
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಗುರುವಾರ (ಜನವರಿ 29) ವಿಶಾಖಪಟ್ಟಣಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಅಲ್ಲಿನ ಇಂದಿರಾ ಗಾಂಧಿ ಪ್ರಾಣಿ ಪಾರ್ಕ್ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಪವನ್ ಕಲ್ಯಾಣ್ (Pawan Kalyan) ತಮ್ಮ ತಾಯಿ ಅಂಜನಾ ದೇವಿಯ ಹುಟ್ಟುಹಬ್ಬವನ್ನು ಆಚರಿಸಲು ಮೃಗಾಲಯದಿಂದ ಎರಡು ಜಿರಾಫೆಗಳನ್ನು ಒಂದು ವರ್ಷದವರೆಗೆ ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದರು. ಎರಡು ಜಿರಾಫೆಗಳ ವೆಚ್ಚವನ್ನು ಒಂದು ವರ್ಷದವರೆಗೆ ಭರಿಸುವುದಾಗಿ ಅವರು ಬಹಿರಂಗಪಡಿಸಿದರು.
ಪವನ್ ಕಲ್ಯಾಣ್ಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಇದೆ. ಹೀಗಾಗಿ, ಪ್ರಾಣಿ ರಕ್ಷಣೆಗಾಗಿ ಮುಂದೆ ಬರುವಂತೆ ಕಾರ್ಪೊರೇಟ್‌ಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ, ಪವನ್ ಮೃಗಾಲಯ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಿಸಲಾದ ಕರಡಿ ಆವರಣವನ್ನು ಉದ್ಘಾಟಿಸಿದರು.
ಇದನ್ನೂ ಓದಿ: ಕಾರು ಉಡುಗೊರೆಯಾಗಿ ಕೊಟ್ಟ ನಟ ಪವನ್ ಕಲ್ಯಾಣ್: ಯಾರಿಗೆ? ಏಕೆ?
ಮೃಗಾಲಯದಲ್ಲಿ ನೀರಾನೆ , ಕೃಷ್ಣಮೃಗಗಳು, ಹುಲಿಗಳು ಮತ್ತು ಸಿಂಹಗಳನ್ನು ಇಡಲಾದ ಪ್ರದೇಶಗಳಿ ಭೇಟಿ ನೀಡಿದರು. ಅವುಗಳಿಗೆ ಒದಗಿಸಲಾದ ಆಹಾರ, ಅವುಗಳ ಹೆಸರುಗಳು ಮತ್ತು ಇತರ ವಿವರಗಳ ಬಗ್ಗೆ ಮೃಗಾಲಯದ ಕ್ಯುರೇಟರ್ ಅವರ ಬಳಿ ವಿಚಾರಿಸಿದ್ದಾರೆ. ಅವರು ಆನೆಗಳು ಮತ್ತು ಜಿರಾಫೆಗಳ ಆವರಣಗಳನ್ನು ಪರಿಶೀಲಿಸಿದರು ಮತ್ತು ಅವುಗಳಿಗೆ ಸ್ವತಃ ಆಹಾರವನ್ನು ನೀಡಿದರು.
రాష్ట్ర ఉప ముఖ్యమంత్రి, అటవీ పర్యావరణ శాఖల మంత్రి @PawanKalyan విశాఖపట్నం పర్యటనలో భాగంగా ఇందిరా గాంధీ జంతు ప్రదర్శనశాలను పరిశీలించారు.
•తల్లి శ్రీమతి అంజనా దేవి గారి జన్మదినోత్సవం సందర్భంగా జూ పార్క్ లోని రెండు జిరాఫీలను ఏడాదిపాటు దత్తత తీసుకుంటున్నట్టు ప్రకటించిన ఉప… pic.twitter.com/jAeWxrJz2A
— Deputy CMO, Andhra Pradesh (@APDeputyCMO) January 29, 2026
f
ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, ‘ನಮ್ಮ ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮೃಗಾಲಯಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅವು ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುತ್ತವೆ. ಸುಮಾರು 650 ಎಕರೆ ಪ್ರದೇಶದಲ್ಲಿ ಹರಡಿರುವ ವಿಶಾಖಪಟ್ಟಣ ಮೃಗಾಲಯದಲ್ಲಿ ನೂರಾರು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಆಹ್ಲಾದಕರ ವಾತಾವರಣದಲ್ಲಿ ವಾಸಿಸುತ್ತವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೃಗಾಲಯಗಳ ಅಭಿವೃದ್ಧಿಯಲ್ಲಿ ಕಾರ್ಪೊರೇಟ್‌ಗಳು ಪಾಲುದಾರರಾಗಿರಬೇಕು. ಅವರು ತಮ್ಮ ಇಷ್ಟ ಪ್ರಾಣಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ದತ್ತು ಪಡೆಯಬೇಕು ನಮ್ಮ ಇಡೀ ಕುಟುಂಬವು ಪ್ರಾಣಿ ಪ್ರಿಯರು. ನಾವು ಪ್ರಾಣಿ ಕಲ್ಯಾಣಕ್ಕೆ ಹೆಚ್ಚಿನ ಗಮನ ನೀಡುತ್ತೇವೆ’ ಎಂದು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.