- Kannada News Photo gallery Tajaswi Prakash Remuneration This Hindi Serial Actress getting 2 lakh Remuneration per episode
Tejasswi Prakash: ಒಂದು ಎಪಿಸೋಡ್ಗೆ 2 ಲಕ್ಷ ರೂಪಾಯಿ ಸಂಭಾವನೆ; ಈ ಕಿರುತೆರೆ ನಟಿಗೆ ಸಖತ್ ಬೇಡಿಕೆ
ತೇಜಸ್ವಿ ಪ್ರಕಾಶ್ ‘ನಾಗಿನ್ 6’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಪ್ರತಿ ಎಪಿಸೋಡ್ಗೆ ಅವರು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 2 ಲಕ್ಷ ರೂಪಾಯಿ.
Updated on: May 30, 2023 | 6:30 AM

ಕಿರುತೆರೆ ಕಲಾವಿದರಿಗೆ ಬೇಡಿಕೆ ಹೆಚ್ಚಿದೆ. ಸಿನಿಮಾ ಕಲಾವಿದರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಅನೇಕ ಕಲಾವಿದರಿದ್ದಾರೆ. ಅದರಲ್ಲೂ ಜನಪ್ರಿಯ ಧಾರಾವಾಹಿಗಳಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದರಂತೂ ಮುಗಿದೇ ಹೋಯಿತು. ಈಗ ಹಿಂದಿ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಅವರ ಸಂಭಾವನೆ ಸುದ್ದಿ ಸಖತ್ ಸದ್ದು ಮಾಡುತ್ತಿದೆ.

ತೇಜಸ್ವಿ ಪ್ರಕಾಶ್ ‘ನಾಗಿನ್ 6’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಪ್ರತಿ ಎಪಿಸೋಡ್ಗೆ ಅವರು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 2 ಲಕ್ಷ ರೂಪಾಯಿ. ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ.

ತೇಜಸ್ವಿ ಪ್ರಕಾಶ್ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ‘ಬಿಗ್ ಬಾಸ್ ಹಿಂದಿ ಸೀಸನ್ 15’ರಲ್ಲಿ ಪಾಲ್ಗೊಂಡ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಇವರು ಟ್ರೋಫಿ ಕೂಡ ಗೆದ್ದರು.

ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಅವರಿಗೆ ‘ನಾಗಿನ್ 6’ ಆಫರ್ ಬಂತು ಎನ್ನಲಾಗಿದೆ. ಈ ಆಫರ್ ಒಪ್ಪಿ ಅವರು ನಟಿಸುತ್ತಿದ್ದಾರೆ. ಪ್ರತಿ ಎಪಿಸೋಡ್ಗೆ ಅವರು 2 ಲಕ್ಷ ರೂಪಾಯಿ ಪಡೆಯುತ್ತಿರುವುದಾಗಿ ಇಟೈಮ್ಸ್ ವರದಿ ಮಾಡಿದೆ.

ತೇಜಸ್ವಿ ಪ್ರಕಾಶ್ ಅವರು 2012ರಲ್ಲಿ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದರು. ಹಲವು ರಿಯಾಲಿಟಿ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.




