ್ಯಾನ್​ ಮಾಡಿತ್ತು. ಏಪ್ರಿಲ್​ ತಿಂಗಳಲ್ಲಿ ಈ ನಿಷೇಧವನ್ನು ಹಿಂಪಡೆಯಲಾಗಿತ್ತು. ಆದರೆ, ಮಿಯಾ ಮೊದಲಿನ ರೀತಿಯಲ್ಲೇ ಪೋಸ್ಟ್​ಗಳನ್ನು ಮಾಡಲು ಆರಂಭಿಸಿದ್ದಾರೆ. ಹೀಗಾಗಿ, ಮತ್ತೆ ಅವರ ಟಿಕ್​ ಟಾಕ್​ ಖಾತೆ ಬ್ಯಾನ್​ ಆಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮಿಯಾ, ಟಿಕ್​ಟಾಕ್​ ಖಾತೆ ಬ್ಯಾನ್​ ಮಾಡಿದ ಪಾಕಿಸ್ತಾನಕ್ಕೆ ನನ್ನ ಶೌಟೌಟ್​. ಫ್ಯಾಸಿಸಂನಿಂದ ದೂರ ಉಳಿಯ ಬಯಸುವ ಪಾಕಿಸ್ತಾನಿ ಫ್ಯಾನ್ಸ್​ಗಾಗಿ ನಾನು ನನ್ನ ಟಿಕ್​ಟಾಕ್​ ವಿಡಿಯೋಗಳನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ. ಮಿಯಾ ಟಿಕ್​ಟಾಕ್​ನಲ್ಲಿ 2.2 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಅಲ್ಲದೆ, 27 ಕೋಟಿ ಲೈಕ್ಸ್​ ಇದೆ.

ಮಿಯಾ ಐದು ವರ್ಷ ಪೋರ್ನ್ ಇಂಡಸ್ಟ್ರಿಯಲ್ಲಿ ಮಿಯಾ ಕೆಲಸ ಮಾಡಿದ್ದರು.  ನೀಲಿ ಚಿತ್ರಗಳಲ್ಲಿ ನಟನೆ ನಿಲ್ಲಿಸಿದ್ದ ಮಿಯಾ ಇತ್ತೀಚೆಗೆ ಹೋರಾಟಗಳಲ್ಲಿ ಸಕ್ರಿಯವಾಗಿದ್ದಾರೆ. ಮಿಯಾ ಖಲೀಫಾ ಫೆಬ್ರವರಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಭಾರತದ ರೈತರು ನಡೆಸುತ್ತಿದ್ದ ಪ್ರತಿಭಟನೆ ಬೆಂಬಲಿಸಿ ಸುದ್ದಿಯಾಗಿದ್ದರು.

ಇದನ್ನೂ ಓದಿ: Fact Check | ಮಿಯಾ ಖಲೀಫಾ ಪೋಸ್ಟರ್​ಗೆ ಕೇಕ್ ತಿನಿಸಿದ ಕಾಂಗ್ರೆಸ್ ಕಾರ್ಯಕರ್ತರು: ಫೋಟೊಶಾಪ್ ಚಿತ್ರ ವೈರಲ್

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us