AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪವನ್​ ಕಲ್ಯಾಣ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಫೇಕ್​’

ಪವನ್​ ಕಲ್ಯಾಣ್​ ಅವರ ಜತೆ ಇದ್ದ ಸಿಬ್ಬಂದಿಗೆ ಕೊವಿಡ್​ ಪಾಸಿಟಿವ್​ ವರದಿ ಬಂದಿತ್ತು. ನಂತರ ಪರೀಕ್ಷೆ ಮಾಡಿದಾಗ ಪವನ್​ ಕಲ್ಯಾಣ್​ಗೂ ಕೊರೊನಾ ಪಾಸಿಟಿವ್​ ಬಂದು ಆಸ್ಪತ್ರೆಗೆ ಶಿಫ್ಟ್​ ಆಗಿದ್ದರು.

'ಪವನ್​ ಕಲ್ಯಾಣ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಫೇಕ್​'
ಪವನ್​ ಕಲ್ಯಾಣ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ರಾಜೇಶ್ ದುಗ್ಗುಮನೆ
|

Updated on:Apr 17, 2021 | 8:21 PM

Share

‘ಪವನ್​ ಕಲ್ಯಾಣ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಫೇಕ್​’- ಹೀಗೆಂದು ನಾವು ಹೇಳುತ್ತಿಲ್ಲ. ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಹೀಗೊಂದು ಆರೋಪ ಮಾಡಿದ್ದಾರೆ. ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ಟಾಲಿವುಡ್​ ನಟ ಪವನ್​ ಕಲ್ಯಾಣ್​ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವಿಚಾರದ ಬಗ್ಗೆ ನಿರ್ದೇಶಕ ರಾಮ್​ ಗೋಪಾಲ್​ ಸರಣಿ ಟ್ವೀಟ್​ ಮಾಡಿದ್ದಾರೆ. ಪವನ್​ ಕಲ್ಯಾಣ್​ ಅವರ ಜತೆ ಇದ್ದ ಸಿಬ್ಬಂದಿಗೆ ಕೊವಿಡ್​ ಪಾಸಿಟಿವ್​ ವರದಿ ಬಂದಿತ್ತು. ನಂತರ ಪರೀಕ್ಷೆ ಮಾಡಿದಾಗ ಪವನ್​ ಕಲ್ಯಾಣ್​ಗೂ ಕೊರೊನಾ ಪಾಸಿಟಿವ್​ ಬಂದು ಆಸ್ಪತ್ರೆಗೆ ಶಿಫ್ಟ್​ ಆಗಿದ್ದರು. ಅವರು ಆಸ್ಪತ್ರೆಯಲ್ಲಿರುವ ಫೋಟೋ ಒಂದು ಸಾಮಾಜಿಕ ಜಾಲಯಾಣದಲ್ಲಿ ವೈರಲ್​ ಆಗಿತ್ತು. ಈ ಬಗ್ಗೆ ರಾಮ್​ ಗೋಪಾಲ್​ ಟ್ವೀಟ್​ ಮಾಡಿದ್ದಾರೆ.

ಬರಿಗಣ್ಣಿನಿಂದ ಕೂಡ ನೋಡಲಾಗದ ಒಂದು ಸಣ್ಣ ವೈರಸ್ ಪವನ್ ಕಲ್ಯಾಣ್ ಅವರನ್ನು ಇಂತಹ ಅಸಹಾಯಕ ಪರಿಸ್ಥಿತಿಗೆ ತಳ್ಳಿ ಹಾಕಿದೆ. ಇದರಲ್ಲಿ ಹೀರೋ ಎನ್ನುವ ಶಬ್ದ ಎಲ್ಲಾದರೂ ಇದೆಯಾ ಎಂದು ಕೇಳಿದ್ದಾರೆ. ಈ ಟ್ವೀಟ್​ ನೋಡಿದ ಬೆನ್ನಲ್ಲೇ ಪವನ್​ ಕಲ್ಯಾಣ್​ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಆದರೆ, ಈ ಬಗ್ಗೆ ರಾಮ್​ ಗೋಪಾಲ್​ ವರ್ಮಾ ತಲೆಕೆಡಿಸಿಕೊಂಡಿಲ್ಲ.

ಮತ್ತೊಂದು ಟ್ವೀಟ್​ ಮಾಡಿರುವ ಆರ್​ಜಿವಿ, ಪವನ್​ಗೆ ಬಂದಿರೋದು ಕೊವಿಡ್​ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ವಕೀಲ್​ ಸಾಬ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಗಳಿಕೆ ಮಾಡಿಲ್ಲ. ಇದಕ್ಕಾಗಿ ಪವನ್​ ಕಲ್ಯಾಣ ಈ ಸ್ಥಿತಿ ತಲುಪಿದ್ದಾರೆ. ಅಭಿಮಾನಿಗಳೇ ಬನ್ನಿ. ನಿಮ್ಮ ಲೈಫ್​ ರಿಸ್ಕ್​ ಮಾಡಿಕೊಂಡು ಸಿನಿಮಾ ವೀಕ್ಷಿಸಿ. ಪವನ್​ ಜೇಬನ್ನು ತುಂಬಿಸಿ ಎಂದಿದ್ದಾರೆ. ಮುಂದುವರಿದು ಪವನ್​ ಟ್ರೀಟ್​ಮೆಂಟ್​ ಪಡೆಯುತ್ತಿರುವುದು ನಕಲಿ ಫೋಟೋ ಎಂದು ಜರಿದಿದ್ದಾರೆ.

ಇದನ್ನೂ ಓದಿ: Coronavirus News Live Updates: ಕೊರೊನಾ ಚಿಕಿತ್ಸೆಗೆ ಬಳಸುವ ರೆಮ್​ಡೆಸಿವಿರ್ ಔಷಧಿಯ ದರ ಕಡಿತ

Published On - 8:19 pm, Sat, 17 April 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More