Pathan Controversy: ಅವರಿಗೆ ಮಹಿಳೆಯರು ಬಿಕಿನಿ ಹಾಕಿದ್ರೂ ಸಮಸ್ಯೆ, ಹಿಜಾಬ್ ಧರಿಸಿದ್ರೂ ಸಮಸ್ಯೆ: ನುಸ್ರತ್ ಜಹಾನ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 17, 2022 | 12:30 PM

ಮಹಿಳೆಯರು ಹಿಜಾಬ್ ಧರಿಸಿದರು ಸಮಸ್ಯೆ ಇದೆ. ಮಹಿಳೆಯರು ಬಿಕಿನಿ ಧರಿಸಿದರು ಅವರಿಗೆ ಸಮಸ್ಯೆಯಿದೆ. ಭಾರತದ ಹೊಸ ಯುಗದ ಮಹಿಳೆಯರಿಗೆ ಏನು ಧರಿಸಬೇಕೆಂದು ಅವರೇ ಹೇಳುತ್ತಿದ್ದಾರೆ ಎಂದು ನುಸ್ರತ್ ಜಹಾನ್ ಹೇಳಿದರು.

Pathan Controversy: ಅವರಿಗೆ ಮಹಿಳೆಯರು ಬಿಕಿನಿ ಹಾಕಿದ್ರೂ ಸಮಸ್ಯೆ, ಹಿಜಾಬ್ ಧರಿಸಿದ್ರೂ ಸಮಸ್ಯೆ: ನುಸ್ರತ್ ಜಹಾನ್
ಸಾಂದರ್ಭಿಕ ಚಿತ್ರ
Follow us on

ದೀಪಿಕಾ ಪಡುಕೋಣೆ (Deepika Padukone) ಮತ್ತು ಶಾರುಖ್ ಖಾನ್(Shah Rukh Khan) ಅಭಿನಯದ ‘ಪಠಾನ್’ (Pathan) ಸಿನಿಮಾ ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ಸಿನಿಮಾದ ಒಂದು ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿಯನ್ನು ಹಾಕಿಕೊಂಡು ದೀಪಿಕಾ ಪಡುಕೋಣೆ ಡ್ಯಾನ್ಸ್ ಮಾಡಿದರೆ ಎಂಬ ವಿವಾದ ಧರ್ಮದ ವಿಚಾರವಾಗಿ ಸದ್ದು ಮಾಡುತ್ತಿದೆ. ಇದಕ್ಕೆ  ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ (Nusrat Jahan) ಇದೊಂದು ವ್ಯವಸ್ಥಿತ ಷಡ್ಯಂತರ, ಜನರಲ್ಲಿ ಧಾರ್ಮಿಕವಾದ ದ್ವೇಷವನ್ನು ಬಿತ್ತುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇದು ಯಾರ ಸಿದ್ಧಾಂತದ ಬಗ್ಗೆ ಅಲ್ಲ. ಇದು ಅಧಿಕಾರದಲ್ಲಿರುವ ಒಂದು ಪಕ್ಷದ ಜನರ ಗುಂಪಿನವರು ಮಾಡುತ್ತಿರುವ ಯೋಜಿತ ಪಿತ್ತೂರಿ. ಇಲ್ಲಿ ಅವರು ಏನು ಮಾಡಲು ಹೋರಟಿದ್ದಾರೆ, ಈ ವಿಚಾರದಲ್ಲಿ ಆಧ್ಯಾತ್ಮಿಕ, ಧಾರ್ಮಿಕವಾದ ವಿಚಾರಗಳನ್ನು ತರುತ್ತಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರದ ಬೆಂಬಲ ಇದೆ. ಇದರ ಜೊತೆಗೆ ಇವರು ಸಂಸ್ಕೃತಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಇಲ್ಲಿ ಮಹಿಳೆಯರು ಬಿಕಿನಿ ಧರಿಸಿದರು ಸಮಸ್ಯೆ, ಹಿಜಾಬ್ ಧರಿಸಿದರು ಸಮಸ್ಯೆ, ಅವರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ ಎಂದು ಹೇಳಿದ್ದಾರೆ.

ಮಹಿಳೆಯರು ಹಿಜಾಬ್ ಧರಿಸಿದರು ಸಮಸ್ಯೆ ಇದೆ. ಮಹಿಳೆಯರು ಬಿಕಿನಿ ಧರಿಸಿದರು ಅವರಿಗೆ ಸಮಸ್ಯೆಯಿದೆ. ಭಾರತದ ಹೊಸ ಯುಗದ ಮಹಿಳೆಯರಿಗೆ ಏನು ಧರಿಸಬೇಕೆಂದು ಅವರೇ ಹೇಳುತ್ತಿದ್ದಾರೆ ಎಂದು ನುಸ್ರತ್ ಜಹಾನ್ ಹೇಳಿದರು. ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳುವ ಮೂಲಕ ಅವರು ಮಹಿಳೆಯರ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ಹೊಸ, ವಿಕಸನಗೊಂಡ ಭಾರತ ಎಂದು ಕರೆಯುತ್ತಾರೆ. ಆದರೆ ಇದು ತುಂಬಾ ಭಯಾನಕವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ವರ್ತನೆ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ತೃಣಮೂಲ ಸಂಸದೆ ತಿಳಿಸಿದರು.

ಇದನ್ನು ಓದಿ:ಕೇಸರಿ ಬಿಕಿನಿ ವಿವಾದ: ದೀಪಿಕಾ ಪಡುಕೋಣೆ ಸ್ಥಾನದಲ್ಲಿ ಬಿಂದು ಗೌಡ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ ಕಿಡಿಗೇಡಿಗಳು

ಪಠಾನ್ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಟೀಕೆಗಳು ಬಗ್ಗೆ ಶಾರುಖ್ ಖಾನ್ ಜನರಿಗೆ ಎಚ್ಚರಿಕೆ ನೀಡಿದ ನಂತರ ಜಹಾನ್ ಅವರ ಈ ಪ್ರತಿಕ್ರಿಯೆ ನೀಡದ್ದಾರೆ. ‘ಪಠಾಣ್’ ಸಿನಿಮಾವನ್ನು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಟೀಕಿಸಿದ್ದಾರೆ.  ಇದರ ಜೊತೆಗೆ ಈ ಸಿನಿಮಾದ ಒಂದು ಹಾಡು ಕಲುಷಿತ ಮನಸ್ಥಿತಿ ತೋರಿಸಿದೆ ಮತ್ತು ರಾಜ್ಯದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

‘ಪಠಾಣ್’ ಸಿನಿಮಾದ ಬರುವ ಒಂದು ಹಾಡಿನಲ್ಲಿ ದೀಪಿಕಾ ಪಡುಕೋಣೆ ಕಿತ್ತಳೆ ಬಣ್ಣದ ಉಡುಪನ್ನು ಧರಿಸಿದ್ದಾರೆ. ಇದೀಗ ಈ ವಿಚಾರವಾಗಿ ಹಿಂದೂ ಧರ್ಮದ ಸಂಘಟನೆಗಳು ಇದು ಹಿಂದೂ ಧರ್ಮದ ಪವಿತ್ರವಾದ ಕೇಸರಿ ಬಣ್ಣ, ಈ ಬಣ್ಣದ ಬಿಕಿನಿ ಹಾಕಿಕೊಂಡು ಡ್ಯಾನ್ಸ್ ಮಾಡಿರುವುದು ತಪ್ಪು ಎಂದು ಹೇಳಲಾಗುತ್ತಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:30 pm, Sat, 17 December 22