ಕೊರೊನಾ ಇಲ್ಲ ಅನ್ನೋವ್ರಿಗೆ ಕಪಾಳಕ್ಕೆ ಹೊಡೆಯಿರಿ; ಅಕ್ಕನ ಕಳೆದುಕೊಂಡು ಕಣ್ಣೀರಿಟ್ಟ ನಟಿ ಸುನೇತ್ರಾ ಪಂಡಿತ್

ಸುನೇತ್ರಾ ಪಂಡಿತ್ ಅಕ್ಕ ಇಂದು (ಏ.17) ಕೊರೊನಾ ವೈರಸ್​ಗೆ ಬಲಿಯಾಗಿದ್ದಾರೆ. ಈ ದುಃಖದ ನಡುವೆಯೂ ಸುನೇತ್ರಾ ಪಂಡಿತ್ ಹಾಗೂ ಅವರ ಪತಿ ರಮೇಶ್ ಪಂಡಿತ್ ಮಾಧ್ಯಮದ ಎದುರು ಬಂದು ಮಾತನಾಡಿದ್ದಾರೆ.

ಕೊರೊನಾ ಇಲ್ಲ ಅನ್ನೋವ್ರಿಗೆ ಕಪಾಳಕ್ಕೆ ಹೊಡೆಯಿರಿ; ಅಕ್ಕನ ಕಳೆದುಕೊಂಡು ಕಣ್ಣೀರಿಟ್ಟ ನಟಿ ಸುನೇತ್ರಾ ಪಂಡಿತ್
ಸುನೇತ್ರ ಪಂಡಿತ್​


ಕೊರೊನಾ ವೈರಸ್​ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಹಬ್ಬುತ್ತಿದೆ. ಸಾಕಷ್ಟು ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಆದರೆ, ಕೆಲವರು ಇದನ್ನು ನಂಬಲು ಸಿದ್ಧರಿಲ್ಲ. ಕೊರೊನಾ ಎನ್ನುವುದೇ ಸುಳ್ಳು ಎನ್ನುವ ಮನಸ್ಥಿತಿ ಹೊಂದಿದ ಅನೇಕ ಮಂದಿ ಇದ್ದಾರೆ. ಕೊರೊನಾ ಇಲ್ಲ ಎಂದು ಹೇಳುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ನಟಿ ಸುನೇತ್ರಾ ಪಂಡಿತ್​ ಹೇಳಿದ್ದಾರೆ.

ಸುನೇತ್ರಾ ಪಂಡಿತ್ ಅವರ ಅಕ್ಕ ಇಂದು (ಏ.17) ಕೊರೊನಾ ವೈರಸ್​ಗೆ ಬಲಿಯಾಗಿದ್ದಾರೆ. ಈ ದುಃಖದ ನಡುವೆಯೂ ಸುನೇತ್ರಾ ಪಂಡಿತ್ ಹಾಗೂ ಅವರ ಪತಿ ರಮೇಶ್ ಪಂಡಿತ್ ಮಾಧ್ಯಮದ ಎದುರು ಬಂದು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಸಾರ್ವಜನಿಕರನ್ನು ಎಚ್ಚರಿಸುವ ಕೆಲಸ ಕೂಡ ಮಾಡಿದ್ದಾರೆ.

ಕೋವಿಡ್​ನಿಂದ ನಮ್ಮ ಅಕ್ಕ ತೀರಿಕೊಂಡಳು. ಬಿಬಿಎಂಪಿ ಬೆಡ್ ಅಲಾಟ್​ ಮಾಡುವಾಗ ಐಸಿಯು ಇರೋ ಆಸ್ಪತ್ರೆಗೆ ಅಲಾಟ್​ ಮಾಡಿಲ್ಲ. ಎಲ್ಲರಿಗೂ ಒತ್ತಡ ಇದೆ ಎಂಬುದು ನಮಗೆ ಗೊತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ಕೊರೊನಾ ಇಲ್ಲವೇ ಇಲ್ಲ ಎನ್ನುವ ಬಗ್ಗೆ ಸಿಟ್ಟಾಗಿರುವ ಸುನೇತ್ರಾ, ಕೊರೊನಾ ಇಲ್ಲಾ ಅಂದೋರಿಗೆ ಕಪಾಳಕ್ಕೆ ಬಾರಿಸಬೇಕು. ಅದರ ನೋವು ಅನುಭವಿಸ್ತಿರೋರಿಗೆ ಇದರ ಬಗ್ಗೆ ಗೊತ್ತು. ಮಾಧ್ಯಮಗಳಲ್ಲಿ ತೋರಿಸೋದು ಸುಳ್ಳಲ್ಲ. ಇಲ್ಲದಿರೋದನ್ನು ತೋರಿಸಿದರೆ ಮಾಧ್ಯಮದವರಿಗೆ ಏನಾದರೂ ಕೊಂಬು ಬರುತ್ತಾ? ಯಾರಾದರೂ ಹೋಗಿ ಸನ್ಮಾನ ಮಾಡ್ತಾರಾ? ಅದು ಅನುಭವಿಸಿದವರಿಗೆ ಗೊತ್ತು. ದಯವಿಟ್ಟು ಜನರು ಎಚ್ಚರಿಕೆಯಿಂದಿರಿ ಎಂದು ಕೈ ಮುಗಿದು ಮನವಿ ಮಾಡಿಕೊಂಡರು.

ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿ ಮೂಲಕ ಸುನೇತ್ರಾ ಗುರುತಿಸಿಕೊಂಡಿದ್ದಾರೆ. ನಂತರ ಅವರು ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Nikhil Kumaraswamy: ನಿಖಿಲ್​ ಕುಮಾರಸ್ವಾಮಿಗೆ ಕೊರೊನಾ ಸೋಂಕು ದೃಢ

Sonu Sood Corona Positive: ಸೋನು ಸೂದ್​ಗೆ ಕೊರೊನಾ ಪಾಸಿಟಿವ್​; ಬಡವರ ಪಾಲಿನ ರಿಯಲ್​ ಹೀರೋಗೆ ಈಗ ಕಷ್ಟಕಾಲ

Click on your DTH Provider to Add TV9 Kannada