ನೆಚ್ಚಿನ ನಟರ ಹೆಸರಿಸಿದ ಪವನ್ ಕಲ್ಯಾಣ್: ತಮ್ಮ ಫ್ಯಾನ್ಸ್ ಕ್ಲಬ್ ಸ್ಥಾಪಿಸಲು ಬೆಂಬಲಿಸಲಿಲ್ಲ ಏಕೆ?

Pawan Kalyan: ತಮಗೆ ಇಷ್ಟವಾದ ತೆಲುಗು ನಟರನ್ನು ಹೆಸರಿಸಿರುವ ಪವನ್ ಕಲ್ಯಾಣ್, ತಮ್ಮ ಹೆಸರಿನ ಫ್ಯಾನ್ಸ್ ಕ್ಲಬ್ ಸ್ಥಾಪಿಸಲು ಅವಕಾಶ ಏಕೆ ನೀಡಲಿಲ್ಲ ಎಂಬ ಬಗ್ಗೆಯೂ ಮಾತನಾಡಿದ್ದಾರೆ.

ನೆಚ್ಚಿನ ನಟರ ಹೆಸರಿಸಿದ ಪವನ್ ಕಲ್ಯಾಣ್: ತಮ್ಮ ಫ್ಯಾನ್ಸ್ ಕ್ಲಬ್ ಸ್ಥಾಪಿಸಲು ಬೆಂಬಲಿಸಲಿಲ್ಲ ಏಕೆ?
ಪವನ್ ಕಲ್ಯಾಣ್
Follow us
ಮಂಜುನಾಥ ಸಿ.
|

Updated on: Jun 17, 2023 | 6:37 PM

ಪವನ್ ಕಲ್ಯಾಣ್ (Pawan Kalyan) ಟಾಲಿವುಡ್​ನ (Tollywood) ಸ್ಟಾರ್ ನಟ ಮಾತ್ರವಲ್ಲ, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ (Remuneration) ಪಡೆವ ನಟರಲ್ಲಿ ಒಬ್ಬರು. ನಟನೆ ಜೊತೆಗೆ ರಾಜಕೀಯದಲ್ಲಿಯೂ ಸಕ್ರಿಯರಾಗಿರುವ ಪವನ್ ಕಲ್ಯಾಣ್, ಆಂಧ್ರ ಪ್ರದೇಶ ಚುನಾವಣೆಗೆ ತಮ್ಮ ಪಕ್ಷವನ್ನು ಅಣಿಮಾಡಲು ಆಂಧ್ರ ಪ್ರದೇಶದಲ್ಲಿ ಯಾತ್ರೆ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೆ ಭೀಮವರಂನಲ್ಲಿ ವಾರಾಹಿ ಯಾತ್ರೆಯನ್ನು ಪವನ್ ಕಲ್ಯಾಣ್ ಪ್ರಾರಂಭಿಸಿದ್ದು, ಆಡಳಿತಾರೂಢ ವೈಸಿಪಿ ಪಕ್ಷ ಹಾಗೂ ಸಿಎಂ ಜಗನ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಪವನ್ ಯಾತ್ರೆಗೆ ಜನ ಬೆಂಬಲ ವ್ಯಕ್ತವಾಗಿದೆಯಾದರೂ ತೆಲುಗು ಚಿತ್ರರಂಗದ ಸ್ಟಾರ್ ವಾರ್ ಪವನ್​ಗೆ ತುಸು ಹಿನ್ನಡೆ ಮಾಡುತ್ತಿದೆ. ಇತರೆ ಸ್ಟಾರ್ ನಟರ ಅಭಿಮಾನಿಗಳನ್ನು ತಮ್ಮತ್ತ ಸೆಳೆಯುವ ಯತ್ನವನ್ನು ಪವನ್ ಕಲ್ಯಾಣ್ ಮಾಡುತ್ತಿದ್ದಾರೆ.

ವಾರಾಹಿ ಯಾತ್ರೆ ಕಾಕಿನಾಡ ತಲುಪಿದ ಸಮಯದಲ್ಲಿ ತಮ್ಮ ವಿಶೇಷ ವಾಹನದ ಮೇಲೆ ನಿಂತು ಮಾತನಾಡಿದ ಪವನ್ ಕಲ್ಯಾಣ್, ”ಸಿನಿಮಾ ಬೇರೆ ರಾಜಕೀಯ ಬೇರೆ. ನಾನು ಈವರೆಗೆ ನನ್ನ ಫ್ಯಾನ್ಸ್ ಕ್ಲಬ್ ಮಾಡಲು ಅವಕಾಶ ಕೊಟ್ಟಿಲ್ಲ. ಫ್ಯಾನ್ಸ್ ಕ್ಲಬ್ ಪೋಸ್ಟರ್​ಗಳು ಹಾಕಿಸಿಕೊಂಡಿಲ್ಲ, ಜಾಹೀರಾತು ಮಾಡಿಕೊಂಡಿಲ್ಲ. ನಾನು ನನ್ನ ಸಹಕಲಾವಿದರಾಗಿ ದನಿ ಎತ್ತಿದ್ದೇನೆ ನಿನಃ ಬೇರೆ ಕಾರ್ಯಗಳಿಗೆ ರಾಯಭಾರಿ ಆಗಿಲ್ಲ. ನಾನು ಜನರನ್ನು ಗುಂಪು ಸೇರಿಸಿದರೆ ಅದರಿಂದ ಸಮಾಜಕ್ಕೆ ಉಪಯೋಗವಾಗಬೇಕು, ಸಿನಿಮಾಕ್ಕೆ ಅಲ್ಲ ಎಂಬ ಕಾರಣದಿಂದ ನಾನು ನನ್ನ ಫ್ಯಾನ್ಸ್ ಕ್ಲಬ್ ಸ್ಥಾಪಿಸಲು ನಾನು ಇಲ್ಲಿವರೆಗೆ ಅವಕಾಶ ಕೊಟ್ಟಿರಲಿಲ್ಲ” ಎಂದಿದ್ದಾರೆ ಪವನ್.

ನಾನು ಎಲ್ಲ ನಟರ ಸಿನಿಮಾ ನೋಡುತ್ತೇನೆ. ನನಗೆ ಅದು ಬಹಳ ಖುಷಿ ಕೊಡುತ್ತದೆ. ಬೇರೆ ನಟರ ಸಿನಿಮಾಗಳನ್ನು ನಾನು ಎಂಜಾಯ್ ಮಾಡುತ್ತೇನೆ. ನನಗೆ ಯಾರೂ ಭಿನ್ನರಲ್ಲ. ನನಗೆ ರಾಮ್ ಚರಣ್ ಇಷ್ಟ, ಜೂ ಎನ್​ಟಿಆರ್ ಇಷ್ಟ, ಪ್ರಭಾಸ್ ಇಷ್ಟ. ನನಗೆ ಚಿರಂಜೀವಿ ಇಷ್ಟ ಅವರೆಲ್ಲರ ಸಿನಿಮಾ ನಾನು ನೋಡುತ್ತೇನೆ. ನೀವೂ ನೋಡಿ, ಬೇರೆ ಬೇರೆ ನಟರನ್ನು ಅಭಿಮಾನಿಸಿ ಆದರೆ ರಾಜ್ಯದ ವಿಷಯ ಬಂದಾಗ ಒಕ್ಕೂರಲ ದನಿಯಿಂದ ರಾಜ್ಯದ ಪ್ರಗತಿಯ ಬಗ್ಗೆ ಮಾತ್ರವೇ ಆಲೋಚನೆ ಮಾಡಿ” ಎಂದು ಕರೆ ನೀಡಿದ್ದಾರೆ ಪವನ್ ಕಲ್ಯಾಣ್.

ಇದನ್ನೂ ಓದಿ:ಭಾರತದ ಅತಿ ಹೆಚ್ಚು ಸಂಭಾವನೆ ಪಡೆವ ನಟ ನಾನೆಂದ ಪವನ್ ಕಲ್ಯಾಣ್: ಪವರ್​ಸ್ಟಾರ್ ಸಂಭಾವನೆ ಎಷ್ಟು?

ನನ್ನೊಬ್ಬನಿಂದ ತೆಲುಗು ಚಿತ್ರರಂಗ ಇಲ್ಲ. ನಾನು ಸಿನಿಮಾ ಮಾಡಿದರೆ ಐನೂರು ಜನರಿಗೆ ಉದ್ಯೋಗ ಸಿಗುತ್ತದೆ ಹಾಗಾಗಿ ಸಿನಿಮಾ ಮಾಡುತ್ತೇನೆ. ಆದರೆ ಈ ಕಾಕಿನಾಡ ಕ್ಷೇತ್ರದ ಶಾಸಕ ಎಷ್ಟು ಜನರಿಗೆ ಉದ್ಯೋಗ ಕೊಡಿಸಿದ್ದಾನೆ, ದೋಚಿಕೊಳ್ಳುವುದು ಬಿಟ್ಟರೆ ಬೇರೇನನ್ನೂ ಮಾಡಿಲ್ಲ. ಆತನಿಗೆ ಲಕ್ಷ ಕೋಟಿ ಎಲ್ಲಿಂದ ಬರುತ್ತಿದೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ಹತ್ತು ನಟರಲ್ಲಿ ನಾನೂ ಒಬ್ಬ. ನಾನು ಸಂಪಾದಿಸಿದರೆ ಮಾತ್ರವೇ ತಾನೆ ನಾನು ಹಂಚಲು ಸಾಧ್ಯ. ರೈತರಿಗೆ ಕೋಟ್ಯಂತರ ರೂಪಾಯಿ ಹಣ ಕೊಟ್ಟಿದ್ದೇನೆಂದರೆ ಅದಕ್ಕೆ ಕಾರಣ ಸಿನಿಮಾಗಳೇ, ವಕೀಲ್ ಸಾಬ್, ಭೀಮ್ಲಾ ನಾಯಕ್ ಅಂಥಹಾ ಸಿನಿಮಾ ಮಾಡಿದ್ದರಿಂದಲೇ ನನಗೆ ಆ ರೈತರಿಗೆ ಹಣ ನೀಡಲು ಸಹಾಯವಾಯಿತು” ಎಂದಿದ್ದಾರೆ ಪವನ್ ಕಲ್ಯಾಣ್.

ಸನಿಹದಲ್ಲಿರುವ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ತಮ್ಮ ಜನಸೇನಾ ಪಕ್ಷದ ಅಭ್ಯರ್ಥಿಗಳನ್ನು ಎಲ್ಲ 175 ಕ್ಷೇತ್ರಗಳಿಂದಲೂ ಕಣಕ್ಕಿಳಿಸಲು ಯೋಜಿಸಿದ್ದಾರೆ. ಸ್ವತಃ ಪವನ್ ಕಲ್ಯಾಣ್ ಈ ಬಾರಿಯೂ ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್​ರ ಒಬ್ಬ ಅಭ್ಯರ್ಥಿ ಮಾತ್ರವೇ ಜಯ ಸಾಧಿಸಿದ್ದರು. ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ ಎರಡೂ ಕ್ಷೇತ್ರಗಳಲ್ಲಿಯೂ ಸೋತಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷಕ್ಕೆ 7% ಮತ ದೊರೆತಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ