ನ.17ಕ್ಕೆ ‘ಮಂಗಳವಾರಂ’ ಬಿಡುಗಡೆ; ‘ಆರ್‌ಎಕ್ಸ್‌ 100’ ನಿರ್ದೇಶಕನ ಜತೆ ಮತ್ತೆ ಕೈ ಜೋಡಿಸಿದ ಪಾಯಲ್​ ರಜಪೂತ್​

ಈವರೆಗೂ ನಿರ್ದೇಶಕನಾಗಿ ಗಮನ ಸೆಳೆದಿದ್ದ ಅಜಯ್ ಭೂಪತಿ ಅವರು ‘ಮಂಗಳವಾರಂ’ ಸಿನಿಮಾದಿಂದ ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದಾರೆ. ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದೆ. ನವೆಂಬರ್ 17ರಂದು ತೆಲುಗಿನ ಜೊತೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ನ.17ಕ್ಕೆ ‘ಮಂಗಳವಾರಂ’ ಬಿಡುಗಡೆ; ‘ಆರ್‌ಎಕ್ಸ್‌ 100’ ನಿರ್ದೇಶಕನ ಜತೆ ಮತ್ತೆ ಕೈ ಜೋಡಿಸಿದ ಪಾಯಲ್​ ರಜಪೂತ್​
ಪಾಯಲ್​ ರಜಪೂತ್​

Updated on: Sep 26, 2023 | 2:56 PM

ತೆಲುಗಿನ ‘ಆರ್​ಎಕ್ಸ್​ 100’ ಸಿನಿಮಾ 2018ರಲ್ಲಿ ಬಿಡುಗಡೆಯಾಗಿ ಸಖತ್​ ಸದ್ದು ಮಾಡಿತ್ತು. ಈ ಸಿನಿಮಾಗೆ ನಿರ್ದೇಶಕ ಅಜಯ್ ಭೂಪತಿ (Ajay Bhupathi) ಅವರು ಆ್ಯಕ್ಷನ್​-ಕಟ್​ ಹೇಳಿದ್ದರು. ಈಗ ಅವರು ‘ಮಂಗಳವಾರಂ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ‘ಆರ್​ಎಕ್ಸ್​ 100’ ಚಿತ್ರದಲ್ಲಿ ನಟಿ ಪಾಯಲ್​ ರಜಪೂತ್​ (Payal Rajput) ಅವರು ಬೋಲ್ಡ್​ ಆದಂತಹ ಪಾತ್ರ ಮಾಡಿದ್ದರು. ಈಗ ಅವರು ಮತ್ತೊಮ್ಮೆ ನಿರ್ದೇಶಕ ಅಜಯ್​ ಭೂಪತಿ ಜೊತೆ ಕೈಜೋಡಿಸಿದ್ದು, ‘ಮಂಗಳವಾರಂ’ ಸಿನಿಮಾದಲ್ಲೂ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಟೀಸರ್​ ಮೂಲಕ ಭಾರಿ ಕೌತುಕ ಸೃಷ್ಟಿ ಮಾಡಿರುವ ಈ ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್​ ಆಗಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನವೆಂಬರ್ 17ರಂದು ‘ಮಂಗಳವಾರಂ’ ಸಿನಿಮಾ (Mangalavaram Movie) ರಿಲೀಸ್​ ಆಗಲಿದೆ.

ಟಾಲಿವುಡ್​ನಲ್ಲಿ ನಿರ್ದೇಶಕ ಅಜಯ್ ಭೂಪತಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. ‘ಆರ್​ಎಕ್ಸ್ 100’ ಚಿತ್ರದಿಂದ ಅವರಿಗೆ ಅಂತಹ ಜನಪ್ರಿಯತೆ ಸಿಕ್ಕಿದೆ. ಈಗ ಅವರು ‘ಮಂಗಳವಾರಂ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಮಾತ್ರವಲ್ಲದೇ ದೇಶಾದ್ಯಂತ ಹವಾ ಮಾಡಲು ಹೊರಟಿದ್ದಾರೆ. ಸ್ವಾತಿ ಗುಣಪತಿ ಹಾಗೂ ಸುರೇಶ್ ವರ್ಮಾ ಅವರ ‘ಮುದ್ರಾ ಮೀಡಿಯಾ ವರ್ಕ್ಸ್’ ಮತ್ತು ಅಜಯ್ ಭೂಪತಿ ಒಡೆತನದ ‘ಎ ಕ್ರಿಯೇಟಿವ್ ವರ್ಕ್ಸ್’ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

ಇದನ್ನೂ ಓದಿ: ಹಾಟ್ ಫೋಟೋಶೂಟ್​​ನಲ್ಲಿ ಮಿಂಚಿದ ಪಾಯಲ್ ರಜಪೂತ್

ಇಷ್ಟು ವರ್ಷಗಳ ಕಾಲ ನಿರ್ದೇಶಕನಾಗಿ ಗಮನ ಸೆಳೆದಿದ್ದ ಅಜಯ್ ಭೂಪತಿ ಅವರು ‘ಮಂಗಳವಾರಂ’ ಸಿನಿಮಾದಿಂದ ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದಾರೆ. ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದೆ. ನವೆಂಬರ್ 17ರಂದು ತೆಲುಗಿನ ಜೊತೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿ ‘ಮಂಗಳವಾರಂ’ ಬಿಡುಗಡೆ ಆಗಲಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್​ ಮತ್ತು ಟೀಸರ್​ ಗಮನ ಸೆಳೆದಿದೆ.

ಇದನ್ನೂ ಓದಿ: ‘ಈ ನೋಟವೇ ತುಂಬ ವಿಷಯ ಹೇಳುತ್ತೆ’: ಟಾಪ್​ಲೆಸ್​ ಆಗಿ ಪೋಸ್ ನೀಡಿದ ಪಾಯಲ್​ ರಜಪೂತ್​

ಪಾಯಲ್ ರಜಪೂತ್ ಜೊತೆ ಶ್ರೀತೇಜ್, ಅಜಯ್ ಘೋಷ್, ಚೈತನ್ಯ ಕೃಷ್ಣ, ಲಕ್ಷ್ಮಣ್ ಸೇರಿದಂತೆ ಹಲವು ಕಲಾವಿದರು ‘ಮಂಗಳವಾರಂ’ ಸಿನಿಮಾದಲ್ಲಿ ನಟಿಸಿದ್ದಾರೆ. ದಶರಥಿ ಶಿವೇಂದ್ರ ಅವರ ಛಾಯಾಗ್ರಹಣ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಾಯಿಕುಮಾರ್ ಯಡವಲ್ಲಿ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೊಂದು ರಗಡ್​ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದೆ. ವಿಶೇಷ ಏನೆಂದರೆ, ಕನ್ನಡಿಗ ಅಜನೀಶ್​ ಲೋಕನಾಥ್​ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.