ಹಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಕಲಾವಿದ ಪೌಲ್ ರಿಟರ್ ಅವರು ಸೋಮವಾರ (ಏ.5) ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ಬಹಳ ಕಾಲದಿಂದ ಅವರು ಬ್ರೇನ್ ಟ್ಯೂಮರ್ನಿಂದ ಬಳಲುತ್ತಿದ್ದರು. ಕಡೆಗೂ ಚಿಕಿತ್ಸೆ ಫಲಕಾರಿಯಾಗದೇ ಏ.5ರ ರಾತ್ರಿ ನಿಧನರಾದರು ಎಂದು ಪೌಲ್ ರಿಟರ್ ಪರ ವಕ್ತಾರರು ತಿಳಿಸಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
1992ರಿಂದ ಸಿನಿಮಾದಲ್ಲಿ ನಟನೆ ಆರಂಭಿಸಿದ ಪೌಲ್ ರಿಟರ್ ಅವರು ಅನೇಕ ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಹಾಲಿವುಡ್ನ ಜನಪ್ರಿಯ ‘ಹ್ಯಾರಿ ಪಾಟರ್’ ಸಿನಿಮಾದಲ್ಲಿ ಅವರು ಗಮನಾರ್ಹ ಅಭಿನಯ ನೀಡಿದ್ದರು. ಬ್ರಿಟಿಷ್ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಫೇಮಸ್ ಆಗಿದ್ದ ಪೌಲ್ ರಿಟರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಫ್ರೈಡೇ ನೈಟ್ ಡಿನ್ನರ್, ಚೆರ್ನೋಬಿಲ್ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಹ್ಯಾರಿ ಪಾಟರ್ ಮಾತ್ರವಲ್ಲದೆ, ಜೇಮ್ಸ್ ಬಾಂಡ್ ಸರಣಿಯ ‘ಕ್ವಾಂಟಮ್ ಆಫ್ ಸೊನೇಸ್’ ಸಿನಿಮಾ ಮೂಲಕವೂ ಪೌಲ್ ರಿಟರ್ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಸಿನಿಮಾ, ಧಾರಾವಾಹಿ ಮತ್ತು ರಂಗಭೂಮಿಯಲ್ಲಿ ಹಲವು ಬಗೆಯ ಪಾತ್ರಗಳನ್ನು ನಿಭಾಯಿಸಿದ ಅವರ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
‘ಪೌಲ್ ರಿಟಿರ್ ನಿಧನರಾದರು ಎಂಬುದನ್ನು ತೀವ್ರ ವಿಷಾದದೊಂದಿಗೆ ತಿಳಿಸುತ್ತಿದ್ದೇವೆ. ಅವರು ಕೊನೆಯುಸಿರೆಳೆದ ವೇಳೆ ಮನೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳು ಜೊತೆಯಲ್ಲಿ ಇದ್ದರು. 54 ವರ್ಷದ ಪೌಲ್ ರಿಟರ್ ಅವರು ಬ್ರೇನ್ ಟ್ಯೂಮರ್ನಿಂದ ಬಳಲುತ್ತಿದ್ದರು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Pratima Devi Passed Away: ಚಂದನವನದ ಹಿರಿಯ ನಟಿ ಪ್ರತಿಮಾ ದೇವಿ ನಿಧನ
ಖ್ಯಾತ ನಿರ್ದೇಶಕ ಎಸ್.ಪಿ. ಜನನಾಥನ್ ಹೃದಯಾಘಾತದಿಂದ ನಿಧನ! ಸೆಲೆಬ್ರಿಟಿಗಳ ಸಂತಾಪ
(Paul Ritter Death: Harry Potter actor Paul Ritter dies due to Brain Tumour at 54)