‘ಟಾಕ್ಸಿಕ್’ ರಿಲೀಸ್ ಮುಂದೂಡಿಕೆ: ಲಾಭ ಪಡೆಯಲು ಮುಂದಾದ ಪವನ್ ಕಲ್ಯಾಣ್

Pawan Kalyan movie: ಮಾರ್ಚ್ 19ಕ್ಕೆ ಬಿಡುಗಡೆ ಆಗಬೇಕಿದ್ದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿರುವುದರಿಂದ ಅದರ ಲಾಭ ಪಡೆಯಲು ಕೆಲ ಸಿನಿಮಾಗಳು ಮುಂದಾಗಿವೆ. ಈಗಾಗಲೇ ಡಾರ್ಲಿಂಗ್ ಕೃಷ್ಣ ಅವರು ತಮ್ಮ ‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಮಾರ್ಚ್ 19ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದೀಗ ತೆಲುಗು ಸಿನಿಮಾ ಒಂದು ಸಹ ಈಗಾಗಲೇ ಘೋಷಣೆಯಾಗಿದ್ದ ದಿನಾಂಕಕ್ಕಿಂತಲೂ ಮುಂಚಿತವಾಗಿ ಬಿಡುಗಡೆ ಮಾಡಲು ಯೋಜನೆ ಹಾಕಿದ್ದಾರೆ.

‘ಟಾಕ್ಸಿಕ್’ ರಿಲೀಸ್ ಮುಂದೂಡಿಕೆ: ಲಾಭ ಪಡೆಯಲು ಮುಂದಾದ ಪವನ್ ಕಲ್ಯಾಣ್
Ustad Bhagat Singh

Updated on: Mar 04, 2026 | 5:53 PM

ಯಶ್ (Yash) ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಬಿಡುಗಡೆ ಮುಂದೂಡಲ್ಪಟ್ಟಿದೆ. ಮಾರ್ಚ್ 19ಕ್ಕೆ ಬಿಡುಗಡೆ ಆಗಬೇಕಿದ್ದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿರುವುದರಿಂದ ಅದರ ಲಾಭ ಪಡೆಯಲು ಕೆಲ ಸಿನಿಮಾಗಳು ಮುಂದಾಗಿವೆ. ಈಗಾಗಲೇ ಡಾರ್ಲಿಂಗ್ ಕೃಷ್ಣ ಅವರು ತಮ್ಮ ‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಮಾರ್ಚ್ 19ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದೀಗ ತೆಲುಗು ಸಿನಿಮಾ ಒಂದು ಸಹ ಈಗಾಗಲೇ ಘೋಷಣೆಯಾಗಿದ್ದ ದಿನಾಂಕಕ್ಕಿಂತಲೂ ಮುಂಚಿತವಾಗಿ ಬಿಡುಗಡೆ ಮಾಡಲು ಯೋಜನೆ ಹಾಕಿದ್ದಾರೆ.

ಆಂಧ್ರ ಡಿಸಿಎಂ ಸಹ ಆಗಿರುವ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಹಲವು ಬಾರಿ ರಿಲೀಸ್ ಮುಂದೂಡಿಕೆಗಳ ಬಳಿಕ ಅಂತಿಮವಾಗಿ ಮಾರ್ಚ್ 26ರಂದು ಬಿಡುಗಡೆ ಆಗುವುದಾಗಿ ಘೋಷಿಸಲಾಗಿತ್ತು. ಮಾರ್ಚ್ 19 ರಂದು ‘ಟಾಕ್ಸಿಕ್’ ಬಿಡುಗಡೆ ಇದ್ದ ಕಾರಣಕ್ಕಾಗಿಯೇ ಒಂದು ವಾರ ತಡವಾಗಿ ಸಿನಿಮಾವನ್ನು ಬಿಡುಗಡೆ ಮಾಡುವ ನಿರ್ಧಾರ ಮಾಡಲಾಗಿತ್ತು. ಆದರೆ ಈಗ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿರುವ ಕಾರಣ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಒಂದು ವಾರ ಮುಂಚಿತವಾಗಿ ಅಂದರೆ ಮಾರ್ಚ್ 19ರಂದೇ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಮಾರ್ಚ್ 19 ಹಿಂದೂಗಳ ಹೊಸ ವರ್ಷವಾದ ಯುಗಾದಿ ಹಬ್ಬವಿದ್ದು ಸತತ ರಜೆ ಸಹ ಇದೆ. ಹಾಗಾಗಿ ಚಿತ್ರತಂಡಗಳು ಆ ದಿನಾಂಕದ ಮೇಲೆ ಕಣ್ಣಿಟ್ಟಿವೆ. ಮೊದಲಿಗೆ ‘ಟಾಕ್ಸಿಕ್’ ಸಿನಿಮಾ ಸಹ ಇದೇ ಕಾರಣಕ್ಕೆ ಮಾರ್ಚ್ 19ನ್ನು ಬಿಡುಗಡೆಗೆ ಆಯ್ಕೆ ಮಾಡಿತ್ತು. ಆದರೆ ಈಗ ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಭೀತಿಯ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಹೊಸ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಅದೇ ದಿನ ಹಿಂದಿಯ ಬಹು ನಿರೀಕ್ಷಿತ ಸಿನಿಮಾ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ದಕ್ಷಿಣದಲ್ಲಿ ‘ಧುರಂಧರ್ 2’ ಸಿನಿಮಾಕ್ಕೆ ಹೆಚ್ಚಿನ ಹೈಪ್ ಸಾಮಾನ್ಯವಾಗಿ ಇರುವುದಿಲ್ಲವಾದ್ದರಿಂದ ಪವನ್ ಕಲ್ಯಾಣ್ ಅವರು ‘ಧುರಂಧರ್ 2’ ಎದುರು ತಮ್ಮ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಅಲ್ಲದೆ, ‘ಟಾಕ್ಸಿಕ್’ ರೀತಿ ಅವರದ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಅವರ ಸಿನಿಮಾ ಮಾರುಕಟ್ಟೆ ದಕ್ಷಿಣ ಭಾರತ ಮಾತ್ರವೇ ಆಗಿರುವ ಕಾರಣ ಅವರಿಗೆ ‘ಧುರಂಧರ್ 2’ ಎದುರು ಸ್ಪರ್ಧೆ ಮಾಡುವುದು ಕಷ್ಟವೇನೂ ಅಲ್ಲ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ, ಪವನ್ ಅವರು ಚುನಾವಣೆಗೆ ಮುಂಚೆ ಚಿತ್ರೀಕರಣ ಆರಂಭಿಸಿದ ಸಿನಿಮಾಗಳಲ್ಲಿ ಕೊನೆಯ ಸಿನಿಮಾ ಆಗಿದೆ. ಈ ಸಿನಿಮಾವನ್ನು ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಕನ್ನಡತಿ ಶ್ರೀಲೀಲಾ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us