Namratha Gowda: ಮದುವೆ ಆದ್ರೂ ನಾವು ಗಂಡ-ಹೆಂಡತಿ ಅಲ್ಲ ಎಂದ ನಾಗಿಣಿ ನಟ-ನಟಿ! ಏನಿದರ ಅಸಲಿ ಕಥೆ?

‘ನಾಗಿಣಿ 2’ ಧಾರಾವಾಹಿಯ ನಮೃತಾ ಗೌಡ ಮತ್ತು ನಿನಾದ್​ಗೆ ಅನೇಕರು ಸೋಶಿಯಲ್​ ಮೀಡಿಯಾ ಮೂಲಕ ಮದುವೆಯ ಶುಭಾಶಯ ತಿಳಿಸುತ್ತಿದ್ದಾರೆ. ಇದರಿಂದ ಇವರಿಬ್ಬರು ಪೇಚಿಗೆ ಸಿಲುಕುವಂತಾಗಿದೆ.

Namratha Gowda: ಮದುವೆ ಆದ್ರೂ ನಾವು ಗಂಡ-ಹೆಂಡತಿ ಅಲ್ಲ ಎಂದ ನಾಗಿಣಿ ನಟ-ನಟಿ! ಏನಿದರ ಅಸಲಿ ಕಥೆ?
ನಾಗಿಣಿ 2 ಧಾರಾವಾಹಿಯ ನಿನಾದ್​ - ನಮ್ರತಾ ಗೌಡ
Follow us
ಮದನ್​ ಕುಮಾರ್​
| Updated By: Digi Tech Desk

Updated on:Oct 12, 2021 | 12:34 PM

ಕಿರುತೆರೆ ನಟ-ನಟಿಯರ ಬಗ್ಗೆ ವೀಕ್ಷಕರು ಅಪಾರ ಅಭಿಮಾನ ಇಟ್ಟುಕೊಂಡಿರುತ್ತಾರೆ. ಸೀರಿಯಲ್​ ಕಲಾವಿದರ ಖಾಸಗಿ ಬದುಕಿನ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ಆಸಕ್ತಿ. ಸೆಲೆಬ್ರಿಟಿಗಳ ಮದುವೆ ಬಗ್ಗೆ ಜನರಿಗೆ ಎಲ್ಲಿಲ್ಲದ ಕೌತುಕ ಇದ್ದೇ ಇರುತ್ತದೆ. ಹಾಗಾಗಿ ನಟ-ನಟಿಯರ ನಡುವಿನ ಲವ್​ ಸ್ಟೋರಿ ಮತ್ತು ಮದುವೆ ಸುದ್ದಿಗಳು ಬಹುಬೇಗ ವೈರಲ್​ ಆಗುತ್ತವೆ. ಅದೇ ಕಾರಣಕ್ಕಾಗಿ ‘ನಾಗಿಣಿ 2’ ಧಾರಾವಾಹಿ ಕಲಾವಿದರಾದ ನಿನಾದ್​ ಮತ್ತು ನಮ್ರತಾ ಗೌಡ (Namratha Gowda) ಮದುವೆ ವಿಷಯ ಎಲ್ಲೆಲ್ಲೂ ಹರಡಿದೆ. ಆದರೆ ಈ ಬಗ್ಗೆ ಇವರಿಬ್ಬರು ಬೇಸರ ಮಾಡಿಕೊಂಡಿದ್ದಾರೆ.

ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರಕ್ಕೆ ನಮ್ರತಾ ಗೌಡ (Namratha Gowda) ಬಣ್ಣ ಹಚ್ಚಿದ್ದಾರೆ. ತ್ರಿಶೂಲ್​ ಪಾತ್ರದಲ್ಲಿ ನಿನಾದ್​ ಅಭಿನಯಿಸುತ್ತಿದ್ದಾರೆ. ಸೀರಿಯಲ್​ ಕಥೆಯಲ್ಲಿ ಇವರಿಬ್ಬರಿಗೂ ಮದುವೆ ನಡೆದಿದೆ. ಹಾಗಂತ ಈ ಮದುವೆ ದೃಶ್ಯಗಳನ್ನು ಯಾವುದೋ ಸ್ಟುಡಿಯೋನಲ್ಲಿ ಚಿತ್ರೀಕರಿಸಿಲ್ಲ. ನಿಜವಾದ ಮದುವೆ ಮತ್ತು ಆರತಕ್ಷತೆ ರೀತಿಯಲ್ಲಿ ಮಂಡ್ಯದ ಒಂದು ಛತ್ರದಲ್ಲಿ ಮಾಡಲಾಗಿದೆ. ಅದಕ್ಕೆ ಅಭಿಮಾನಿಗಳನ್ನೂ ಆಹ್ವಾನಿಸಿ, ಊಟ ಹಾಕಿಸಲಾಗಿದೆ. ಆದರೆ ಈ ಸೀರಿಯಲ್​ ಮದುವೆಯನ್ನೇ ನಿಜವಾದ ಮದುವೆ ಎಂದು ಅನೇಕರು ಭಾವಿಸಿದ್ದಾರೆ!

ಹೌದು, ಶಿವಾನಿ ಮತ್ತು ತ್ರಿಶೂಲ್​ ಮದುವೆಗೆ ಆಗಮಿಸಿದ ಜನರು ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ಮಾಡಿಕೊಳ್ಳುತ್ತಿದ್ದಾರೆ. ಅದನ್ನು ನೋಡಿದ ಎಲ್ಲರೂ ನಮೃತಾ (Namratha Gowda) ಮತ್ತು ನಿನಾದ್​ ನಿಜವಾಗಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದುಕೊಂಡಿದ್ದಾರೆ. ಹಾಗಾಗಿ, ಈ ನಟ-ನಟಿಗೆ ಅನೇಕರು ಸೋಶಿಯಲ್​ ಮೀಡಿಯಾ ಮೂಲಕ ಮದುವೆಯ ಶುಭಾಶಯ ಕೋರುತ್ತಿದ್ದಾರೆ. ಇದರಿಂದ ನಮೃತಾ ಮತ್ತು ನಿನಾದ್​ ಪೇಚಿಗೆ ಸಿಲುಕುವಂತಾಗಿದೆ.

ಹರಡಿರುವ ತಪ್ಪು ಮಾಹಿತಿಯನ್ನು ತೊಡೆದುಹಾಕುವ ಸಲುವಾಗಿ ಈ ಕಲಾವಿದರಿಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ‘ಇದು ಜೀ ಕನ್ನಡ ವಾಹಿನಿಯಿಂದ ನಡೆದ ಒಂದು ಪ್ರಮೋಷನಲ್​ ಇವೆಂಟ್​. ಅದರಲ್ಲಿ ನಮ್ಮ ಇಡೀ ನಾಗಿಣಿ ಸೀರಿಯಲ್​ ತಂಡ ಪಾಲ್ಗೊಂಡಿತ್ತು. ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಮತ್ತು ತ್ರಿಶೂಲ್ ಮದುವೆ ಆಯಿತು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಒಂದು ವದಂತಿ ಹರಡಿದೆ. ನಮ್ಮಿಬ್ಬರದ್ದು ನಿಜವಾಗಿ ಮದುವೆ ಆಗಿದೆ ಎಂಬ ಗಾಸಿಪ್​ ಹಬ್ಬಿದೆ. ದೇವರಾಣೆ ನಾವು ಮದುವೆ ಆಗಿಲ್ಲ’ ಎಂದು ಈ ಜೋಡಿ ಹೇಳಿದೆ.

‘ಇದು ಪಾತ್ರಗಳ ಒಂದು ರಿಸೆಪ್ಷನ್​ ಅಷ್ಟೇ. ತ್ರಿಶೂಲ್​ ಮತ್ತು ಶಿವಾನಿ ರಿಸೆಪ್ಷನ್​ ಹೊರತು, ನಿನಾದ್​-ನಮ್ರತಾ ರಿಸೆಪ್ಷನ್ ಅಲ್ಲ. ದಯವಿಟ್ಟು ವದಂತಿ ಹಬ್ಬಿಸಬೇಡಿ. ಎಲ್ಲರೂ ನಮಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಶುಭಹಾರೈಕೆಗಳನ್ನು ಸ್ವೀಕರಿಸಲು ನಮಗೆ ಸಾಧ್ಯವಾಗುತ್ತಿದೆ’ ಎಂದು ನಿನಾದ್​ ಮತ್ತು ನಮ್ರತಾ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಗೀತಾ ಧಾರಾವಾಹಿ ನಟಿ ಭವ್ಯಾ ಗೌಡಗೆ ಬೆಳ್ಳಿತೆರೆ ಆಫರ್​; ಸಿನಿಮಾ ಯಾವುದು?

Published On - 10:25 am, Wed, 7 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ