ಒಂದು ಎಪಿಸೋಡ್​ಗೆ 12 ಕೋಟಿ ಸಂಭಾವನೆ: ಯಾರು ಈ ಟಿವಿ ಸ್ಟಾರ್?

Tv Stars: ಸಿನಿಮಾ ತಾರೆಯರು ದೊಡ್ಡ ದೊಡ್ಡ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿರುತ್ತವೆ, ಆದರೆ ಟಿವಿ ಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಯಾರು?

ಒಂದು ಎಪಿಸೋಡ್​ಗೆ 12 ಕೋಟಿ ಸಂಭಾವನೆ: ಯಾರು ಈ ಟಿವಿ ಸ್ಟಾರ್?
ಸಲ್ಮಾನ್ ಖಾನ್-ಕಪಿಲ್
Follow us
ಮಂಜುನಾಥ ಸಿ.
|

Updated on:Jun 14, 2023 | 12:00 AM

ಸಿನಿಮಾ ತಾರೆಯರು (Cinema) ಒಂದೊಂದು ಸಿನಿಮಾಕ್ಕೆ ನೂರಾರು ಕೋಟಿ ಸಂಭಾವನೆ (Remuneration) ಪಡೆಯುವ ಸುದ್ದಿ ಆಗಾಗ್ಗೆ ಕೇಳುತ್ತಲೇ ಇರುತ್ತವೆ. ಶಾರುಖ್ 100 ಕೋಟಿ ಪಡೆದರಂತೆ, ಪ್ರಭಾಸ್ 150 ಅಂತೆ, ರಜನೀಕಾಂತ್ 200 ಅಂತೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಸಿನಿಮಾ ತಾರೆಯರು ಮಾತ್ರವಲ್ಲ ಟಿವಿ ತಾರೆಯರ (Tv Celebrity) ಸಂಭಾವನೆ ಸಹ ಕಡಿಮೆ ಏನಿಲ್ಲ. ಪ್ರತಿ ಎಪಿಸೋಡ್​ಗೂ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆವ ನಟರು ಭಾರತದಲ್ಲಿದ್ದಾರೆ. ಆದರೆ ಅತಿ ಹೆಚ್ಚು ಸಂಭಾವನೆ ಪಡೆವ ನಟ ಯಾರು ಗೊತ್ತೆ? ಟಿವಿ ಲೋಕದಲ್ಲಿಯೂ ಸಿನಿಮಾ ತಾರೆಯರೇ ಪ್ರಾಬಲ್ಯ ಸಾಧಿಸಿದ್ದಾರೆ.

ದಿ ಕಪಿಲ ಶರ್ಮಾ ಶೋನ ನಿರೂಪಕ ಕಪಿಲ್ ಶರ್ಮಾ ಪ್ರತಿ ಎಪಿಸೋಡ್​ಗೆ ಒಂದು ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ. ಕೆಲವು ಜನಪ್ರಿಯ ಧಾರಾವಾಹಿಯ ಮುಖ್ಯ ನಟರು ಪ್ರತಿ ಎಪಿಸೋಡ್​ಗೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಆದರೆ ಇವರ್ಯಾರೂ ಸಹ ಅತಿ ಹೆಚ್ಚು ಸಂಭಾವನೆ ಪಡೆವ ನಟರ ಪಟ್ಟಿಯಲ್ಲಿಲ್ಲ.

ಟಿವಿ ಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಸಲ್ಮಾನ್ ಖಾನ್. ಬಿಗ್​ಬಾಸ್ ಟಿವಿ ರಿಯಾಲಿಟಿ ಶೋ ನಿರೂಪಣೆ ಮಾಡುವ ಸಲ್ಮಾನ್ ಖಾನ್ ಪ್ರತಿ ಎಪಿಸೋಡ್​ಗೆ ಬರೋಬ್ಬರಿ 12.50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಸಲ್ಮಾನ್ ಖಾನ್ ಮಾತ್ರವೇ ಅಲ್ಲದೆ ಕೌನ್ ಬನೇಗಾ ಕರೋಡ್​ಪತಿ ಶೋ ನಡೆಸಿಕೊಡುವ ಅಮಿತಾಬ್ ಬಚ್ಚನ್ ಸಹ ಪ್ರತಿ ಎಪಿಸೋಡ್​ಗೆ ಸುಮಾರು 10 ಕೋಟಿ ಸಂಭಾವನೆ ಪಡೆಯುತ್ತಾರೆ. ಕಾಫಿ ವಿತ್ ಕರಣ್ ಜೋಹರ್ ಸಹ ಪ್ರತಿ ಎಪಿಸೋಡ್ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ. ಲಾಕ್ ಅಪ್ ಶೋ ನಡೆಸಿಕೊಟ್ಟಿದ್ದ ಕಂಗನಾ ರನೌತ್ ಸಹ ಭಾರಿ ಮೊತ್ತದ ಹಣವನ್ನು ಸಂಭಾವನೆಯನ್ನಾಗಿ ಪಡೆದಿದ್ದಾರೆ.

ಇದನ್ನೂ ಓದಿ:Tejasswi Prakash: ಒಂದು ಎಪಿಸೋಡ್​ಗೆ 2 ಲಕ್ಷ ರೂಪಾಯಿ ಸಂಭಾವನೆ; ಈ ಕಿರುತೆರೆ ನಟಿಗೆ ಸಖತ್ ಬೇಡಿಕೆ

ಬಾಲಿವುಡ್​ನ ಹಲವು ನಟರು ಟಿವಿಗಳಲ್ಲಿಯೂ ಶೋಗಳನ್ನು ನಡೆಸಿಕೊಡುತ್ತಾರೆ. ಶಾರುಖ್ ಖಾನ್ ಸಹ ಕೌನ್ ಬನೇಗಾ ಕರೋಡ್​ಪತಿ ಸೇರಿದಂತೆ ಇನ್ನೂ ಕೆಲವು ಶೋಗಳನ್ನು ನಡೆಸಿಕೊಟ್ಟಿದ್ದರು. ಡ್ಯಾನ್ಸ್, ಸಿಂಗಿಂಗ್ ರಿಯಾಲಿಟಿ ಶೋಗಳು ಜನಪ್ರಿಯತೆ ಪಡೆದ ಬಳಿಕ ಹಲವು ಬಾಲಿವುಡ್ ನಟರು ಶೋಗಳ ಜಡ್ಜ್​ಗಳಾಗಿ ಕಾಣಿಸಿಕೊಳ್ಳುತ್ತಿದ್ದು ಅವರು ಸಹ ಭಾರಿ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಸೀಸನ್​ಗೆ 15 ಕೋಟಿ ಸಂಭಾವನೆಯನ್ನು ನಟಿ ಶಿಲ್ಪಾ ಶೆಟ್ಟಿ ತೆಗೆದುಕೊಳ್ಳುತ್ತಾರಂತೆ.

ಕನ್ನಡದಲ್ಲಿಯೂ ಸಹ ಬಿಗ್​ಬಾಸ್ ನಿರೂಪಣೆ ಮಾಡುವ ಸುದೀಪ್ ಅವರು ಅತಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಸುದೀಪ್ ಸಹ ವಾರದ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ. ನಟ ಜಗ್ಗೇಶ್, ನಟಿ ರಕ್ಷಿತಾ, ಪ್ರೇಮ್, ವಿಜಯ್ ರಾಘವೇಂದ್ರ ಇನ್ನೂ ಕೆಲವು ತಾರೆಯರು ರಿಯಾಲಿಟಿ ಶೋ ಜಡ್ಜ್​ಗಳಾಗಿದ್ದು ಅವರೂ ಸಹ ಭಾರಿ ಮೊತ್ತದ ಸಂಭಾವನೆಯನ್ನು ಪಡೆಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:58 pm, Tue, 13 June 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್